ಕೇವಲ 699 ರೂ.ಗೆ ಲಭ್ಯವಾಗಲಿದೆ Motorola ದ 5G ಸ್ಮಾರ್ಟ್‌ಫೋನ್.

ಮೊಟೊರೊಲಾ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಕಡಿಮೆ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್ ಖರೀದಿಸುವ  ಬಗ್ಗೆ ಯೋಚಿಸುತ್ತಿದ್ದರೆ  ಇಂದು ಸುವರ್ಣಾವಕಾಶವಿದೆ.

  • ನೀವೂ ಕೂಡ ಕಡಿಮೆ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಇಂದು ಒಳ್ಳೆಯ ಅವಕಾಶವಿದೆ.
  • ಮೊಟೊರೋಲಾ ಕಂಪನಿಯಲ್ಲಿ ಮೋಟೋ ಡೇಸ್ ಸೇಲ್ ಶುರುವಾಗಿದ್ದು ಇಂದು ಈ ಮಾರಾಟದ ಕೊನೆಯ ದಿನವಾಗಿದೆ.
  • ಈ ಸೇಲ್ನಲ್ಲಿ ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ಇದು ಸ್ಮಾರ್ಟ್‌ಫೋನ್‌ಗಳ ಯುಗ. ಪ್ರಸ್ತುತ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್‌ಫೋನ್‌ಗಳದ್ದೇ ಹಾವಳಿ. ನೀವೂ ಕೂಡ ಕಡಿಮೆ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್‌ಗಳನ್ನು  ಖರೀದಿಸಲು ಯೋಚಿಸುತ್ತಿದ್ದರೆ ಇಂದು ಒಳ್ಳೆಯ ಅವಕಾಶವಿದೆ. ಮೊಟೊರೋಲಾ ಕಂಪನಿಯಲ್ಲಿ ಮೋಟೋ ಡೇಸ್ ಸೇಲ್ ಶುರುವಾಗಿದ್ದು ಇಂದು ಈ ಮಾರಾಟದ ಕೊನೆಯ ದಿನವಾಗಿದೆ. ಈ ಸೇಲ್ನಲ್ಲಿ  ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಮಾರಾಟದಲ್ಲಿ ಮೋಟೊರೋಲಾದ ಅತ್ಯಂತ ಸ್ಫೋಟಕ 5ಜಿ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಕೊಡುಗೆ ಲಭ್ಯವಾಗುತ್ತಿದೆ. 

ಮೋಟೋ ಡೇಸ್ ಸೇಲ್: 
ಮೋಟೊರೋಲಾದ MOTOROLA G62 5G (128 GB) ಫೋನ್ ಮೂಲ ಬೆಲೆ 21,999 ರೂ. ಆಗಿದೆ.  ಈ ಫೋನ್ ಮೇಲೆ ಶೇ.31 ರಷ್ಟು ರಿಯಾಯಿತಿ ಲಭ್ಯವಿದ್ದು 14,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ವಿನಿಮಯ ಕೊಡುಗೆಯ ಲಾಭವನ್ನು ಪಡೆಯುವ ಮೂಲಕ ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಇದನ್ನು ಖರೀದಿಸಬಹುದಾಗಿದೆ. 

MOTOROLA G62 5ಜಿ ಸ್ಮಾರ್ಟ್‌ಫೋನ್ ಖರೀದಿಯಲ್ಲಿ 14,300 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ. ನೀವು ಉತ್ತಮ ಗುಣಮಟ್ಟದ ನಿಮ್ಮ ಲೇಟೆಸ್ಟ್ ಮಾಡೆಲ್ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಇಷ್ಟು ರಿಯಾಯಿತಿಯನ್ನು ಪಡೆಯಬಹುದು. ಇದರೊಂದಿಗೆ ನೀವು ಈ 5ಜಿ ಸ್ಮಾರ್ಟ್‌ಫೋನ್ ಅನ್ನು 699 ರೂ.ಗಳಿಗೆ ಖರೀದಿಸಬಹುದಾಗಿದೆ. 

ಒಂದೊಮ್ಮೆ ನಿಮಗೆ ವಿನಿಮಯ ಕೊಡುಗೆ ಸಾಧ್ಯವಾಗದಿದ್ದರೂ ಕೂಡ ಬ್ಯಾಂಕ್ ಆಫರ್ ಅನ್ನು ಕೂಡ ಪಡೆಯಬಹುದು. ನೀವು ಫೆಡರಲ್ ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸಿ ಖರೀದಿಸಿದರೆ 750 ರೂ.ಗಳ ತ್ವರಿತ ರಿಯಾಯಿತಿ ಕೂಡ ಲಭ್ಯವಾಗಲಿದೆ.  ಇದರೊಂದಿಗೆ ನೀವು ಫೋನ್ ಅನ್ನು 14,249 ರೂ.ಗಳಿಗೆ ನಿಮ್ಮದಾಗಿಸಬಹುದಾಗಿದೆ.

Source: https://zeenews.india.com/kannada/technology/motorolas-5g-smartphone-will-be-available-for-just-rs-699-113936

Leave a Reply

Your email address will not be published. Required fields are marked *