ಕಳೆದ ಮಾಸದಲ್ಲಿ ನಾವು ಪ್ರಕೃತಿ ಚಿಕಿತ್ಸೆಯ ವಿವಿಧ ಥೆರಪಿಗಳನ್ನು ತಿಳಿದುಕೊಂಡಿದ್ದೇವೆ. ಇಂದು ಇನ್ನೂ ಉಳಿದಿರುವ ಥೆರಪಿಗಳ ಬಗ್ಗೆ ತಿಳಿದುಕೊಳ್ಳೋಣ…..,
4. ಅಂಗಮರ್ಧನ- ಅಂಗಮರ್ಧನವು ನಿಷ್ಕ್ರಿಯ ವ್ಯಾಯಾಮದ ಅತ್ಯುತ್ತಮ ರೂಪವಾಗಿದೆ. ಇದು ದೇಹದ ಮೃದು ಅಂಗಾಂಶದ ವೈಜ್ಞಾನಿಕ ಕುಶಲತೆಯನ್ನು ಒಳಗೊಂಡಿರುತ್ತದೆ.

ಅಂಗಮರ್ಧನದಲ್ಲಿ, ಕುಶಲತೆಯ ಐದು ಮೂಲಭೂತ ವಿಧಾನಗಳಿವೆ ಅವುಗಳೆಂದರೆ :
*Effleurage
*Friction
*Petrissage
*Tapotment
*Vibration
ಅಂಗಮರ್ಧನವು ನರಮಂಡಲವನ್ನು ಟೋನ್ ಮಾಡುತ್ತದೆ ಹಾಗೂ ರಕ್ತ ಪರಿಚಲನೆ ಮತ್ತು ಚಯಾಪಚಯ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತದೆ.
5. ಆಕ್ಯೂಪಂಚರ್ ಮತ್ತು ಆಕ್ಯುಪ್ರೆಶರ್.

ಆಕ್ಯುಪಂಚರ್- ದೇಹದ ನಿರ್ದಿಷ್ಟ ಬಿಂದುಗಳಿಗೆ (specific points of body) ಸೂಕ್ಷ್ಮವಾದ ಸೂಜಿಗಳನ್ನು ಚುಚ್ಚುವ ಮೂಲಕ ದೇಹದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಯನ್ನು ಕೊಡಲಾಗುತ್ತದೆ.
ಇಡೀ ದೇಹವು ಹಲವಾರು ಬಿಂದುಗಳಿಂದ (Acupuncture points)ಕೂಡಿದೆ.
ಸೂಜಿಗಳಿಂದ ಪ್ರಚೋದಿಸಲ್ಪಟ್ಟ ಈ ಬಿಂದುಗಳು (Acupunture points)ರೋಗವನ್ನು ಗುಣಪಡಿಸುವಲ್ಲಿ ಕಾರಣವಾಗುತ್ತದೆ.
ಆಕ್ಯುಪ್ರೆಶರ್- ದೇಹದ ವಿವಿಧ ಕಾಯಿಲೆಗಳ ಚಿಕಿತ್ಸೆಯನ್ನು ದೇಹದ ನಿರ್ದಿಷ್ಟ ಬಿಂದುಗಳ (Acupressure points) ಮೇಲೆ ಒತ್ತಡವನ್ನು ಅನ್ವಯಿಸುವ ಮೂಲಕ ಕೊಡಲಾಗುತ್ತದೆ. ಆಕ್ಯುಪ್ರೆಶರನ್ನು ಕೈಗಳಿಂದ ಅಥವಾ ಆಕ್ಯುಪ್ರೆಶರ್ ಸಾಧನಗಳಿಂದ (Acupressure devices) ಕೊಡಲಾಗುತ್ತದೆ.
6. ಭೌತಚಿಕಿತ್ಸೆ-

ಜೀವನದ ಸಾಮಾನ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮ ಅತ್ಯಗತ್ಯ. ನೈಸರ್ಗಿಕ ವ್ಯಾಯಾಮದ ಕೊರತೆಯು ದೌರ್ಬಲ್ಯ ಮತ್ತು ಅನಾರೋಗ್ಯದ ಮುಖ್ಯ ಕಾರಣಗಳಲ್ಲಿ ಒಂದಾಗಿದೆ.
ನಿಯಮಿತ ವ್ಯಾಯಾಮವು ದೇಹದಿಂದ ಆಹಾರದ ಬಳಕೆಯನ್ನು ಹೆಚ್ಚಿಸುತ್ತದೆ ಹಾಗೂ ಹೆಚ್ಚಿನ ರಕ್ತದ ಹರಿವನ್ನು ಅನುಮತಿಸುತ್ತದೆ.
ವ್ಯಾಯಾಮದಲ್ಲಿ ಬೆವರುವುದು ಮೂತ್ರಪಿಂಡಕ್ಕೆ ತ್ಯಾಜ್ಯವನ್ನು ಹೊರಹಾಕಲು ಮತ್ತು ರಕ್ತದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
7. ಹೀಲಿಯೋಥೆರಪಿ –

ಹೀಲಿಯೋಥೆರಪಿ ಎನ್ನುವುದು ಸೂರ್ಯನ ಕಿರಣಗಳಿಂದ ರೋಗಗಳನ್ನು ಗುಣಪಡಿಸುವ ಚಿಕಿತ್ಸೆಯಾಗಿದೆ. ಪ್ರತಿದಿನ ಬೆಳಗ್ಗೆ (೭ ರಿಂದ ೯ ಗಂಟೆ) ಅಥವಾ ಸಂಜೆ( ೪ ರಿಂದ ೬ ಗಂಟೆ ) ಸೂರ್ಯನ ಕಿರಣಗಳಿಗೆ ದೇಹವನ್ನು ಒಡ್ಡುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು.
8. ಮ್ಯಾಗ್ನೆಟೊಥೆರಪಿ –

ಮ್ಯಾಗ್ನೆಟೊಥೆರಪಿ ಎನ್ನುವುದು ಆಯಸ್ಕಾಂತಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಿದೆ. ಸ್ವಲ್ಪ ಸಮಯದವರೆಗೆ ಆಯಸ್ಕಾಂತಗಳೊಂದಿಗೆ ದೇಹದ ಅಂಗಾಂಶದ ನಿರಂತರ ಸಂಪರ್ಕವು ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡುತ್ತದೆ, ರಕ್ತ ಪರಿಚಲನೆಯನ್ನು ವೇಗಗೊಳಿಸುತ್ತದೆ, ದೇಹವನ್ನು ಬಲಪಡಿಸುತ್ತದೆ.
9. ಕ್ರೋಮೋಥೆರಪಿ –

ಕ್ರೋಮೋಥೆರಪಿ ಎನ್ನುವುದು ಬಣ್ಣಗಳ ಮೂಲಕ ರೋಗಗಳನ್ನು ಗುಣಪಡಿಸುವ ಚಿಕಿತ್ಸೆಯಾಗಿದೆ. ಆರೋಗ್ಯವನ್ನು ಸಂರಕ್ಷಿಸುವ ಇತರ ನೈಸರ್ಗಿಕ ವಿಧಾನಗಳೊಂದಿಗೆ ಬೆಂಬಲಿಸುವ ಚಿಕಿತ್ಸೆಯಾಗಿ ಇದನ್ನು ಉತ್ತಮವಾಗಿ ಬಳಸಲಾಗುತ್ತದೆ.
ದೇಹದ ಮೇಲೆ ವಿವಿಧ ಬಣ್ಣಗಳ ಕ್ರಿಯೆ ಮತ್ತು ಪರಿಣಾಮ ಹಾಗೂ ಅವುಗಳ ಗುಣಪಡಿಸುವ ಗುಣಗಳು ಈ ಕೆಳಗಿನಂತಿವೆ : ಉದಾ: ಕೆಂಪು- ಶಾಕ, ಬೆಂಕಿ ಮತ್ತು ಕೋಪದ ಸಂಕೇತವಾಗಿದೆ.
ಕಡಿಮೆ ರಕ್ತದೊತ್ತಡ, ಸಂಧಿವಾತ, ಪಾರ್ಶ್ವವಾಯು, ರಕ್ತಹೀನತೆ ಮುಂತಾದ ಕಾಯಿಲೆಗಳ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ.
ನೀಲಿ- ತಂಪಾದ, ಹಿತವಾದ ನಿಧ್ರಾಜನಕಗಳ ಸಂಕೇತ.
ಇದನ್ನು ಬೇಧಿ, ಆಸ್ತಮಾ , ಅಧಿಕ ರಕ್ತದೊತ್ತಡ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಈ ಮೇಲ್ಕಂಡ ಎಲ್ಲಾ ಥೆರಪಿಗಳು ಪ್ರಕೃತಿ ಚಿಕಿತ್ಸೆಯ ವಿಧಾನಗಳಾಗಿವೆ.
ಉತ್ತಮ ಜೀವನ ಶೈಲಿಯನ್ನು ನಡೆಸಲು ಕೇವಲ ಪಾಶ್ಚಾತಾ ಚಿಕಿತ್ಸಾ ವಿಧಾನಗಳಲ್ಲದೆ ನಮ್ಮ ಭಾರತದ ಸಾಂಸ್ಕೃತಿಕ ವಿಧಾನಗಳನ್ನು (ಆಯುರ್ವೇದ,ಪ್ರಕೃತಿ ಚಿಕಿತ್ಸೆ ಮತ್ತು ಯೋಗ, ಹೋಮಿಯೋಪತಿ, ಸಿದ್ಧ ಹಾಗೂ ಯೂನಾನಿ ) ನಾವೆಲ್ಲರೂ ಅಳವಡಿಸಿಕೊಳ್ಳೋಣ.
“ಚಿಕಿತ್ಸೆ ಎಂದರೆ ಅದು ಪ್ರಕೃತಿ ಚಿಕಿತ್ಸೆ ಆಗಿರಲಿ”.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii

✍️: ಯಶಸ್ವಿನಿ ಕೆ.ಬಿ.
ದ್ವಿತೀಯ ಬಿ. ಎನ್. ವೈ. ಎಸ್.
ಸರ್ಕಾರಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ,
ಮೈಸೂರು.