Home Remedies: ಹವಾಮಾನ ಬದಲಾವಣೆ ಆದಂತೆ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಅದರಲ್ಲೂ ಈ ಮಳೆಗಾಲದಲ್ಲಿ ಬದಲಾಗುತ್ತಿರುವ ಹವಾಮಾನದೊಂದಿಗೆ ವೈರಲ್, ಬ್ಯಾಕ್ಟೀರಿಯಾದ ಸೋಂಕುಗಳ ಅಪಾಯವೂ ಹೆಚ್ಚಿರುತ್ತದೆ.

Home Remedies for Sore Throat: ಹವಾಮಾನ ವೈಪರಿತ್ಯದಿಂದಾಗಿ ಗಂಟಲು ನೋವು ಸರ್ವೇ ಸಾಮಾನ್ಯವಾದ ಸಮಸ್ಯೆ. ಗಂಟಲು ನೋವು ಎಂದರೆ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕು. ಗಂಟಲಿನ ನೋವಿನಿಂದಾಗಿ ಗಂಟಲಿನಲ್ಲಿ ಯಾವಾಗಲೂ ಸೌಮ್ಯವಾದ ನೋವು ಮತ್ತು ಅಸ್ವಸ್ಥತೆಯ ಅನುಭವವಾಗುತ್ತದೆ. ಆದರೆ, ಇದಕ್ಕಾಗಿ ನೀವು ಔಷಧಿಗಳ ಮೊರೆ ಹೋಗುವ ಅಗತ್ಯವಿಲ್ಲ. ಬದಲಿಗೆ, ಗಂಟಲು ನೋವಿನ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದ ಸುಲಭವಾಗಿ ಪರಿಹಾರ ಪಡೆಯಬಹುದು. ಅವುಗಳ ಬಗ್ಗೆ ತಿಳಿಯೋಣ…
ಗಂಟಲು ನೋವಿಗೆ ಅತ್ಯುತ್ತಮ ಮನೆಮದ್ದುಗಳಿವು:-
ಗಾರ್ಗ್ಲಿಂಗ್:
ಗಂಟಲು ನೋವಿಗೆ ಸುಲಭವಾದ ಪರಿಹಾರ ಎಂದರೆ ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಮಾಡುವುದು. ಇದಕ್ಕಾಗಿ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಬೆರಿಸಿ. ಬಳಿಕ ಈ ನೀರಿನಿಂದ ಗಾರ್ಗ್ಲಿಂಗ್ ಮಾಡಿದರೆ ಗಂಟಲು ನೋವಿಗೆ ಶೀಘ್ರವೇ ಪರಿಹಾರ ದೊರೆಯುತ್ತದೆ.
ಜೇನು ತುಪ್ಪ:
ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳಿಂದ ಸಮೃದ್ಧವಾಗಿರುವ ಜೇನು ತುಪ್ಪ ಕೆಮ್ಮು ಮತ್ತು ಶೀತದ ಲಕ್ಷಣಗಳಿಂದ ಪರಿಹಾರ ನೀಡಬಲ್ಲ ಅತ್ಯುತ್ತಮ ಮನೆಮದ್ದು. ಸ್ವಲ್ಪ ಶುಂಠಿಯನ್ನು ನುಣ್ಣಗೆ ಪೇಸ್ಟ್ ಮಾಡಿ ಅದರಲ್ಲಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಸವಿದರೆ ಗಂಟಲು ನೋವು, ಕೆಮ್ಮು, ಶೀತದಿಂದ ಪರಿಹಾರ ದೊರೆಯುತ್ತದೆ.
ಶುಂಠಿ ಕಷಾಯ:
ಮೊದಲಿಗೆ ಲೋಟ ನೀರಿನ್ನು ತೆಗೆದುಕೊಳ್ಳಿ. ಬಳಿಕ ಸಿಪ್ಪೆ ಸುಲಿದ ಶುಂಠಿಯನ್ನು ತುರಿದು ಅದನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಒಂದು ಲೋಟ ನೀರು ಅರ್ಧ ಆಗುವವರೆಗೆ ಚೆನ್ನಾಗಿ ಕುದಿಸಿ, ಅದು ಕುಡಿಯುವಷ್ಟು ತಣ್ಣಗಾದ ಬಳಿಕ ಈ ಕಷಾಯವನ್ನು ಕುಡಿಯಿರಿ. ಒಂದೆರಡು ದಿನ ಈ ಪರಿಹಾರ ಕೈಗೊಳ್ಳುವುದರಿಂದ ಗಂಟಲು ನೋವಿನ ಸಮಸ್ಯೆಗೆ ಉಪಶಮನ ಪಡೆಯಬಹುದು.
ಆಪಲ್ ಸೈಡರ್ ವಿನೆಗರ್:
ಆಂಟಿಮೈಕ್ರೊಬಿಯಲ್, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಆಪಲ್ ಸೈಡರ್ ವಿನೆಗರ್ ಸೋಂಕುಗಳು ಹಾಗೂ ಗಂಟಲು ನೋವಿನಿಂದ ಪರಿಹಾರ ನೀಡುವಲ್ಲಿ ತುಂಬಾ ಪ್ರಯೋಜನಕಾರಿ ಆಗಿದೆ. ಒನು ಲೋಟ ಬೆಚ್ಚಗಿನ ನೀರಿನಲ್ಲಿ ಅರ್ಧಚಮಚದಷ್ಟು ಆಪಲ್ ಸೈಡರ್ ವಿನೆಗರ್ ಮತ್ತು ಚಿಟಿಕೆ ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಈ ನೀರಿನಿಂದ ಗಾರ್ಗ್ಲ್ ಮಾಡಿ. ದಿನದಲ್ಲಿ ಮೂರ್ನಾಲ್ಕು ಬಾರಿ ಈ ರೀತಿ ಮಾಡುವುದರಿಂದ ಗಂಟಲು ನೋವಿಗೆ ಸುಲಭವಾಗಿ ಪರಿಹಾರ ಪಡೆಯಬಹುದು.
ಅರಿಶಿನ:
ಅರಿಶಿನವು ಆಂಟಿವೈರಸ್, ಉರಿಯೂತದ, ಉತ್ಕರ್ಷಣ ನಿರೋಧಕ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಒಳಗೊಂಡಿದೆ. ಇದು ವೈರಲ್ ಸೋಂಕಿನ ಲಕ್ಷಣಗಳನ್ನು ತಡೆಗಟ್ಟಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾಗಿ ಆಗಿದೆ. ಹಾಗಾಗಿ, ಗಂಟಲು ನೋವಿರುವಾಗ ಅರಿಶಿನದ ಹಾಲನ್ನು ತಯಾರಿಸಿ ಕುಡಿಯುವುದರಿಂದ ನಿಮಗೆ ಶೀಘ್ರದಲ್ಲೇ ಪರಿಹಾರ ದೊರೆಯುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.