ಪರಿಶಿಷ್ಟರಿಗೆ ಮುಖ್ಯಮಂತ್ರಿ ಪದವಿ ನೀಡಿ :  ಶ್ರೀ ಬವಸನಾಗಿದೇವ ಶರಣರು

 

ವರದಿ ಮತ್ತು ಫೋಟೋ ಕೃಪೆ
          ಸುರೇಶ್ ಪಟ್ಟಣ್,                         
ಮೊ : 87220 22817

ಚಿತ್ರದುರ್ಗ,(ಮೇ.15) : ಕಾಂಗ್ರೆಸ್ ಸರ್ಕಾರದಲ್ಲಿ ಪರಿಶಿಷ್ಟರನ್ನು ಮುಖ್ಯಮಂತ್ರಿಯನ್ನು ಮಾಡುವಂತೆ ಶ್ರೀ ಛಲವಾದಿ ಗುರುಪೀಠದ ಶ್ರೀ ಬವಸನಾಗಿದೇವ ಶರಣರು ಕೆಪಿಸಿಸಿ ಮತ್ತು ಎಐಸಿಸಿ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರನ್ನು ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಪರಿಶಿಷ್ಟರಲ್ಲಿ ಯಾರೂ ಸಹಾ ಮುಖ್ಯಮಂತ್ರಿಗಳಾಗಿಲ್ಲ ಇದುವರೆವಿಗೂ ದಲಿತ ಮುಖ್ಯಮಂತ್ರಿ ಎಂದು ಕೂಗು ಕೇಳಿ ಬರುತ್ತಿತು. ಈಗ ಪರಿಶಿಷ್ಟರ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ನಾವು ಒತ್ತಾಯ ಮಾಡುತ್ತಿದ್ದೆವೆ ಎಂದ ಶ್ರೀಗಳು ಇದರಲ್ಲಿ ಡಾ.ಜಿ.ಪರಮೇಶ್ವರರವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಬೇಕಿದೆ ಅವರು ಪಕ್ಷಕ್ಕಾಗಿ ತಮ್ಮ ಜೀವವನ್ನು ಸವಿಸಿದ್ದಾರೆ. ಅಲ್ಲದೆ ಈ ಚುನಾವಣೆಯ ಪ್ರನಾಳಿಕ ಅಧ್ಯಕ್ಷರಾಗಿ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ ಈ ಪ್ರನಾಳಿಕೆಯಿಂದ ಜನತೆ ಹೆಚ್ಚಿನ ಮತವನ್ನು ನೀಡಿದ್ದಾರೆ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದೆ ಎಂದರು.

ಈಗ ಚುನಾಯಿತರಾಗಿರುವವರಲ್ಲಿ ಬಲಗೈ ಸಮುದಾಯದಲ್ಲಿ ಪರಮೇಶ್ವರ ರವರು ಇದ್ದಾರೆ. ಸಿ.ಎಂ.ಸ್ಥಾನಕ್ಕೆ ಅರ್ಹವಾದ ವ್ಯಕ್ತಿಯಾಗಿದ್ದಾರೆ. ಇದುವರೆವಿಗೂ ಈ ಪದವಿಯಿಂದ ವಂಚಿತರಾಗಿದ್ದಾರೆ.

ಉತ್ತಮವಾದ ವ್ಯಕಿತ್ವವನ್ನು ಹೊಂದಿದ ರಾಜಕಾರಣಿಯಾಗಿದ್ದಾರೆ. ಇವರು ಸಿಎಂ ಆದರೆ ಉತ್ತಮವಾದ ಆಡಳಿತವನ್ನು ನೀಡುತ್ತಾರೆ ಎಂಬ ಭರವಸೆ ಇದೆ. ಇದರ ಬಗ್ಗೆ ಎಐಸಿಸಿಗೆ ಮೇಲ್ ಮೂಲಕ ನಮ್ಮ ಮನವಿಯನ್ನು ಸಲ್ಲಿಸಲಾಗುವುದು. ಅವರು ಸಿಎಂ ಮಾಡುವಲ್ಲಿ ಮಠದಿಂದ ಯಾವುದೇ ಹೋರಾಟ ಇರುವುದಿಲ್ಲ, ಮಠದ ಭಕ್ತು ಏನಾದರೂ ಹೋರಾಟವನ್ನು ಹಮ್ಮಿಕೊಂಡರೆ ಅದಕ್ಕೆ ಬೆಂಬಲವನ್ನು ನೀಡುವುದಾಗಿ ಬಸವನಾಗಿದೇವ ಶ್ರೀಗಳು ತಿಳಿಸಿದರು.

ಸಮಾಜದ ಮುಖಂಡರು ನಗರಸಭೆಯ ಮಾಜಿ ಅಧ್ಯಕ್ಷರಾದ ನಿರಂಜನ ಮೂರ್ತಿ ಮಾತನಾಡಿ, ಚುನಾವಣೆ ಮತ್ತು ಮಂತ್ರಿ ಸ್ಥಾನ ನೀಡುವಾಗ ಜಾತಿ ಆಧಾರದ ಮೇಲೆ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಪರಿಶಿಷ್ಟರಿಗೆ ಈ ಬಾರಿ ಮುಖ್ಯಮಂತ್ರಿ ಸ್ಥಾನವನ್ನು ನೀಡುವಂತೆ ಆಗ್ರಹಿಸಿದ್ದು, ಡಿಕೆಶಿ ಮತ್ತು ಸಿದ್ದರಾಮಯ್ಯ ರವರಲ್ಲಿ ಯಾರೇ ಮುಖ್ಯಮಂತ್ರಿಗಳಾದರೂ ಸಃಆ ಅಭ್ಯಂತರ ಇಲ್ಲ ಅದರೂ ಸಹಾ ಪರಿಶಿಷ್ಟರಿಗೆ ನೀಡುವಂತೆ ಪ್ರಸ್ತಾಪ ಬಂದಾಗ ಪರಮೇಶ್ವರರವರನ್ನು ಆಯ್ಕೆ ಮಾಡುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಗೋಷ್ಟಿಯಲ್ಲಿ ನಿರಂಜನ, ಅರುಣ್ ಕುಮಾರ್ ಭಾಗವಹಿಸಿದ್ದರು.

The post ಪರಿಶಿಷ್ಟರಿಗೆ ಮುಖ್ಯಮಂತ್ರಿ ಪದವಿ ನೀಡಿ :  ಶ್ರೀ ಬವಸನಾಗಿದೇವ ಶರಣರು first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/waOXA5J
via IFTTT

Leave a Reply

Your email address will not be published. Required fields are marked *