Lemon side effects : ಆಯುರ್ವೇದದ ಪ್ರಕಾರ ನಿಂಬೆಹಣ್ಣಿನ ಬಳಕೆ ಆರೋಗ್ಯಕ್ಕೆ ಒಳ್ಳೆಯದು ಅಲ್ಲದೆ, ಖಾದ್ಯಗಳ ರುಚಿಯನ್ನು ಹೆಚ್ಚಿಸುವ ನಿಂಬೆಯನ್ನು ಕೆಲವು ಆಹಾರ ಪದಾರ್ಥಗಳಲ್ಲಿ ಬಳಸುವುದು ಹಾನಿಕಾರಕ ಎಂದು ಹೇಳಲಾಗುತ್ತದೆ. ಬನ್ನಿ ನಿಂಬೆಯನ್ನು ಬಳಸುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಗಂಭೀರ ಪರಿಣಾಮಗಳ ಕುರಿತು ತಿಳಿಯೋಣ..
Lemon health benefits : ನಿಂಬೆ ಒಂದು ಸೂಪರ್ ಫುಡ್ ಆಗಿದ್ದು ಇದನ್ನು ಎಲ್ಲಾ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ನಿಂಬೆಯನ್ನು ಭಾರತೀಯ ಅಡುಗೆಗಳಲ್ಲಿ ನಿಯಮಿತವಾಗಿ ಬಳಸಲಾಗುತ್ತದೆ. ನಿಂಬೆ ಭಾರತೀಯ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಆದರೆ ಈ ನಿಂಬೆಯನ್ನು ಕೆಲವು ವಸ್ತುಗಳ ಜೊತೆ ಸೇರಿಸಿದರೆ ಅಪಾಯಕಾರಿಯಾಗುತ್ತದೆ.
ಹೌದು… ಆಯುರ್ವೇದದ ಪ್ರಕಾರ ನಿಂಬೆಯನ್ನು ಕೆಲವು ಆಹಾರ ಪದಾರ್ಥಗಳ ಜೊತೆ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಖಾದ್ಯಗಳ ರುಚಿಯನ್ನು ಹೆಚ್ಚಿಸುವ ನಿಂಬೆಯನ್ನು ಕೆಲವೊಮ್ಮೆ ಫುಡ್ ಪಾಯ್ಸನ್‌ಗೂ ಕಾರಣವಾಗಬಹುದು. ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಡೈರಿ ಉತ್ಪನ್ನಗಳು : ಯಾವುದೇ ರೀತಿಯ ಡೈರಿ ಉತ್ಪನ್ನದೊಂದಿಗೆ ನಿಂಬೆ ಬಳಸಬೇಡಿ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಹಾಲು ಮತ್ತು ನಿಂಬೆಯನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದರಿಂದಾಗಿ ಎದೆಯಲ್ಲಿ ಉರಿ ಮತ್ತು ವಾಂತಿಯಂತಹ ತೊಂದರೆಗಳು ಉಂಟಾಗಬಹುದು.
ಮಸಾಲೆ ಆಹಾರ : ಮಸಾಲೆಯುಕ್ತ ಆಹಾರವನ್ನು ಸೇವಿಸುವಾಗ ನಿಂಬೆ ಬಳಸುವುದನ್ನು ತಪ್ಪಿಸಿ. ನಿಂಬೆಹಣ್ಣಿನ ಸೇವನೆಯು ಅಸಿಡಿಟಿ ಸಮಸ್ಯೆಯನ್ನು ಗಂಭೀರವಾಗಿ ಉಲ್ಬಣಗೊಳಿಸುತ್ತದೆ. ಏಕೆಂದರೆ ನಿಂಬೆಯನ್ನು ಮಸಾಲೆ ವರ್ಧಕ ಎಂದೂ ಕರೆಯುತ್ತಾರೆ. ನೀವು ಮಸಾಲೆಯುಕ್ತ ಊಟಕ್ಕೆ ನಿಂಬೆ ಸೇರಿಸಿದರೆ, ಅದು ನಿಮಗೆ ತೊಂದರೆಯುಂಟುಮಾಡಬಹುದು.
ಕೆಂಪು ವೈನ್ : ಕೆಲವು ಆಹಾರಗಳಂತೆ, ನಿಂಬೆಯನ್ನು ಕೆಂಪು ವೈನ್ ಜೊತೆಗೆ ಸೇವಿಸಬಾರದು. ನಿಂಬೆಹಣ್ಣುಗಳು ವೈನ್‌ನ ರುಚಿ ಮತ್ತು ಸುವಾಸನೆಯನ್ನು ಹಾಳುಮಾಡಬಹುದು ಮತ್ತು ನಿಮ್ಮ ಆರೋಗ್ಯವನ್ನು ಹಾನಿಗೊಳಿಸಬಹುದು.
ಮೊಸರು ಮತ್ತು ಮಜ್ಜಿಗೆ : ಮೊಸರು ಅಥವಾ ಮಜ್ಜಿಗೆಯೊಂದಿಗೆ ನಿಂಬೆ ಮಿಶ್ರಣ ಮಾಡುವುದು ಸೂಕ್ತವಲ್ಲ. ಆಯುರ್ವೇದದ ಪ್ರಕಾರ, ಹಾಲಿನ ಉತ್ಪನ್ನಗಳಿಗೆ ನಿಂಬೆ ಸೇರಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಮೊಸರು ಮತ್ತು ಮಜ್ಜಿಗೆಯ ರುಚಿಯನ್ನು ಹಾಳು ಮಾಡುತ್ತದೆ ಮತ್ತು ದೇಹದಲ್ಲಿ ಆಮ್ಲೀಯತೆಯನ್ನು ಉಂಟುಮಾಡುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1