ಹೊಸ ವರ್ಷ 2026ರೊಂದಿಗೆ ಬದಲಾಗುವ ಪ್ರಮುಖ ನಿಯಮಗಳು
2025 ವರ್ಷ ಅಂತ್ಯಕ್ಕೆ ಬರುತ್ತಿದ್ದು, ಜನವರಿ 1, 2026 ರಿಂದ ಹೊಸ ವರ್ಷದ ಆರಂಭವಾಗುತ್ತಿದೆ. ಈ ಹೊಸ ವರ್ಷದ ಜೊತೆಗೆ ದೇಶದಾದ್ಯಂತ ಅನೇಕ ಪ್ರಮುಖ ಆರ್ಥಿಕ ಮತ್ತು ಹಣಕಾಸು ನಿಯಮಗಳು ಬದಲಾಗುತ್ತಿವೆ, ಇವು ನೇರವಾಗಿ ಸಾಮಾನ್ಯ ಜನರ ದಿನನಿತ್ಯದ ಜೀವನ ಮತ್ತು ಜೇಬಿನ ಮೇಲೆ ಪರಿಣಾಮ ಬೀರುತ್ತವೆ.
LPG ಗ್ಯಾಸ್ ಬೆಲೆ, ಪ್ಯಾನ್-ಆಧಾರ್ ಲಿಂಕ್, UPI ಪಾವತಿ ನಿಯಮಗಳು, ಬ್ಯಾಂಕ್ ಬಡ್ಡಿದರ, ವಾಹನ ಬೆಲೆ ಏರಿಕೆ, ಹೊಸ ತೆರಿಗೆ ಕಾನೂನು ಹಾಗೂ 8ನೇ ವೇತನ ಆಯೋಗ ಸೇರಿದಂತೆ ಹಲವು ಬದಲಾವಣೆಗಳು ಜನವರಿ 1ರಿಂದ ಜಾರಿಗೆ ಬರಲಿವೆ.
1) PAN – Aadhaar ಲಿಂಕ್ ಕಡ್ಡಾಯ
ಡಿಸೆಂಬರ್ ಗಡುವಿನೊಳಗೆ PAN ಮತ್ತು Aadhaar ಲಿಂಕ್ ಮಾಡದಿದ್ದರೆ, ಜನವರಿ 1ರಿಂದ PAN ನಿಷ್ಕ್ರಿಯವಾಗಲಿದೆ. ಇದರಿಂದ ITR ಮರುಪಾವತಿ, ಬ್ಯಾಂಕಿಂಗ್ ವ್ಯವಹಾರಗಳು ಹಾಗೂ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಅಡಚಣೆ ಉಂಟಾಗಲಿದೆ.
2) UPI, SIM ಮತ್ತು ಸಂದೇಶ ನಿಯಮಗಳು
ಡಿಜಿಟಲ್ ವಂಚನೆ ತಡೆಯಲು ಬ್ಯಾಂಕ್‌ಗಳು UPI ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸುತ್ತಿವೆ. SIM ಪರಿಶೀಲನೆ ಕಡ್ಡಾಯವಾಗುವುದರಿಂದ WhatsApp, Telegram, Signal ಮುಂತಾದ ಅಪ್ಲಿಕೇಶನ್‌ಗಳ ದುರ್ಬಳಕೆ ಕಡಿಮೆಯಾಗಲಿದೆ.
3) FD ಮತ್ತು ಸಾಲದ ಬಡ್ಡಿದರ
SBI, PNB, HDFC ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಹೊಸ ಸಾಲದ ದರ ಹಾಗೂ ಸ್ಥಿರ ಠೇವಣಿ (FD) ಬಡ್ಡಿದರಗಳನ್ನು ಜನವರಿಯಿಂದ ಜಾರಿಗೆ ತರುತ್ತಿವೆ. ಇದು ಹೂಡಿಕೆದಾರರಿಗೆ ಮತ್ತು ಸಾಲಗಾರರಿಗೆ ಪ್ರಭಾವ ಬೀರುತ್ತದೆ.
4) LPG ಸಿಲಿಂಡರ್ ಬೆಲೆ
ಪ್ರತಿ ತಿಂಗಳ ಮೊದಲ ದಿನ LPG ಬೆಲೆ ಪರಿಷ್ಕರಣೆ ಆಗುತ್ತದೆ. ಜನವರಿ 1ರಿಂದ ಗೃಹ ಮತ್ತು ವಾಣಿಜ್ಯ LPG ಬೆಲೆಯಲ್ಲಿ ಏರಿಳಿತ ಸಾಧ್ಯತೆ ಇದೆ.
5) CNG, PNG ಮತ್ತು ATF ಬೆಲೆ
LPG ಜೊತೆಗೆ CNG, PNG ಮತ್ತು ಜೆಟ್ ಇಂಧನ (ATF) ಬೆಲೆಗಳೂ ಜನವರಿಯಿಂದ ಬದಲಾಗುವ ಸಾಧ್ಯತೆ ಇದೆ.
6) ಹೊಸ ಆದಾಯ ತೆರಿಗೆ ಕಾನೂನು
ಹೊಸ ಆದಾಯ ತೆರಿಗೆ ಕಾಯ್ದೆ 2026-27 ಹಣಕಾಸು ವರ್ಷದಿಂದ ಜಾರಿಗೆ ಬರಲಿದೆ. ITR ಫಾರ್ಮ್‌ಗಳನ್ನು ಸರಳಗೊಳಿಸಲಾಗುತ್ತಿದ್ದು, ಹೊಸ ನಿಯಮಗಳ ಮಾಹಿತಿ ಜನವರಿಯಲ್ಲೇ ಪ್ರಕಟವಾಗಲಿದೆ.
7) 8ನೇ ವೇತನ ಆಯೋಗ
7ನೇ ವೇತನ ಆಯೋಗ ಡಿಸೆಂಬರ್ 31, 2025ಕ್ಕೆ ಮುಕ್ತಾಯಗೊಳ್ಳಲಿದೆ. ಜನವರಿ 1, 2026ರಿಂದ 8ನೇ ವೇತನ ಆಯೋಗ ಜಾರಿಗೆ ಬರಲಿದೆ ಎಂಬ ನಿರೀಕ್ಷೆ ಇದೆ. ಇದರಿಂದ ನೌಕರರ ಸಂಬಳ ಮತ್ತು ಪಿಂಚಣಿ ಹೆಚ್ಚಳ ಸಾಧ್ಯ.
8) ರೈತರಿಗೆ ಹೊಸ ನಿಯಮಗಳು
PM-Kisan ಯೋಜನೆ ಪಡೆಯಲು ರೈತ ID ಕಡ್ಡಾಯ. ಬೆಳೆ ವಿಮಾ ಯೋಜನೆಯಡಿ ಕಾಡುಪ್ರಾಣಿಗಳಿಂದ ಹಾನಿಯಾದ ಬೆಳೆಗಳಿಗೆ 72 ಗಂಟೆಯೊಳಗೆ ವರದಿ ಮಾಡಿದರೆ ಪರಿಹಾರ ಸಿಗಲಿದೆ.
9) ವಾಹನ ಬೆಲೆ ಏರಿಕೆ
BMW, Nissan, MG Motor, Renault, Ather ಸೇರಿದಂತೆ ಹಲವು ಕಂಪನಿಗಳು ಜನವರಿ 1ರಿಂದ ವಾಹನ ಬೆಲೆ ಹೆಚ್ಚಳ ಘೋಷಿಸಿವೆ.
10) SIM & ಮೆಸೇಜಿಂಗ್ ನಿಯಮಗಳು
ಡಿಜಿಟಲ್ ವಂಚನೆ ತಡೆಗೆ SIM ಪರಿಶೀಲನೆ ಮತ್ತಷ್ಟು ಕಠಿಣವಾಗಲಿದೆ.
11) ಪೆಟ್ರೋಲ್-ಡೀಸೆಲ್ ವಾಹನ ನಿರ್ಬಂಧ
ದೆಹಲಿ, ನೋಯ್ಡಾ ಮೊದಲಾದ ನಗರಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ಪೆಟ್ರೋಲ್-ಡೀಸೆಲ್ ವಾಣಿಜ್ಯ ವಾಹನಗಳ ಮೇಲೆ ನಿರ್ಬಂಧ ಸಾಧ್ಯತೆ.
12) ಸರ್ಕಾರಿ ನೌಕರರಿಗೆ ಪರಿಹಾರ
8ನೇ ವೇತನ ಆಯೋಗದ ಜೊತೆಗೆ ತುಟ್ಟಿ ಭತ್ಯೆ (DA) ಹೆಚ್ಚಳದ ನಿರೀಕ್ಷೆ ಇದೆ.
Views: 21