ಕೋಟಿಗೊಬ್ಬ 2 ಹಾಗೂ ಕೋಟಿಗೊಬ್ಬ 3 ನಂತಹ ಹಿಟ್‌ಗಳಿಗೆ ಹೆಸರುವಾಸಿಯಾದ ನಿರ್ಮಾಪಕ ಸೂರಪ್ಪ ಬಾಬು ಹೊಸ ಪ್ರಾಜೆಕ್ಟ್ ಘೋಷಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಶಿವಣ್ಣ ಮತ್ತು ಗಣೇಶ್ ತೆರೆಯ ಮೇಲೆ ಒಂದಾಗಿದ್ದಾರೆ.

ಕೋಟಿಗೊಬ್ಬ 2 ಹಾಗೂ ಕೋಟಿಗೊಬ್ಬ 3 ನಂತಹ ಹಿಟ್‌ಗಳಿಗೆ ಹೆಸರುವಾಸಿಯಾದ ನಿರ್ಮಾಪಕ ಸೂರಪ್ಪ ಬಾಬು ಹೊಸ ಪ್ರಾಜೆಕ್ಟ್ ಘೋಷಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಶಿವಣ್ಣ ಮತ್ತು ಗಣೇಶ್ ತೆರೆಯ ಮೇಲೆ ಒಂದಾಗಿದ್ದಾರೆ.
ಶಿವಗಣ ಎಂಬ ಟೈಟಲ್ ನ ಸಿನಿಮಾವನ್ನು ನಂದ ಕಿಶೋರ್ ಅವರು ನಿರ್ದೇಶನ ಮಾಡಲಿದ್ದಾರೆ. ಅಧ್ಯಕ್ಷ, ರನ್ನ ವಿಕ್ಟರಿ, ಮುಕುಂದ ಮುರಾರಿ, ಮತ್ತು ಪೊಗರು ನಿರ್ದೇಶಕರು ಪ್ರಸ್ತುತ ಮೋಹನ್ ಲಾಲ್ ಜೊತೆ ಚೊಚ್ಚಲ ಮಲಯಾಳಂ ಸಿನಿಮಾ ವೃಷಭದಲ್ಲಿ ನಿರತರಾಗಿದ್ದಾರೆ .
ಶಿವಣ್ಣ ಮತ್ತು ಗಣೇಶ್ ಅವರೊಂದಿಗಿನ ಹೊಸ ಸಿನಿಮಾ ಆರಂಭಿಸುವ ಮುನ್ನ ಸೆಪ್ಟೆಂಬರ್‌ನಲ್ಲಿ ತಮ್ಮ ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಲು ಯೋಜಿಸಿದ್ದಾರೆ. ಈ ಚಿತ್ರವು ನಟರ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿದ್ದು ಕೌಟುಂಬಿಕ-ಕಮರ್ಷಿಯಲ್ ಎಂಟರ್‌ಟೈನರ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಮುಹೂರ್ತ ಸಮಾರಂಭದೊಂದಿಗೆ ಈ ಯೋಜನೆಯು ಅಧಿಕೃತವಾಗಿ ಪ್ರಾರಂಭವಾಗಲಿದೆ.