Neem Leaf Health Benefits: ಬೇವಿನ ಎಲೆಯ ಅದ್ಭುತ ಆರೋಗ್ಯ ಪ್ರಯೋಜನಗಳು

Health Benefits of Neem Leaf: ಬೇವಿನ ಎಲೆಗಳಲ್ಲಿ ತಾಮ್ರ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣದ ಪ್ರಮಾಣವು ಹೆಚ್ಚಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಗಳ ವಿರುದ್ಧ ದೇಹವನ್ನು ರಕ್ಷಿಸುವ ಶಕ್ತಿ ಇದಕ್ಕಿದೆ.

ಆಯುರ್ವೇದಲ್ಲಿ ಬೇವಿಗೆ ಮಹತ್ತರ ಸ್ಥಾನವಿದೆ. ಬೇವಿನ ಎಲೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಬೇವಿನ ಎಲೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಬೇವಿನ ಎಲೆಯಿಂದ ನಾವು ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು. ಬೇವಿನ ಎಲೆಯಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ರೋಗಗಳ ವಿರುದ್ಧ ಹೋರಾಡುವ ಶಕ್ತಿಯಿದೆ. ಬೇವಿನ ಎಲೆಯಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಬದಲಾದ ಜೀವನಶೈಲಿಯಿಂದ ಇಂದು ಅನೇಕರಿಗೆ ತಲೆನೋವು, ಕೀಲು ನೋವು, ಸೊಂಟ ನೋವು ಸೇರಿದಂತೆ ಅನೇಕ ನೋವುಗಳು ಕಾಡುತ್ತವೆ. ಈ ನೋವುಗಳಿಂದ ಮುಕ್ತಿ ಪಡೆಯಲು ಜನರು ನೋವು ನಿವಾರಕ ಮಾತ್ರೆ ಸೇವಿಸುತ್ತಾರೆ. ಈ ಮಾತ್ರೆಗಳ ಬದಲು ಮನೆಮದ್ದಿನ ಮೂಲಕವೇ ಎಲ್ಲ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಬೇವಿನ ಎಲೆಯಲ್ಲಿ ಎಲ್ಲಾ ರೀತಿಯ ನೋವು ನಿವಾರಿಸುವ ಶಕ್ತಿಯಿದೆ. ಬೇವಿನ ಎಲೆಯಲ್ಲಿ ತಾಮ್ರ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣದ ಪ್ರಮಾಣ ಹೆಚ್ಚಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಗಳ ವಿರುದ್ಧ ದೇಹವನ್ನು ರಕ್ಷಿಸುವ ಶಕ್ತಿ ಬೇವಿನ ಎಲೆಗಳಿಗಿದೆ.

ಬೇವಿನ ಎಲೆಗೆ ಉರಿಯೂತ ಹಾಗೂ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿಯಿದೆ. ಹಲವಾರು ರೋಗಗಳಿಗೆ ಬೇವಿನ ಎಲೆ ರಾಮಬಾಣವಾಗಿ ಕೆಲಸ ಮಾಡುತ್ತದೆ.

ದಾಲ್ಚಿನಿ, ಲವಂಗದ ಜೊತೆ ಬೇವಿನ ಎಲೆಯನ್ನು ಹಾಕಿ ಲೇಪ ಮಾಡಿ ನೋವಾದ ಜಾಗಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ನೀವು ನೋವಿನಿಂದ ಮುಕ್ತಿ ಪಡೆಯುತ್ತೀರಿ.  

Source: https://zeenews.india.com/kannada/photo-gallery/health-tips-amazing-neem-leaf-health-benefits-eating-everyday-136643/health-benefits-of-neem-leaf-136644

Leave a Reply

Your email address will not be published. Required fields are marked *