ಮ್ಯಾನ್ಮಾರ್ ಮತ್ತು ಬ್ಯಾಂಕಾಕ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಸಂಭವಿಸಿದೆ. ಪ್ರವಾಸಕ್ಕೆ ತೆರಳಿರುವ ಹಾವೇರಿ ಮತ್ತು ಹಾಸನ ಜಿಲ್ಲೆಯ ಪ್ರವಾಸಿಗರು ಸುರಕ್ಷಿತರಾಗಿದ್ದಾರೆ.ಹಾವೇರಿಯ 22 ಜನರು ಮತ್ತು ಹಾಸನದ ರಾಜಶೇಖರ್ ಸೇರಿದಂತೆ ಇತರರು ಬ್ಯಾಂಕಾಕ್‌ನಲ್ಲಿ ಸುರಕ್ಷಿತವಾಗಿದ್ದಾರೆ. ಭೂಕಂಪದ ತೀವ್ರತೆ 7.7 ಆಗಿತ್ತು ಮತ್ತು ಮ್ಯಾನ್ಮಾರ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕರ್ನಾಟಕ ಸರ್ಕಾರ ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಬೆಂಗಳೂರು, ಮಾರ್ಚ್ 28: ಮ್ಯಾನ್ಮಾರ್ (Myanmar) ಹಾಗೂ ಬ್ಯಾಂಕಾಕ್‌ನಲ್ಲಿ (Bangkok) ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಹಲವರು ಮೃತಪಟ್ಟಿದ್ದಾರೆ. ಬ್ಯಾಂಕ್ಗೆ ಪ್ರವಾಸಕ್ಕೆ ತೆರಳಿರುವ ಮತ್ತು ಕೆಲಸದ ನಿಮಿತ್ಯ ತೆರಳಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕೆಲಸದ ನಿಮಿತ್ಯ ಬ್ಯಾಂಕಾಕ್ಗೆ 42 ಮಂದಿ ಕನ್ನಡಿಗರು ತೆರಳಿದ್ದಾರೆ. ಇವರು, ಅನಂತಾರಾ ಮತ್ತು ಅವನಿ ಹೊಟೆಲ್ನಲ್ಲಿ ವಾಸವಾಗಿದ್ದಾರೆ.

ಭೂಕಂಪನಕ್ಕೆ ಅವನಿ ಹೊಟೆಲ್ ಸ್ವಲ್ಪ ಬಿರುಕು ಬಿಟ್ಟಿದೆ. ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೊಟೇಲ್ ಸಿಬ್ಬಂದಿ ಕನ್ನಡಿಗರನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ. ಕನ್ನಡಿಗರು 42 ಜನ ಹಾಗೂ ಬೇರೆ ರಾಜ್ಯದ 600 ಕ್ಕೂ ಹೆಚ್ಚು ಜನ ಈ ಹೊಟೇಲ್ಗಳಲ್ಲಿ ವಾಸ್ತವ್ಯ ಹೋಡಿದ್ದರು. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಯಾರಿಗೂ ತೊಂದರೆ ಇಲ್ಲ. ನಾಳೆ ನಾವು ಬೆಂಗಳೂರಿಗೆ ಬರುತ್ತವೆ ಎಂದು ತಿಳಸಿದ್ದಾರೆ.
ಹಾವೇರಿಯ 22 ಜನ ಕನ್ನಡಿಗರು ಸುರಕ್ಷಿತ
ಐದು ದಿನಗಳ ಹಿಂದೆ ಹಾವೇರಿ ಜಿಲ್ಲೆಯ 22 ಜನರು ಬೆಂಗಳೂರಿನಿಂದ ಬ್ಯಾಂಕಾಕ್ಗೆ ತೆರಳಿದ್ದರು. ಶುಕ್ರವಾರ (ಮಾ.28) ಸಫಾರಿ ವರ್ಡ್ಗೆ ಹೋಗಿದ್ದ ವೇಳೆ ಭೂಕಂಪನದ ಅನುಭವವಾಗಿದೆ. ಬಳಿಕ, ಕನ್ನಡಿಗರು ಸುವರ್ಣ ಭೂಮಿ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಬ್ಯಾಂಕಾಕ್‌ನಲ್ಲಿ ಎಲ್ಲರೂ ಸುರಕ್ಷಿತವಾಗಿದ್ದೇವೆ. ವಿಮಾನಗಳನ್ನು ಬಿಡುವ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ ಎಂದು ವಿಮಾನ ನಿಲ್ದಾಣದಿಂದ ಐವರು ಕನ್ನಡಿಗರು ವಿಡಿಯೋ ಮಾಡಿ ಪೋಷಕರಿಗೆ ಕಳುಹಿಸಿದ್ದಾರೆ.

ಹಾಸನದವರು ಸುರಕ್ಷಿತ
ಇನ್ನು, ಹಾಸನದಿಂದ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿರುವ ರಾಜಶೇಖರ್ ಎಂಬುವರು ಕೂಡ ಸುರಕ್ಷಿತವಾಗಿದ್ದಾರೆ. ಭೂಕಂಪನದ ಸಮಯದಲ್ಲಿ ರಾಜಶೇಖರ್ ಬ್ಯಾಂಕಾಕ್ನ ಹಳೇ ವಿಮಾನ ನಿಲ್ದಾಣಕ್ಕೆ ತೆರಳಿದ ಹಿನ್ನೆಲೆಯಲ್ಲಿ ಸುರಕ್ಷಿತವಾಗಿದ್ದಾರೆ. ರಾಜಶೇಖರ್ ರಾಜಶೇಖರ್ ಜೊತೆಗಿರುವ ಇತರೆ ನಾಲ್ವರು ಕನ್ನಡಿಗರೂ ಸಹಿತ ಸುರಕ್ಷಿತವಾಗಿದ್ದಾರೆ.
ಕನ್ನಡಿಗರ ಸುರಕ್ಷತೆ ಬಗ್ಗೆ ಮಾಹಿತಿ ಪಡೆದ ಸಿಎಂ
ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ. ಇನ್ನು, ಪ್ರವಾಸಕ್ಕೆ ತೆರಳಿರುವ ಕನ್ನಡಿಗರ ಬಗ್ಗೆ ಸರ್ಕಾರ ಮಾಹಿತಿ ಕಲೆ ಹಾಕುತ್ತಿದ್ದು, ಸುರಕ್ಷತೆಗೆ ಗಮನಹರಿಸಿದೆ.

ಬಾಂಕಾಕ್ ಭೂಕಂಪನದ ವಿಡಿಯೋ ನೋಡಿ
https://twitter.com/i/status/1905533835674354009
ಭೂಕಂಪನದ ತೀವ್ರತೆ 7.7ರಷ್ಟು ದಾಖಲು
ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ನಲ್ಲಿ ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.7ರಷ್ಟು ದಾಖಲಾಗಿದೆ. ಭೂಕಂಪದ ತೀರ್ವತೆಗೆ ಮ್ಯಾನ್ಮಾರ್‌ನ ಮಂಡಲೇಯಲ್ಲಿನ ಐಕಾನಿಕ್ ಅವಾ ಸೇತುವೆ ಕುಸಿದಿದೆ. ಮಧ್ಯಾಹ್ನ 12.50ಕ್ಕೆ ಉಭಯ ಭೂಮಿ ಕಂಪಿಸಿದೆ. ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ. ಬ್ಯಾಂಕಾಕ್‌ನಲ್ಲಿ ವಿಮಾನ ಸೇವೆ, ರೈಲು ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ಭೂಕಂಪ ಹಿನ್ನೆಲೆಯಲ್ಲಿ ಮ್ಯಾನ್ಮಾರ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.
Source : TV9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1