ಬಿಪಿ ಕಂಟ್ರೋಲ್ ಸೇರಿದಂತೆ ಈ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿ ಆಯಿಲ್ ಮಸಾಜ್

Oil Massage Benefits: ಹಿಂದೆಲ್ಲಾ ಮಕ್ಕಳಿಗೆ ವಾರಕ್ಕೊಂದು ಬಾರಿ ಆದರೂ ಮೈಗೆಲ್ಲಾ ಎಣ್ಣೆ ಮಸಾಜ್ ಮಾಡಿ, ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿಸುತ್ತಿದ್ದರು. ಆದರೆ, ಈ ಬದಲಾದ ವೇಗ ಜೀವನಶೈಲಿಯಲ್ಲಿ ಯಾರಿಗೂ ಕೂಡ ಅಷ್ಟು ಸಮಯವಾಗಲಿ, ಇಲ್ಲ ಸಂಯಮವಾಗಲಿ ಇರುವುದೇ ಇಲ್ಲ. ಆದರೆ, ಆಯಿಲ್ ಮಸಾಜ್ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? 

Oil Massage Benefits: ಹಿಂದಿನ ಕಾಲದಲ್ಲಿ ಮಕ್ಕಳು ಸಧೃಡರಾಗಿರಲಿ ಎಂದು ವಾರಕ್ಕೆ ಒಮ್ಮೆಯಾದರೂ ಮೈಗೆಲ್ಲಾ ಎಣ್ಣೆ ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡಿಸುತ್ತಿದರು. ಬಳಿಕ ಪ್ರತಿ ವಾರ ಮಾಡುತ್ತಿದ್ದ ಈ ಕೆಲಸ ಹಬ್ಬಗಳಿಗಷ್ಟೇ ಸೀಮಿತವಾಯಿತು. ನಂತರದ ದಿನಗಳಲ್ಲಿ ಸ್ಥಿತಿವಂತರು ಸಲೂನ್ ಗಳಲ್ಲಿ ಬಾಡಿ ಆಯಿಲ್ ಮಸಾಜ್ ಮಾಡುತ್ತಾರೆ. ಇದರ ಹೊರತಾಗಿ ಎಣ್ಣೆ ಮಸಾಜ್ ಪದ್ದತಿಯೇ ಕಣ್ಮರೆಯಾಗುತ್ತಿದೆ. 

ಈ ಬದಲಾದ ಫಾಸ್ಟ್ ಜೀವನಶೈಲಿಯಲ್ಲಿ ಅತಿಯಾದ ಒತ್ತಡದಿಂದಾಗಿ ಬಿಪಿ, ಮಧುಮೇಹದಂತಹ ನಾನಾ ರೀತಿಯ ರೋಗಗಳು ಅತಿ ಚಿಕ್ಕ ವಯಸ್ಸಿನಲ್ಲಿಯೇ ಜನರನ್ನು ಬಾಧಿಸುತ್ತದೆ.  ಆದರೆ, ನಿಮ್ಮ ಬಹುತೇಕ ಸಮಸ್ಯೆಗಳಿಗೆ  ಆಯಿಲ್ ಮಸಾಜ್ ನಿಮಗೆ ತುಂಬಾ ಪ್ರಯೋಜನಕಾರಿ ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು.

ಹೌದು, ಮೂರು ಹೊತ್ತು ಮೊಬೈಲ್, ಕಂಪ್ಯೂಟರ್ ಎಂದು ಎಲೆಕ್ಟ್ರಾನಿಕ್ ಉಪಕರಣಗಳ ಮುಂದೆ ಕೂರುವವರಿಗೆ ಕತ್ತು ನೋವು, ಬೆನ್ನು ನೋವು ಸರ್ವೇ ಸಾಮಾನ್ಯ. ಅಷ್ಟೇ ಅಲ್ಲದೆ, ಈ ವೇಗದ ಜೀವನ ಶೈಲಿಯಲ್ಲಿ ಒತ್ತಡವೂ ಹೆಚ್ಚಾಗಿದ್ದು ಇದರಿಂದಾಗಿ ಕೆಲವರು ರಕ್ತದೊತ್ತಡದಂತಹ ರೋಗಗಳಿಗೂ ಬಲಿಯಾಗುತ್ತಾರೆ. ಆದರೆ, ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೂ ಕೂಡ ಆಯಿಲ್ ಮಸಾಜ್ ನಿಮಗೆ ಸುಲಭ ಪರಿಹಾರ ನೀಡಬಲ್ಲದು ಎಂದು ನಿಮಗೆ ತಿಳಿದಿದೆಯೇ? ಬಾಡಿ ಮಸಾಜ್‌ನ ಕೆಲವು ಅದ್ಭುತ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ… 

ದೇಹಕ್ಕೆ ಆಯಿಲ್ ಮಸಾಜ್ ಪ್ರಯೋಜನಗಳು: 
ವಿಶ್ರಾಂತಿಯ ಅನುಭವ: 

ಬಾಡಿ ಮಸಾಜ್ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿಯ ಭಾವನೆ ಉಂಟಾಗುತ್ತದೆ. 

ರಕ್ತ ಪರಿಚಲನೆ ಸುಧಾರಣೆ: 
ದೇಹಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿದಾಗ, ನಿಮ್ಮ ಸ್ನಾಯುಗಳು ಆಕ್ಟೀವ್ ಆಗುತ್ತದೆ. ಇದಲ್ಲದೆ, ಮಸಾಜ್ ಮಾಡುವಾಗ ನಿಮ್ಮ ಚರ್ಮದ ಮೇಲ್ಮೈಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. 

ಬಿಪಿ ನಿಯಂತ್ರಣ: 
ಬಾಡಿ ಮಸಾಜ್ ಮಾಡುವುದರಿಂದ ಮೂಡ್ ಕೂಡ ತಾಜಾ ಮತ್ತು ಉತ್ತಮವಾಗಿರುತ್ತದೆ. ಇದು ಮನಸ್ಸನ್ನು ನಿರಾಳವಾಗಿಸುತ್ತದೆ. ಇದರಿಂದಾಗಿ ಅಧಿಕ ರಕ್ತದೊತ್ತಡ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು. 

ಇಮ್ಯುನಿಟಿ ಬಲಗೊಳ್ಳುತ್ತದೆ: 
ಸಂಶೋಧನೆಯೊಂದರ ಪ್ರಕಾರ, ನಿಯಮಿತವಾಗಿ ಆಯಿಲ್ ಮಸಾಜ್ ಮಾಡುವುದರಿಂದ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಳಪಡಿಸುತ್ತದೆ ಎಂದು ಹೇಳಲಾಗುತ್ತದೆ. 

ಮೈ-ಕೈ ನೋವಿನಿಂದ ಪರಿಹಾರ: 
ಈ ಒತ್ತಡಭರಿತ ಜೀವನದಲ್ಲಿ ಸದಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದಲೂ ಮೈ-ಕೈ ನೋವು ಹೆಚ್ಚಾಗುತ್ತದೆ. ಈ ಸಮಸ್ಯೆಗೆ ಆಯಿಲ್ ಮಸಾಜ್ ಅತ್ಯುತ್ತಮ ಪರಿಹಾರವಾಗಿದೆ. ದೇಹಕ್ಕೆ ಎಣ್ಣೆ ಮಸಾಜ್ ಮಾಡುವುದರಿಂದ ನಿಮ್ಮ ದೇಹದ ಸ್ನಾಯುಗಳು ಮತ್ತು ನರಗಳ ಮೇಲೆ ಅದರ ಕ್ರಿಯೆಯಿಂದಾಗಿ ಮಸಾಜ್ ಸೌಮ್ಯದಿಂದ ಮಧ್ಯಮ ದೇಹದ ನೋವನ್ನು ನಿವಾರಿಸುತ್ತದೆ. 

ಟ್ಯಾನಿಂಗ್ ರಿಮೂ ಮಾಡಲು: 
ದೇಹಕ್ಕೆ ಆಯಿಲ್ ಮಸಾಜ್ ಮಾಡುವುದರಿಂದ ಇದು ಕೊಳೆ ಮತ್ತು ಸತ್ತ ಚರ್ಮವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಟ್ಯಾನಿಂಗ್ ತೆಗೆಯಲು ಹಾಗೂ ಸೋಂಕು ಮುಕ್ತವಾಗಿರಲು ಸಹಾಯಕವಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Samagrasuddi ಖಚಿತಪಡಿಸುವುದಿಲ್ಲ.  

Source : https://zeenews.india.com/kannada/health/oil-massage-is-very-beneficial-for-these-problems-including-bp-control-149723

Leave a Reply

Your email address will not be published. Required fields are marked *