ODI rankings: 48 ಗಂಟೆಗಳೊಳಗೆ ನಂ.1 ಪಟ್ಟ ಕಳೆದುಕೊಂಡ ಪಾಕಿಸ್ತಾನ; ಭಾರತಕ್ಕೆ ಯಾವ ಸ್ಥಾನ?

ಸದ್ಯ ವಿಶ್ವದ ಇತರ ತಂಡಗಳ ಆಟಗಾರರು ಐಪಿಎಲ್​​ನಲ್ಲಿ ಬ್ಯುಸಿಯಾಗಿದ್ದರೆ, ಪಾಕಿಸ್ತಾನ ಮಾತ್ರ ಕಿವೀಸ್ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡ ಪಾಕಿಸ್ತಾನಕ್ಕೆ ಕೇವಲ 48 ಗಂಟೆಗಳೊಳಗೆ ಕೊಂಚ ಹಿನ್ನಡೆಯುಂಟಾಗಿದೆ.ತವರಿನಲ್ಲಿ ಏಕದಿನ ಸರಣಿ ವಶಪಡಿಸಿಕೊಂಡಿರುವ ಪಾಕಿಸ್ತಾನ 2 ದಿನಗಳ ಹಿಂದೆ ಏಕದಿನ ರ್ಯಾಂಕಿಂಗ್​​ನಲ್ಲಿ ನಂ.1 ಪಟ್ಟಕ್ಕೇರಿತ್ತು. ಆದರೆ ಕೊನೆಯ ಏಕದಿನ ಪಂದ್ಯದಲ್ಲಿ ಕಿವೀಸ್ ಅದ್ಭುತ ಜಯ ಸಾಧಿಸುವ ಮೂಲಕ ಪಾಕ್ ತಂಡದ ನಂ.1 ಪಟ್ಟವನ್ನು ಕಸಿದುಕೊಂಡಿದೆ.ಸದ್ಯ ಕಿವೀಸ್ ವಿರುದ್ಧ ಅಂತಿಮ ಪಂದ್ಯದಲ್ಲಿ ಸೋತ ಪಾಕ್ ಮೊದಲ ಸ್ಥಾನದಿಂದ ಕುಸಿದು 112 ರೇಟಿಂಗ್​​ನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.ಪಾಕ್ ಮೂರನೇ ಸ್ಥಾನಕ್ಕೆ ಕುಸಿಯುವ ಮೂಲಕ ಆಸ್ಟ್ರೇಲಿಯಾ 113 ರೇಟಿಂಗ್​​ನೊಂದಿಗೆ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ.ಐಪಿಎಲ್ ನಡೆಯುತ್ತಿರುವುದರಿಂದ ಟೀಂ ಇಂಡಿಯಾ ಯಾವುದೇ ಏಕದಿನ ಸರಣಿ ಆಡದಿದ್ದರೂ, ರ್ಯಾಂಕಿಂಗ್​ನಲ್ಲಿ 113 ರೇಟಿಂಗ್​​ನೊಂದಿಗೆ 2ನೇ ಸ್ಥಾನವನ್ನು ಪಡೆದುಕೊಂಡಿದೆ.ಇನ್ನುಳಿದಂತೆ ಇಂಗ್ಲೆಂಡ್, ನ್ಯೂಜಿಲೆಂಡ್, ಸೌತ್ ಆಫ್ರಿಕಾ ಕ್ರಮವಾಗಿ 4,5,6 ನೇ ಸ್ಥಾನದಲ್ಲಿವೆ.

source https://tv9kannada.com/photo-gallery/cricket-photos/icc-odi-rankings-pakistans-reign-as-no-1-team-lasts-for-just-48-hours-psr-573134.html

Leave a Reply

Your email address will not be published. Required fields are marked *