ಚಿತ್ರದುರ್ಗ: ಜುಲೈ.04: ಪ್ರಕೃತಿ ತಾಯಿಯನ್ನು ಆರಾಧಿಸುವ ಮೂಲಕ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಿ ಪ್ರಕೃತಿಯ ಶಕ್ತಿಯಿಂದ ಎಂತಹ ರೋಗವನ್ನಾದರೂ ಗುಣಪಡಿಸಬಹುದಾಗಿದೆ ‘ ಎಂದು ಪ್ರಕೃತಿ ಚಿಕಿತ್ಸಕರಾದ ಶ್ರೀನಿವಾಸ್ ಜಿ ಅಭಿಪ್ರಾಯ ಪಟ್ಟಿದ್ದಾರೆ.
ಭಾನುವಾರ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಹಾಗೂ ಬೆಂಗಳೂರಿನ ಶ್ರೀ ಪ್ರಕೃತಿ ಧರ್ಮ ಪೀಠ ಟ್ರಸ್ಟ್ ಬೆಂಗಳೂರು ವತಿಯಿಂದ ಸಾರ್ವಜನಿಕರಿಗಾಗಿ ಏರ್ಪಡಿಸಿದ್ದ ಪ್ರಕೃತಿ ಚಿಕಿತ್ಸಾ ವಿಧಾನದ ಮೂಲಕ ಖಾಯಿಲೆಗಳನ್ನು ಗುಣ ಪಡಿಸಬಹುದಾದ ಪ್ರಕೃತಿ ಹೀಲಿಂಗ್ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿ ಅವರು ಮಾತನಾಡಿದರು. ಇವರೊಂದಿಗೆ ಅಖಂಡ ಭಾರತ ಧಾರ್ಮಿಕ ಸೆಲ್ ಕನ್ವೀನರ್ ಪಿ. ವಿ. ರವಿಶಂಕರ್ ವರ್ಮ ತರಬೇತಿಯಲ್ಲಿ ಸಹಕಾರ ನೀಡಿದರು.
ನಗರದ ಕೋಟೆ ಮುಂಭಾಗದ ಶ್ರೀ ರಾಘವೇಂದ್ರ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ವರದಿಗಾರ ಪ್ರಾಣೇಶ್ ಆಚಾರ್ಯ, ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಆರ್ ಸತ್ಯಣ್ಣ, ಸಂಸ್ಥೆ ಅಧಕ್ಷ ರವಿ ಕೆ.ಅಂಬೇಕರ್ ಪರಿಸರವಾದಿ ಮಲ್ಲಿಕಾರ್ಜುನಪ್ಪ, ಯೋಗ ಗುರು ಚಿನ್ಮಯಾನಂದ,ವೆಂಕಟೇಶ, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಡಿ. ಯೋಗ ಶಿಕ್ಷಕರಾದ ಶ್ರೀಮತಿ ವಸಂತಲಕ್ಷ್ಮಿ, ಮಂಜುಳಾ ಹಾಗೂ ಕಾಲೇಜು ವಿಧ್ಯಾರ್ಥಿಗಳ ಭಾಗವಹಿಸಿದ್ದರು.