ದೇಹದಲ್ಲಿ ಪ್ರೋಟೀನ್ ಕೊರತೆಯಿದ್ದರೆ, ಕೂದಲು ದುರ್ಬಲಗೊಳ್ಳುತ್ತದೆ ಮಾತ್ರವಲ್ಲ ವೇಗವಾಗಿ ಉದುರುತ್ತದೆ.

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಪ್ರತಿ ಮನೆಯಲ್ಲಿಯೂ ಕೇಳಿ ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಯುವ ಜನರು ಬೋಳು ತಲೆ ಸಮಸ್ಯೆ ಎದುರಿಸುತ್ತಿದ್ದಾರೆ. ಧೂಳು, ಮಣ್ಣು, ಸೂರ್ಯನ ಬೆಳಕು ಮತ್ತು ಮಾಲಿನ್ಯದ ಕಾರಣದಿಂದ ಕೂದಲು ಉದರುವ ಸಮಸ್ಯೆ ಎದುರಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಕೂದಲು ದುರ್ಬಲಗೊಂಡು ಉದುರಲು ಪ್ರಾರಂಭಿಸುತ್ತದೆ. ಆದರೆ, ಕೆಲವೊಮ್ಮೆ ನಾವು ಆಹಾರದ ವಿಷಯದಲ್ಲಿ ಮಾಡುವ ತಪ್ಪುಗಳಿಂದ ಕೂಡಾ ಕೂದಲು ಉದುರುತ್ತದೆ.
ಪ್ರೋಟೀನ್ ಕೊರತೆ ಕೂದಲು ಉದುರುವುದಕ್ಕೆ ಕಾರಣ :
ದೇಹದಲ್ಲಿ ಪ್ರೋಟೀನ್ ಕೊರತೆಯಿದ್ದರೆ ಕೂದಲು ದುರ್ಬಲಗೊಳ್ಳುತ್ತದೆ ಮಾತ್ರವಲ್ಲ ವೇಗವಾಗಿ ಉದುರುತ್ತದೆ. ಪೋಷಕಾಂಶಗಳ ಮೂಲಕ ಕೂದಲಿಗೆ ಆಂತರಿಕ ಪೋಷಣೆಯನ್ನು ನೀಡಿದರೆ ಕೂದಲು ಉದುರುವಿಕೆಯ ಸಮಸ್ಯೆಯನ್ನು ತೊಡೆದುಹಾಕಬಹುದು.
ಕೂದಲಿಗೆ ಪ್ರೋಟೀನ್ ಏಕೆ ಮುಖ್ಯ? :
ನಾವು ಸಾಮಾನ್ಯವಾಗಿ ದೇಹ, ಸ್ನಾಯುಗಳು ಮತ್ತು ಮೂಳೆಗಳ ಆರೋಗ್ಯಕ್ಕಾಗಿ ಪ್ರೋಟೀನ್ ಭರಿತ ಆಹಾರವನ್ನು ಸೇವಿಸುತ್ತೇವೆ. ಆದರೆ, ಈ ಪೋಷಕಾಂಶದ ಕೊರತೆಯು ನಮ್ಮ ಕೂದಲಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.
ಪ್ರೋಟೀನ್ ಕೊರತೆಯ ಲಕ್ಷಣಗಳು :
ಸರಿಯಾದ ಸಮಯದಲ್ಲಿ ಪ್ರೋಟೀನ್ ಕೊರತೆಯ ಲಕ್ಷಣಗಳನ್ನು ಗುರುತಿಸಿದರೆ, ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಸಾಮಾನ್ಯವಾಗಿ, ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೂದಲು ಇದ್ದಕ್ಕಿದ್ದಂತೆ ಬೆಳೆಯುವುದನ್ನು ನಿಲ್ಲಿಸುತ್ತದೆ. ಉಗುರುಗಳು ಸಹ ದುರ್ಬಲವಾಗುತ್ತವೆ ಮತ್ತು ಸುಲಭವಾಗಿ ಮುರಿಯುತ್ತವೆ. ಪ್ರೋಟೀನ್ ಕೊರತೆಯು ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೊತೆಗೆ ಇದು ದೇಹದಲ್ಲಿ ನೋವನ್ನು ಉಂಟುಮಾಡುತ್ತದೆ. ದೇಹದಲ್ಲಿ ಪ್ರೋಟೀನ್ ಕೊರತೆಯಾಗಿದೆ ಎನ್ನುವುದಕ್ಕೆ ದೇಹ ನೀಡುವ ಈ ಸಂಕೇತಗಳನ್ನು ಗುರುತಿಸಿ ಪ್ರೋಟೀನ್ ಭರಿತ ಆಹಾರದ ಸೇವನೆಯನ್ನು ಹೆಚ್ಚಿಸಿ.
ಪ್ರೋಟೀನ್ ಪಡೆಯಲು ಈ ವಸ್ತುಗಳನ್ನು ಸೇವಿಸಿ :
1. ಬೇಳೆಕಾಳುಗಳು
2. ಮೊಟ್ಟೆ
3. ಒಣ ಹಣ್ಣುಗಳು
4. ಕಡಲೆಕಾಯಿ
5. ಮೀನು
6. ಹಾಲು
7. ಸೋಯಾಬೀನ್
8. ಪನೀರ್
9. ಚಿಕನ್
10. ಮಾಂಸ
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಸಮಗ್ರ ಸುದ್ದಿ ಅದನ್ನು ಖಚಿತಪಡಿಸುವುದಿಲ್ಲ.)
Source : https://zeenews.india.com/kannada/health/protein-deficiency-may-cause-hair-fall-and-baldness-152141