ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ: ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನ.

ಬೆಂಗಳೂರು, (ಜೂನ್ 06):  ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ (Valmiki Corporation Scam) ಸಚಿವ ನಾಗೇಂದ್ರ (B Nagendra) ಹೆಸರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಇಂದು (ಜೂನ್ 06) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಗೇಂದ್ರ ಅವರು ಇಂದು (ಜೂನ್ 06)ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡಿದರು. ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಿಂದ ನಿರ್ಗಮಿಸಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂ. ವರ್ಗಾವಣೆ ಪ್ರಕರಣ ಸಂಬಂಧ ಅವರು ರಾಜೀನಾಮೆ ನೀಡಿದ್ದಾರೆ.
ಏನಿದು ಪ್ರಕರಣ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿ ವರ್ಗಾವಣೆ ಪ್ರಕರಣದ ತನಿಖೆ ಸಂಬಂಧ ಬ್ಯಾಂಕ್‌ ಆಫ್‌ ಇಂಡಿಯಾದ ಮೂವರು ಉದ್ಯೋಗಿಗಳು ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿದೆ. ಇನ್ನೊಂದೆಡೆ ಕ್ಷಿಪ್ರ ತನಿಖೆ ಮುಂದುವರಿಸಿರುವ ಎಸ್‌ಐಟಿ ಅಧಿಕಾರಿಗಳು ಸಚಿವ ನಾಗೇಂದ್ರ ಆಪ್ತರು ಎನ್ನಲಾದ ನಾಗರಾಜು ನೆಕ್ಕಂಟಿ ಹಾಗೂ ನಾಗೇಶ್ವರ್‌ ರಾವ್‌ ಎಂಬುವವರನ್ನು ಬಂಧಿಸಿದೆ.

Source : https://tv9kannada.com/karnataka/valmiki-corporation-scam-finally-b-nagendra-resigns-his-minister-post-kannada-news-today-rbj-845872.html

Leave a Reply

Your email address will not be published. Required fields are marked *