MPL: 11 ಬಡರ 4 ಸಕಸರ; ಟ20ಯಲಲ ಚಚಚಲ ಶತಕ ಸಡಸ 2 ದಖಲ ಬರದ ಅಕತ..!

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಜೂನ್ 17 ರಂದು ನಡೆದ ಪಂದ್ಯದಲ್ಲಿ 30 ವರ್ಷದ ಅಂಕಿತ್ ಬಾವ್ನೆ ಚೊಚ್ಚಲ ಟಿ20 ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಕೊಲ್ಹಾಪುರ ಟಸ್ಕರ್ಸ್‌ ತಂಡದ ಪರ ಕಣಕ್ಕಿಳಿದಿದ್ದ ಅಂಕಿತ್, ರತ್ನಗಿರಿ ಜೆಟ್ಸ್ ತಂಡದ ವಿರುದ್ಧ ಸ್ಫೋಟಕ ಶತಕ ಸಿಡಿಸಿದರು.ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರತ್ನಗಿರಿ ಜೆಟ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತ್ತು. ತಂಡದ ಪರ ಪ್ರೀತಂ ಪಾಟೀಲ್ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 69 ರನ್ ಚಚ್ಚಿದರು.177 ರನ್‌ಗಳ ಗುರಿ ಬೆನ್ನತ್ತಿದ ಕೊಲ್ಹಾಪುರ ಟಸ್ಕರ್ಸ್ ತಂಡ ಅಂಕಿತ್ ಅವರ ಸ್ಫೋಟಕ  ಶಕತದಿಂದಾಗಿ 20 ಓವರ್‌ಗಳಲ್ಲಿ 2 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ ಕಳೆದುಕೊಂಡು 181 ರನ್ ಬಾರಿಸಿತು. ಈ ಮೂಲಕ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದುಕೊಂಡಿತು.ಅಂಕಿತ್ 98 ರನ್ ಗಳಿಸಿ ಆಡುತ್ತಿದ್ದಾಗ ಸಿಕ್ಸರ್ ಬಾರಿಸುವ ಮೂಲಕ ಶತಕದ ಹೊಸ್ತಿಲು ದಾಟಿದರು. ಈ ಶತಕ ಪೂರೈಸಲು ಅವರು 59 ಎಸೆತಗಳನ್ನು ಎದುರಿಸಿದರು. ಈ ವೇಳೆ ಅವರು 11 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಬಾರಿಸಿದರು.ಅಂಕಿತ್ ತಮ್ಮ ಶತಕವನ್ನು ಪೂರ್ಣಗೊಳಿಸಿದ ಸಿಕ್ಸರ್ ಅವರ ಇನ್ನಿಂಗ್ಸ್‌ನ ಕೊನೆಯ ಸಿಕ್ಸರ್ ಆಗಿತ್ತು. ಅಂಕಿತ್ ಪಂದ್ಯದಲ್ಲಿ ಕೊನೆಯವರೆಗೂ ಅಜೇಯರಾಗಿ ಉಳಿದು 60 ಎಸೆತಗಳಲ್ಲಿ ಒಟ್ಟು 105 ರನ್ ಬಾರಿಸಿದರು. ಈ ಶತಕದೊಂದಿಗೆ ಎರಡು ದಾಖಲೆಗಳನ್ನು ನಿರ್ಮಿಸಿದರು. ಮೊದಲನೆಯದಾಗಿ, ಇದು ಅವರ ಟಿ20 ವೃತ್ತಿಜೀವನದ ಮೊದಲ ಶತಕ ಮತ್ತು ಎರಡನೆಯದಾಗಿ, ಎಂಪಿಎಲ್ ಇತಿಹಾಸದಲ್ಲಿ ಇದು ಮೊದಲ ಶತಕವಾಗಿ ದಾಖಲಾಗಿದೆ.ಇನ್ನು ಅಂಕಿತ್ ಬಾವ್ನೆ ಅವರ ಪ್ರಥಮ ದರ್ಜೆ ಕ್ರಿಕೆಟ್‌ ಸಾಧನೆ ನೋಡುವುದಾದರೆ, ಬಾವ್ನೆ ಫಸ್ಟ್ ಕ್ಲಾಸ್ ಮತ್ತು ಲಿಸ್ಟ್ ಎ ಸೇರಿದಂತೆ ಒಟ್ಟು 32 ಶತಕಗಳನ್ನು ಬಾರಿಸಿದ್ದಾರೆ. ಇದೀಗ ಟಿ20 ಮಾದರಿಯಲ್ಲಿ ಚೊಚ್ಚಲ ಶತಕ ಸಿಡಿಸುವುದರೊಂದಿಗೆ ಅಂಕಿತ್ ಬಾವ್ನೆ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು.

source https://tv9kannada.com/photo-gallery/cricket-photos/mpl-2023-ankit-bawne-hits-first-century-of-his-t20-career-psr-603229.html

Leave a Reply

Your email address will not be published. Required fields are marked *