ಇದು ಚಿಕಿತ್ಸೆ ಮಾತ್ರವಲ್ಲ, ನಾವು ಜೀವಿಸುವ ವಿಧಾನವಾಗಿದೆ. ಪ್ರಕೃತಿ ಚಿಕಿತ್ಸೆಯು ಚಿಕಿತ್ಸೆಯ ರಚನಾತ್ಮಕ ವಿಧಾನವಾಗಿದೆ. ಇದು ರೋಗದ ಮೂಲ ಕಾರಣವನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ. ಪ್ರಕೃತಿಯಲ್ಲಿ ಮುಕ್ತವಾಗಿ ಲಭ್ಯವಿರುವ ಅಂಶಗಳ ತರ್ಕಬದ್ಧ ಬಳಕೆಯ ಮೂಲಕ ರೋಗವನ್ನು ಗುಣಪಡಿಸುವ ವಿಧಾನ.
ಪ್ರಕೃತಿ ಚಿಕಿತ್ಸೆಯ ಇತಿಹಾಸ :
ಪ್ರಕೃತಿ ಚಿಕಿತ್ಸೆಯು ಭಾರತದ ಪ್ರಾಚೀನ ಔಷದ ಪದ್ಧತಿಯಾಗಿದೆ. ವೇದಗಳು ಮತ್ತು ಪುರಾತನ ಗ್ರಂಥಗಳಲ್ಲಿ ಪ್ರಕೃತಿ ಚಿಕಿತ್ಸೆಯ ಬಗ್ಗೆ ಹಲವಾರು ಉಲ್ಲೇಖಗಳನ್ನು ಕಾಣಬಹುದು. ವೇದಗಳ ಅವಧಿಯಲ್ಲಿ ನೀರು, ಭೂಮಿ ಇತ್ಯಾದಿಗಳ ಔಷಧೀಯ ಮೌಲ್ಯದ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆ ಇದೆ. ಗಂಗಾ ನದಿಯ ನೀರನ್ನು ಹೃದಯ ಕಾಯಿಲೆ ಮತ್ತು ಸಂಧಿವಾತವನ್ನು ಗುಣಪಡಿಸುವಲ್ಲಿ ಸಾಧನವೆಂದು ಪರಿಗಣಿಸಲಾಗಿದೆ.
Adolf just ರವರು ಬರೆದ “ರಿಟರ್ನ್ ಟು ನೇಚರ್” ಪುಸ್ತಕದಿಂದ ಗಾಂಧೀಜಿಯವರು ಪ್ರಭಾವಿತರಾದರು ಮತ್ತು ಪ್ರಕೃತಿ ಚಿಕಿತ್ಸೆಯ ದೃಢ ನಂಬಿಕೆಯನ್ನು ಹೊಂದಿದ್ದರು. ಗಾಂಧೀಜಿಯವರು ತಮ್ಮ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಪ್ರಕೃತಿ ಚಿಕಿತ್ಸೆಯನ್ನು ಸೇರಿಸಿಕೊಂಡರು. ನಂತರ ಅವರು 1946ರಲ್ಲಿ ಉರುಳಿ ಕಾಂಚನದಲ್ಲಿ (village in pune) ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿದರು.
ಮಾನವ ದೇಹದ ಸಂಯೋಜನೆ:
ಯೋಗದ ಪ್ರಕಾರ ನಮ್ಮ ದೇಹವು –
- ಪಂಚಪ್ರಾಣಗಳು (ಪ್ರಾಣವಾಯು, ಅಪಾನ ವಾಯು,ಸಮಾನ ವಾಯು, ಉಧನವಾಯು, ವ್ಯಾನ ವಾಯು.)
2.ಪಂಚಮಹಾಭೂತಗಳು (ಭೂಮಿ, ನೀರು, ಅಗ್ನಿ, ವಾಯು,ಆಕಾಶ ) - ಪಂಚಕೋಶಗಳು (ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶ)
- ನಾಡಿ ಸಿದ್ದಾಂತಗಳಿಂದ ಕೂಡಿದೆ.
ಈ ಸಂಯೋಜನೆಯಲ್ಲಿನ ವ್ಯತ್ಯಾಸವು ರೋಗದ ಸ್ಥಿತಿಗೆ ಕಾರಣವಾಗುತ್ತದೆ. ಪ್ರಕೃತಿ ಚಿಕಿತ್ಸೆಯ ಸೂತ್ರಗಳು ಮತ್ತು ವಿಧಾನಗಳು :
ಡಾ. ಬಿ ವೆಂಕಟರಾವ್ ಅವರು ಪ್ರಕೃತಿ ಚಿಕಿತ್ಸೆಗೆ ಪಂಚ ಸೂತ್ರಗಳನ್ನು ನೀಡಿದರು, ಅವು – - ದಿನಕ್ಕೆ ಎರಡು ಊಟಗಳನ್ನು ಮಾತ್ರ ತೆಗೆದುಕೊಳ್ಳಿ
- ಒಂದು ದಿನದಲ್ಲಿ ಕನಿಷ್ಠ ಎರಡು ಲೀಟರ್ ನೀರನ್ನು ಕುಡಿರಿ
- ಪ್ರತಿದಿನ ಕನಿಷ್ಠ ಒಂದು ಗಂಟೆ ವ್ಯಾಯಾಮ ಮಾಡಿ
- ವಾರಕ್ಕೊಮ್ಮೆಯಾದರೂ ಉಪವಾಸ ಮಾಡಿ
- ದಿನಕ್ಕೆ ಎರಡು ಬಾರಿ ದೇವರಿಗೆ ಪ್ರಾರ್ಥನೆ ಮಾಡಿ. ಪ್ರಕೃತಿ ಚಿಕಿತ್ಸೆಯ ವಿಧಾನಗಳು –
- ಆಹಾರ ಮತ್ತು ಉಪವಾಸ : ಭಗವದ್ಗೀತೆಯಲ್ಲಿ ಆಹಾರದ ಮೂರು ವಿಧಾನಗಳನ್ನು, ಮಾನವ ದೇಹ ಹಾಗೂ ಮನಸ್ಸಿನ ಮೇಲೆ ಅವುಗಳ ಪರಿಣಾಮವನ್ನು ವಿವರವಾಗಿ ತಿಳಿಸಿದ್ದಾರೆ.
ಭಗವದ್ಗೀತೆಯ ಪ್ರಕಾರ ಆಹಾರದ ವಿಧಗಳು :
- ರಾಜಸಿಕ ಆಹಾರ – ಈ ಆಹಾರವು ಹೆಚ್ಚಿನ ಪ್ರಮಾಣದ ಉಪ್ಪು, ಕಾರ ಮತ್ತು ಮಸಾಲೆ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಈ ಆಹಾರವನ್ನು ತೆಗೆದುಕೊಳ್ಳುವ ವ್ಯಕ್ತಿಗಳು ಹೆಚ್ಚು ಆಕ್ರಮಣಕಾರಿ, ಉದ್ವೇಗ, ಕೋಪದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.
- ತಾಮಸಿಕ ಆಹಾರ- ತಾಮಸಿಕ ಆಹಾರವೆಂದರೆ ರಾತ್ರಿಯ ಆಹಾರ (ತಂಗಳು ಆಹಾರ), ತ್ವರಿತ ಆಹಾರ (fast foods ), ಸಂರಕ್ಷಿತ ಆಹಾರ (preserved foods). ಈ ರೀತಿ ಆಹಾರವನ್ನು ತೆಗೆದುಕೊಳ್ಳುವ ವ್ಯಕ್ತಿಗಳು lathergic, ಯಾವಾಗಲೂ ನಿದ್ದೆ, ದೌರ್ಬಲ್ಯದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.
- ಸಾತ್ವಿಕ ಆಹಾರ – ಈ ಆಹಾರವು ತಾಜಾ ಹಣ್ಣುಗಳು, ತರಕಾರಿಗಳು, ಮೊಳಕೆ ಕಾಳುಗಳು, ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ, ಜೇನುತುಪ್ಪವನ್ನು ಒಳಗೊಂಡಿರುತ್ತವೆ. ಈ ರೀತಿಯ ಆಹಾರವನ್ನು ಸೇವಿಸುವ ವ್ಯಕ್ತಿಗಳು ಶಾಂತ ಹಾಗೂ ತಮ್ಮ ದೇಹದ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ. ಋಗ್ವೇದದಲ್ಲಿ ಉಪವಾಸವು ಮಾನವನ ದೇಹದ ವಿವಿಧ ವ್ಯವಸ್ಥೆಗಳಲ್ಲಿ ಸಂಗ್ರಹವಾದ ವಿಷಯವನ್ನು ತೊಡೆದುಹಾಕಲು ಅತ್ಯುನ್ನತ ಔಷಧವೆಂದು ಪರಿಗಣಿಸಲಾಗಿದೆ.
- ಜಲ ಚಿಕಿತ್ಸೆ:
ಆನಾದಿ ಕಾಲದಿಂದಲೂ ಜಲವನ್ನು ಚಿಕಿತ್ಸಾ ವ್ಯಾಪಕವಾಗಿ ಬಳಸಲಾಗುತ್ತದೆ. ಸುಚಿತ್ವವನ್ನು ಕಾಪಾಡಿಕೊಳ್ಳಲು ಸ್ನಾನವೂ ಕೂಡ ಒಂದು ವಿಧದ ಜಲ ಚಿಕಿತ್ಸೆಯಾಗಿದೆ.
3.ಮಣ್ಣಿನ ಚಿಕಿತ್ಸೆ:
ಪ್ರಾಚೀನ ಕಾಲದಲ್ಲಿ ಮತ್ತು ಮಧ್ಯಯುಗದಲ್ಲಿ ಭೂಮಿಯನ್ನು(ಮಣ್ಣು) ಚಿಕಿತ್ಸೆಯ ಒಂದು ವಿಧಾನವಾಗಿ ಬಳಸಲಾಗುತ್ತಿತ್ತು.
Emanuel felke ( ಪ್ರಕೃತಿ ಚಿಕಿತ್ಸಕ) ಇವರು ಗಾಯಗಳಿಗೆ ಮತ್ತು ಚರ್ಮದ ಕಾಯಿಲೆಗಳನ್ನು ಗುಣಪಡಿಸಲು ಜೇಡಿಮಣ್ಣು ಅಥವಾ ತೇವಗೊಳಿಸಲಾದ ಮಣ್ಣನ್ನು ಬಳಸುತ್ತಿದ್ದರು.
ಇನ್ನು ಹಲವಾರು ಪ್ರಕೃತಿಯ ಚಿಕಿತ್ಸೆಗಳನ್ನು ನೋಡೋಣ……. (ಮುಂದುವರೆಯುವುದು)
✍️ಯಶಸ್ವಿನಿ ಕೆ.ಬಿ
ಬಿ.ಎನ್. ವೈ. ಎಸ್ ವಿದ್ಯಾರ್ಥಿನಿ
ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೋಧಕ ಆಸ್ಪತ್ರೆ
ಮೈಸೂರು.