NDA 2026 ನೇಮಕಾತಿ: ಸೇನಾ, ನೌಕಾ, ವಾಯುಪಡೆ ಸೇರಿ 394 ಹುದ್ದೆಗಳಿಗೆ ಅರ್ಜಿ ಆಹ್ವಾನ.

ದೇಶಕ್ಕೆ ಸೇವೆ ಸಲ್ಲಿಸುವ ಕನಸು ಕಾಣುವ ಯುವಕರಿಗೆ ಕೇಂದ್ರ ಲೋಕಸೇವಾ ಆಯೋಗ (UPSC) ಸುವರ್ಣಾವಕಾಶ ನೀಡಿದೆ. NDA ಹಾಗೂ NA (I) 2026 ಪರೀಕ್ಷೆಯ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದ್ದು, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಒಟ್ಟು 394 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಪರೀಕ್ಷೆಯ ಮೂಲಕ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹುದ್ದೆಗಳ ವಿವರ

  • ಸೇನಾ ವಿಭಾಗ (Army): 208 ಹುದ್ದೆಗಳು
  • ನೌಕಾಪಡೆ (Navy): 42 ಹುದ್ದೆಗಳು
  • ವಾಯುಪಡೆ (Air Force – Flying & Ground Duty): 120 ಹುದ್ದೆಗಳು
  • ನೌಕಾ ಅಕಾಡೆಮಿ (10+2 Cadet Entry Scheme): 24 ಹುದ್ದೆಗಳು

👉 ಒಟ್ಟಾರೆ 370 ಪುರುಷರು ಮತ್ತು 24 ಮಹಿಳೆಯರು ಸೇರಿ 394 ಅಭ್ಯರ್ಥಿಗಳಿಗೆ ಅವಕಾಶ.

ಶೈಕ್ಷಣಿಕ ಅರ್ಹತೆ

  • NDA ಸೇನಾ ವಿಭಾಗ: ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ ಉತ್ತೀರ್ಣ
  • ನೌಕಾಪಡೆ ಮತ್ತು ವಾಯುಪಡೆ: 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ (PCM) ಕಡ್ಡಾಯ
  • 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು (2026 ಡಿಸೆಂಬರ್ 10ರೊಳಗೆ ಪಾಸ್ ಪ್ರಮಾಣ ಪತ್ರ ಸಲ್ಲಿಸಬೇಕು)

ಅರ್ಜಿ ಶುಲ್ಕ

  • ಸಾಮಾನ್ಯ / OBC ಪುರುಷ ಅಭ್ಯರ್ಥಿಗಳು: ₹100
  • SC/ST, ಎಲ್ಲಾ ಮಹಿಳಾ ಅಭ್ಯರ್ಥಿಗಳು, JCO/NCO/OR ಅವಲಂಬಿತರು: ಶುಲ್ಕ ವಿನಾಯಿತಿ

ವೇತನ ಮತ್ತು ಸೌಲಭ್ಯಗಳು

  • ತರಬೇತಿಯ ಸಮಯದಲ್ಲೇ ತಿಂಗಳಿಗೆ ₹56,100 ವೇತನ
  • ಅಧಿಕಾರಿಯಾಗಿ ನೇಮಕವಾದ ನಂತರವೂ ಇದೇ ವೇತನ
  • ಜೊತೆಗೆ ₹15,500 ಮಿಲಿಟರಿ ಸೇವಾ ವೇತನ (MSP)
  • ಭತ್ಯೆಗಳು: DA, HRA, Uniform Allowance, Transport Allowance ಸೇರಿದಂತೆ ಹಲವು ಸೌಲಭ್ಯಗಳು

ಆಯ್ಕೆ ಪ್ರಕ್ರಿಯೆ

  • ಲಿಖಿತ ಪರೀಕ್ಷೆ
  • SSB ಸಂದರ್ಶನ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು UPSC ಅಧಿಕೃತ ವೆಬ್‌ಸೈಟ್ upsc.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Views: 35

Leave a Reply

Your email address will not be published. Required fields are marked *