ಚಿತ್ರದುರ್ಗ ಎಸ್. ಜೆ.ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟೀಯ ರಸ್ತೆ ಸುರಕ್ಷತಾ ಮಾಸಾಚರಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಜ,28 : ಸಂಚಾರ ನಿಯಮಗಳನ್ನು ತಪ್ಪದೇ ವಾಹನ ಸವಾರರೆಲ್ಲರೂ ಸಾಮಾನ್ಯವಾಗಿ ಎಲ್ಲರೂ ಪಾಲಿಸಿದರೆ ಅನೇಕ ಅಪಘಾತ ಹಾಗೂ ಆಘಾತಗಳು ಆಗುವುದಿಲ್ಲ ಎಂದು ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಭರತ್.ಎಂ. ಕಾಳಿಸಿಂಗ್ ಸಲಹೆ ಮಾಡಿದರು.

ಅವರು ನೆಹರು ಯುವ ಕೇಂದ್ರ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಪ್ರಾದೇಶಿಕ ಸಾರಿಗೆ ಕಛೇರಿ ಚಿತ್ರದುರ್ಗ,ಎಸ್. ಜೆ.ಎಂ ಪಾಲಿಟೆಚ್ನಿಕ್
ಮತ್ತುಶ್ರೀ ನೀಲಕಂಠ ಮೆಮೋರಿಯಲ್ ಪ್ಯಾರಾಮೆಡಿಕಲ್ ಕಾಲೇಜು ಚಿತ್ರದುರ್ಗ,ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟೀಯ ರಸ್ತೆ
ಸುರಕ್ಷತಾ ಮಾಸಾಚರಣೆ ಅಂಗವಾಗಿ ಇಂದು ಚಿತ್ರದುರ್ಗ ಎಸ್. ಜೆ.ಎಂ ಪಾಲಿಟೆಕ್ನಿಕ್ ಕಾಲೇಜಿನನಲ್ಲಿ ಏರ್ಪಡಿಸಿದ್ದ
ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಂಚಾರಿ
ನಿಯಮ ಮತ್ತು ಕಡ್ಡಾಯ ಮಾಹಿತಿ ಚಿನ್ಹೆಗಳು, ಹಾಗೂ ರಸ್ತೆ ಅಪಘಾತ ನಡೆದ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ
ಜಾಗೃತಿ ಮೂಡಿಸಿ,ದ್ವಿಚಕ್ರ ವಾಹನ ಸವಾರರು ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡಬೇಡಿ, ಹೆಲ್ಮೆಟ್ ಧರಿಸಿ
ವಾಹನ ಚಾಲನೆ ಮಾಡಿ, ರಸ್ತೆ ಸುರಕ್ಷತೆ ಕುರಿತು ಮುತುವರ್ಜಿ ವಹಿಸಿ ಪ್ರಾಣ ರಕ್ಷಿಸಿಕೊಳ್ಳಬೇಕು, ಎಚ್ಚರಿಕೆಯಿಂದ ವಾಹನ ಚಾಲನೆ
ಮಾಡಬೇಕು,ರಸ್ತೆಯಲ್ಲಿ ಸಂಚರಿಸುವಾಗ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕೆಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಎಸ್.ಜೆ.ಎಂ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಎಸ್.ವಿ. ರವಿಶಂಕರ್ ಮಾತನಾಡಿ 18 ವರ್ಷಕ್ಕಿಂತ ಕಡಿಮೆ ಇರುವ
ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಬಾರದು ಹಾಗೂ ಶಿಸ್ತಿನ ಜೊತೆ ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ
ನಾಗರೀಕರಾಗಿ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ನಂತರ
ಕಾಲೇಜಿನ ವಿದ್ಯಾರ್ಥಿಗಳಿಗೆ ರಕ್ತದ ಗುಂಪಿನ ಪರೀಕ್ಷೆ ಮಾಡಲಾಯಿತು.

ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಯುವಜನ ಅಧಿಕಾರಿಗಳಾದ ಸುಹಾಸ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ
ಮಜಹರ್ ಉಲ್ಲಾ, ಅಮೃತ್ ನರ್ಸಿಂಗ್ ಕಾಲೇಜ್ ಪ್ರಾಂಶುಪಾಲರಾದ ವಜಾಹತ್ ಉಲ್ಲಾ, ಪ್ರಾದೇಶಿಕ ಕಚೇರಿ ವಾಹನ
ನಿರೀಕ್ಷಕರಾದ ರಾಜೇಶ್, ಎಸ್. ಜೆ. ಎಂ .ಪಾಲಿಟೆಕ್ನಿಕ್ ನ ಉಪನ್ಯಾಸಕರಾದ ರಾಜೇಶ್ ಕುಮಾರ್, ಗಂಗಾಧರ್, ಲತಾ,ಪ್ರತಿಮಾ,
ಸವಿತಾ ಸಬಿತಾ, ವಾಣಿ, ರಘು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *