National Dengue Day 2024 : ಮಾರಕ ಡೆಂಗ್ಯೂ ನಿಯಂತ್ರಣಕ್ಕೆ ಇಲ್ಲಿವೆ ಸರಳ ಉಪಾಯಗಳು..!

  • ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುತ್ತದೆ.
  • ಡೆಂಗ್ಯೂ ವಿರುದ್ಧ ನಮ್ಮನ್ನು ಹಾಗೂ ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕು.
  • ಡೆಂಗ್ಯೂ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳು ಇಲ್ಲಿವೆ ನೋಡಿ..

National Dengue Day 2024 : ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದು ಡೆಂಗ್ಯೂ ಜ್ವರ ತಡೆಗಟ್ಟುವ ಕ್ರಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಸೊಳ್ಳೆಯಿಂದ ಬರುವ ಈ ಕಾಯಿಲೆಯಿಂದ ಉಂಟಾಗುವ ನಿರಂತರ ಸಮಸ್ಯೆ ಮತ್ತು ಸವಾಲುಗಳ ಕುರಿತು ಜನರಿಗೆ ತಿಳಿಸಿ ಹೇಳಲಾಗುತ್ತದೆ. ಬನ್ನಿ ಡೆಂಗ್ಯೂ ವಿರುದ್ಧ ನಮ್ಮನ್ನು ಹಾಗೂ ನಮ್ಮ ಕುಟುಂಬವನ್ನು ರಕ್ಷಿಸಲು ಕೈಗೊಳ್ಳಬಹುದಾದ ಕೆಲವು ಪರಿಣಾಮಕಾರಿ ಕ್ರಮಗಳ ಕುರಿತು ತಿಳಿಯೋಣ… 

ಸೊಳ್ಳೆ ಸಂತಾನೋತ್ಪತ್ತಿಯ ಸ್ಥಳಗಳನ್ನು ನಿವಾರಿಸಿ: ನಿಯಮಿತವಾಗಿ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಪರೀಕ್ಷಿಸಿ ಮತ್ತು ಪಾತ್ರೆಗಳು, ಗಟಾರಗಳು ಹಾಗೂ ನೀರು ಸಂಗ್ರಹಗೊಳ್ಳಬಹುದಾದ ಇತರ ಪ್ರದೇಶಗಳಿಂದ ನಿಂತ ನೀರನ್ನು ಖಾಲಿ ಮಾಡುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯ ಸಂಭಾವ್ಯವನ್ನು ತಡೆಗಟ್ಟಬಹುದು. 

ಸೊಳ್ಳೆ ನಿವಾರಕಗಳನ್ನು ಬಳಸಿ: DEET, ಪಿಕಾರಿಡಿನ್, ಅಥವಾ IR3535 ನಂತಹ ಪದಾರ್ಥಗಳನ್ನು ಹೊಂದಿರುವಂತಹ ಸೊಳ್ಳೆ ನಿವಾರಕಗಳನ್ನು ಹೊರಗೆ ಹೋಗುವಾಗ, ವಿಶೇಷವಾಗಿ ಸೊಳ್ಳೆ ಚಟುವಟಿಕೆ ಹೆಚ್ಚಿರುವ ಸ್ಥಳಕ್ಕೆ ತೆರಳುವಾಗ ಬಳಸಿ.. 

ಆರಂಭಿಕ ವೈದ್ಯಕೀಯ ಚಿಕಿತ್ಸೆ : ನೀವು ತೀವ್ರ ಜ್ವರ, ತಲೆನೋವು, ಕೀಲು ಮತ್ತು ಸ್ನಾಯು ನೋವು ಅಥವಾ ದದ್ದುಗಳಂತಹ ಡೆಂಗ್ಯೂ ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದರೆ, ತಕ್ಷಣದ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಿರಿ. 

ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಿ: ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡಬಹುದು. ಅದಕ್ಕಾಗಿ ಸರಿಯಾದ ನೈರ್ಮಲ್ಯ ಕ್ರಮಗಳನ್ನು ನಿಮ್ಮ ಜೀವನದಲ್ಲಿ ಸೇರಿಸಿಕೊಂಡು ಆರೋಗ್ಯಯುತ ಬದುಕು ಸಾಗಿಸಿ..

ಸಮುದಾಯ ಸಭೆ : ಸೊಳ್ಳೆ ನಿಯಂತ್ರಣ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಜಾಗೃತಿ ಅಭಿಯಾನಗಳಂತಹ ಡೆಂಗ್ಯೂ ನಿಯಂತ್ರಣ ಮತ್ತು ತಡೆಗಟ್ಟುವ ಗುರಿಯನ್ನು ಹೊಂದಿರುವ ಸಮುದಾಯ ಸಭೆ ಮತ್ತು ಚರ್ಚೆಗಳಲ್ಲಿ ಭಾಗವಹಿಸಿ ಈ ರೋಗದ ಕುರಿತು ತಿಳಿದುಕೊಳ್ಳಿ..

ರಕ್ಷಣಾತ್ಮಕ ಉಡುಪುಗಳನ್ನು ಧರಿಸಿ: ಸೊಳ್ಳೆ ಕಡಿತದಿಂದ ಪಾರಾಗಲು ಸಾಧ್ಯವಾದಷ್ಟು ಉದ್ದ ತೋಳಿನ ಶರ್ಟ್‌ಗಳು, ಪ್ಯಾಂಟ್‌ಗಳು ಮತ್ತು ಸಾಕ್ಸ್‌ಗಳನ್ನು ಧರಿಸಿ. ಅಲ್ಲದೆ, ಸೊಳ್ಳೆಗಳು ನಿಮ್ಮ ಮನೆ ಪ್ರವೇಶ ಮಾಡದಂತೆ, ತಡೆಯಲು ಕಿಟಕಿಗಳು ಮತ್ತು ಬಾಗಿಲುಗಳಿಗೆ ಬಿಗಿಯಾದ ಸೊಳ್ಳೆ ಪರದೆಗಳನ್ನು ಹಾಕಿ.. 

ಇದನ್ನೂ ಓದಿ: ಅಂತಾರಾಷ್ಟ್ರೀಯ ಬೆಳಕಿನ ದಿನ 2024: ಇತಿಹಾಸ,ಮಹತ್ವ.

Source : https://zeenews.india.com/kannada/health/national-dengue-day-prevention-measures-you-can-take-to-protect-against-the-dengue-fever-disease-211208

Leave a Reply

Your email address will not be published. Required fields are marked *