MS Dhoni Angry: ಪಂದ್ಯದ ಮಧ್ಯೆ ತಾಳ್ಮೆ ಕಳೆದುಕೊಂಡ ಧೋನಿ: ಎಂಎಸ್​ಡಿ ಕೋಪಕಂಡು ತಬ್ಬಿಬ್ಬಾದ ಸಿಎಸ್​ಕೆ ಬೌಲರ್

MS Dhoni Angry: ಪಂದ್ಯದ ಮಧ್ಯೆ ತಾಳ್ಮೆ ಕಳೆದುಕೊಂಡ ಧೋನಿ: ಎಂಎಸ್​ಡಿ ಕೋಪಕಂಡು ತಬ್ಬಿಬ್ಬಾದ ಸಿಎಸ್​ಕೆ ಬೌಲರ್
MS Dhoni Angry RR vs CSK

ಇಂಡಿಯನ್ ಪ್ರೀಮಿಯರ್ ಲೀಗ್​ 2023 ರಲ್ಲಿ (IPL 2023) ಗುರುವಾರ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (RR vs CSK) ನಡುವಣ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಈ ಹೈವೋಲ್ಟೇಜ್ ಮ್ಯಾಚ್​ನಲ್ಲಿ ಸಂಜು ಸ್ಯಾಮ್ಸನ್ ಪಡೆ 32 ರನ್​ಗಳ ಜಯ ಸಾಧಿಸಿ ಟೇಬಲ್ ಟಾಪರ್ ಆಯಿತು. ಇತ್ತ ಸೋತ ಸಿಎಸ್​ಕೆ ಮೂರನೇ ಸ್ಥಾನಕ್ಕೆ ಕುಸಿದಿದೆ. 203 ರನ್​ಗಳ ರನ್​ಗಳ ಟಾರ್ಗೆಟ್ ಬೆನ್ನಟ್ಟುವಲ್ಲಿ ಧೋನಿ ಪಡೆ ವಿಫಲವಾಯಿತು. ಎದುರಾಳಿಯ ಸ್ಫೋಟಕ ಬ್ಯಾಟಿಂಗ್​ಗೆ ಬ್ರೇಕ್ ಹಾಕಲು ಸಿಎಸ್​ಕೆಗೆ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಚೆನ್ನೈ ನಾಯಕ ಎಂಎಸ್ ಧೋನಿ (MS Dhoni) ತಾಳ್ಮೆ ಕಳೆದುಕೊಂಡ ಘಟನೆ ಕೂಡ ನಡೆಯಿತು.

ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಆರ್​ಆರ್​- ಸಿಎಸ್​ಕೆ ನಡುವಣ ಪಂದ್ಯದಲ್ಲಿ ಕೋಪಗೊಂಡ ಅಪರೂಪದ ಘಟನೆ ನಡೆಯಿತು. 16ನೇ ಓವರ್‌ನಲ್ಲಿ ಮಥೀಶ ಪತಿರಾನ ಅವರು ಶಿಮ್ರಾನ್ ಹೆಟ್ಮೇರ್​ಗೆ ಸ್ಲೋವರ್ ಬೌನ್ಸರ್ ಎಸೆದರು. ಚೆಂಡು ಬ್ಯಾಟ್​ಗೆ ಸರಿಯಾಗಿ ಟೈಮ್ ಆಗದ ಕಾರಣ ಹೆಟ್ಮೇರ್ ದೇಹಕ್ಕೆ ತಗುಲಿ ಸ್ಟಂಪ್ ಹಿಂದೆ ಹೋಯಿತು. ತಕ್ಷಣವೆ ಚೆಂಡನ್ನು ಎತ್ತಿಕೊಂಡ ಧೋನಿ ನೇರವಾಗಿ ಬೌಲರ್‌ನ ತುದಿಯಲ್ಲಿರುವ ಸ್ಟಂಪ್‌ಗೆ ಎಸೆದರು.

IPL 2023: RCB ಪ್ಲೇಯಿಂಗ್​ 11 ಬದಲಿಸದಿರಲು ಇದುವೇ ಅಸಲಿ ಕಾರಣ..!

ಆದರೆ, ಪತಿರಾನ ವಿಕೆಟ್​ಗೆ ಅಡ್ಡವಾಗಿ ನಿಂತಿದ್ದರಿಂದ ಚೆಂಡು ಸ್ಟಂಪ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಅಲ್ಲದೆ ವಿಕೆಟ್​ಗೆ ಬೀಳಲಿದ್ದ ಚೆಂಡನ್ನು ಸಿಎಸ್​ಕೆ ಬೌಲರ್​ ಕೈಯಲ್ಲಿ ಹಿಡಿಯಲು ಯತ್ನಿಸಿದರು. ಇದರಿಂದ ಕೋಪಗೊಂಡ ಧೋನಿ ಶ್ರೀಲಂಕಾದ ಯುವ ವೇಗಿಯ ಮೇಲೆ ಹರಿಹಾಯ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು 19ನೇ ಓವರ್​ನಲ್ಲಿ ಕೂಡ ಧೋನಿ ಮತ್ತೊಮ್ಮೆ ತಾಳ್ಮೆ ಕಳೆದುಕೊಂಡರು.

 

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಸ್ಫೋಟಕ ಆರಂಭ ಪಡೆದುಕೊಂಡಿತು. ಜೋಸ್ ಬಟ್ಲರ್ ಜೊತೆಗೂಡಿ ಯಶಸ್ವಿ ಜೈಸ್ವಾಲ್ ಮನಬಂದಂತೆ ಬ್ಯಾಟ್ ಬೀಸಿದರು. ಬಟ್ಲರ್ 21 ಎಸೆತಗಳಲ್ಲಿ 27 ರನ್ ಗಳಿಸಿದರೆ, ಜೈಸ್ವಾಲ್ ಕೇವಲ 43 ಎಸೆತಗಳಲ್ಲಿ 8 ಫೋರ್, 4 ಸಿಕ್ಸರ್ ಸಿಡಿಸಿ 77 ರನ್ ಚಚ್ಚಿದರು. ಧ್ರುವ್ ಜೂರೆಲ್ 15 ಎಸೆತಗಳಲ್ಲಿ 34 ಹಾಗೂ ದೇವದತ್ ಪಡಿಕ್ಕಲ್ ಅಜೇಯ 27 ರನ್ ಕಲೆಹಾಕಿದರು. ಆರ್​ಆರ್ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಸಿಎಸ್​ಕೆ ಪರ ತುಷಾರ್ ದೇಶ್​ಪಾಂಡೆ 2 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಸಿಎಸ್​ಕೆ ಈ ಬಾರಿ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಫಾರ್ಮ್​ನಲ್ಲಿದ್ದ ಡೆವೋನ್ ಕಾನ್ವೆ (8) ಹಾಗೂ ಅಜಿಂಕ್ಯಾ ರಹಾನೆ (15) ಬೇಗನೆ ಔಟಾದರು. ಆದರೆ, ರುತುರಾಜ್ ಗಾಯಕ್ವಾಡ್ (47) ಹಾಗೂ ಶಿವಂ ದುಬೆ (52) ಗೆಲುವಿಗೆ ಹೋರಾಡಿದರು. ಆದರೆ, ಇದಕ್ಕೆ ಯಶಸ್ಸು ಸಿಗಲಿಲ್ಲ. ಅಂಬಟಿ ರಾಯುಡು ಸೊನ್ನೆ ಸುತ್ತಿದರೆ, ಮೊಯಿನ್ ಅಲಿ ಹಾಗೂ ರವೀಂದ್ರ ಜಡೇಜಾ ತಲಾ 23 ಗಳಿಸಿದರು. ಚೆನ್ನೈ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತಷ್ಟೆ. ಆರ್​ಆರ್​ ಪರ ಆ್ಯಡಂ ಝಂಪಾ 3 ಹಾಗೂ ಅಶ್ವಿನ್ 2 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ms-dhoni-lost-his-cool-and-yelled-at-one-of-his-teammates-matheesha-pathirana-during-rr-vs-csk-ipl-2023-match-vb-au48-565308.html

Leave a Reply

Your email address will not be published. Required fields are marked *