ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ.27 ಕೃಷಿ, ಕೈಗಾರಿಕೆ, ಶಿಕ್ಷಣಕ್ಕೆ ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರ ಲಾಲ್ ನೆಹರುರವರು ಹೆಚ್ಚಿನ ಒತ್ತು ಕೊಟ್ಟ ಪರಿಣಾಮ ಭಾರತ ದೇಶ ಇಂದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಾಭೀವೃದ್ದಿಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ಹೇಳಿದರು.
ದೇಶದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರ ಲಾಲ್ ನೆಹರುರವರು ಪುಣ್ಯ ಸ್ಮರಣೆಯ ಅಂಗವಾಗಿ ಚಿತ್ರದುರ್ಗ ನಗರದಲ್ಲಿ
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ
ಸಲ್ಲಿಸಿ ಮಾತನಾಡಿದ ಅವರು, ಜವಾಹರಲಾಲ್ ನೆಹರುರವರಲ್ಲಿ ದೂರದೃಷ್ಟಿಯಿತ್ತು ಇದರ ಪರಿಣಾಮವಾಗಿ ಇಂದು ನಮ್ಮ ದೇಶ
ಪ್ರಗತಿಯನ್ನು ಕಾಣುತ್ತಿದೆ. ಕಷ್ಟ ಕಾಲದಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಕೃಷಿ, ಕೈಗಾರಿಕೆ, ಶಿಕ್ಷಣಕ್ಕೆ ನೆಹರುರವರು ಹೆಚ್ಚಿನ ಒತ್ತು
ಕೊಟ್ಟ ಪರಿಣಾಮ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಿದೆ. ದೇಶದಲ್ಲಿರುವ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಫಲಾನುಭವಿಗಳೆ ಆಗಿದ್ದಾರೆ. ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ನೆಹರುರವರು ಇಂಗ್ಲೆಂಡ್‍ನಲ್ಲಿ ಶಿಕ್ಷಣ ಪಡೆದು ಭಾರತಕ್ಕೆ ಬಂದ ಮೇಲೆ ಮಹಾತ್ಮಗಾಂಧಿ ಜೊತೆ ಸೇರಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಣೆಕಟ್ಟೆ,
ವಿಶ್ವವಿದ್ಯಾನಿಲಯಗಳು, ಪಂಚವಾರ್ಷಿಕ ಯೋಜನೆಗೆ ಆದ್ಯತೆ ಕೊಟ್ಟ ಪರಿಣಾಮವಾಗಿ ಭಾರತ ಸುಭಿಕ್ಷವಾಗಿದೆ ದೇಶ
ವಿಭಜನೆಯಾದ ಸಂದರ್ಭದಲ್ಲಿ ಬ್ರಿಟೀಷರು ಕೋಮುವಾದವನ್ನು ಬಿತ್ತಿ ಹೋಗಿದ್ದರು. ಅಂತಹ ಕಷ್ಟಗಳನ್ನೆಲ್ಲಾ ನಿಭಾಯಿಸಿಕೊಂಡು
ದೇಶವನ್ನು ಮುನ್ನಡೆಸಿಕೊಂಡು ಹೋದ ಕೀರ್ತಿ ಜವಾಹರಲಾಲ್ ನೆಹರುರವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್ ಮಾತನಾಡಿ ಎಲ್ಲಾ ಚಳುವಳಿಗಳಲ್ಲಿಯೂ ಭಾಗವಹಿಸುತ್ತಿದ್ದ ಜವಾಹರಲಾಲ್
ನೆಹರುರವರು ಹತ್ತು ವರ್ಷಗಳ ಕಾಲ ಸೆರೆಮನೆಯಲ್ಲಿದ್ದರು. ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದವರು ನೆಹರು. ಅರವತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‍ನವರು ಏನು ಮಾಡಿದ್ದಾರೆಂದು ಪ್ರಶ್ನಿಸುತ್ತಿರುವ ಕೋಮುವಾದಿ ಬಿಜೆಪಿ.ಯವರು ಮೊದಲು ಜವಾಹರಲಾಲ್‍ರವರು ದೇಶಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ತಿಳಿದುಕೊಳ್ಳಲಿ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡಿ ಕಷ್ಟದ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿದ ಕೀರ್ತಿ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರುರವರಿಗೆ ಸಲ್ಲಬೇಕು. 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದು ಭಾರತವನ್ನು
ಶಕ್ತಿಶಾಲಿಯನ್ನಾಗಿಸಿದರು. ಅಲಿಪ್ತ ರಾಷ್ಟ್ರಗಳ ಒಕ್ಕೂಟ ರಚಿಸಿಕೊಂಡು ಅದರ ನೇತೃತ್ವವನ್ನು ನೆಹರು ವಹಿಸಿಕೊಂಡಿದ್ದರು.
ಬೇರೆಯವರಿಂದ ಅದು ಸಾಧ್ಯವಾಗುತ್ತಿರಲಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡುತ್ತ ದೇಶದ ಮೊದಲ
ಪ್ರಧಾನಿಯಾಗಿದ್ದ ಜವಾಹರಲಾಲ್‍ನೆಹರುರವರ ಕೊಡುಗೆ ಅಪಾರ. ದೇಶಕ್ಕೆ ನೆಹರು ಕುಟುಂಬದ ಸೇವೆ ಬಹಳಷ್ಟಿದೆ. ಭಾರತವನ್ನು
ಬಡತನದಿಂದ ಮೇಲಕ್ಕೆತ್ತಬೇಕೆನ್ನುವ ಆಲೋಚನೆ ಅವರಲ್ಲಿತ್ತು. ಅದಕ್ಕಾಗಿ ಪಂಚ ವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು
ಕೃಷಿಗೆ ಒತ್ತು ಕೊಟ್ಟಿದ್ದರೆಂದು ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಸಂಪತ್‍ಕುಮಾರ್, ಉಪಾಧ್ಯಕ್ಷರುಗಳಾದ ಜಿ.ಎಸ್.ಕುಮಾರ್‍ಗೌಡ,
ಎಸ್.ಎನ್.ರವಿಕುಮಾರ್. ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್‍ನವಾಜ್, ಜಿಲ್ಲಾ ಕಾಂಗ್ರೆಸ್ ಕಾನೂನು, ಮಾಹಿತಿ ಹಕ್ಕು ಹಾಗೂ
ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸುದರ್ಶನ್, ಪರಿಶಿಷ್ಟ ವರ್ಗ ವಿಭಾಗದ ಅಧ್ಯಕ್ಷ ಮಂಜುನಾಥ್, ವಸೀಂ, ರಮೇಶ್
ಮದಕರಿಪುರ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ನ್ಯಾಯವಾದಿ ಮಹಮದ್ ರಫಿ, ತಿಪ್ಪೇಸ್ವಾಮಿ, ಪವಿತ್ರ,
ರೇಣುಕ, ಕೆ.ಪಿ.ಸಿ.ಸಿ.ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಜ್ಯೋತಿಲಕ್ಷ್ಮಿಗೋಪಿಯಾದವ್, ಸೇವಾದಳದ ಜಿಲ್ಲಾಧ್ಯಕ್ಷ
ಭೂತೇಶ್, ಮಹಿಳಾಧ್ಯಕ್ಷೆ ನೇತ್ರಾವತಿ ತಾಲ್ಲೂಕು ಅಧ್ಯಕ್ಷೆ ಲತಾಮಣಿ ಇನ್ನು ಅನೇಕರು ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದರು.
Views: 0