OMG ! ಕಾರ್ ಇಂಜಿನ್ ನಲ್ಲಿ 48 ಕಿ.ಮೀಗಳವರೆಗೆ ಸಿಲುಕಿಕೊಂಡ ಪುಟ್ಟ ಪ್ರಾಣ, ನಂತರ ನಡೆದಿದ್ದು ಮಾತ್ರ ಆ ದೇವರ ಇಚ್ಚೆ.

Dog Rescue Video: ಈ ವಿಡಿಯೋ ನೋಡಿ ನೀವೂ ಕೂಡ ‘ಜಾಕೋ ರಾಖೆ ಸಾಯಿಯಾ, ಮಾರ್ ಸಕೇ ನಾ ಕೊಯ್’ ಎಂದು ಹೇಳುವುದು ಗ್ಯಾರಂಟಿ. ಏಕೆಂದರೆ ನಿಜಕ್ಕೂ ಈ ಘಟನೆ ತುಂಬಾ ಭಯಾನಕವಾಗಿದೆ. ಬಡಪಾಯಿ ನಾಯಿಯ ಪ್ರಾಣ ಉಳಿಯುತ್ತೇ ಅಂತ ಯಾರೂ ಅಂದುಕೊಂಡಿರಲಿಲ್ಲ. ಆದರೆ, ಕೊನೆಯಲ್ಲಿ ಮರಿಯನ್ನು ಇಂಜಿನ್ ನಿಂದ ಜೀವಂತ ಹೊರತೆಗೆಯಲಾಗಿದೆ.   

Dog Stuck In Car Engine: ಜೀವನದಲ್ಲಿ ಅನೇಕ ಬಾರಿ ನಮ್ಮ ಕಣ್ಣುಗಳ ಎದುರಲ್ಲೇ ನಡೆಯುವ ಕೆಲ ಘಟನೆಗಳು ನಂಬಲಸಾಧ್ಯವಾಗಿರುತ್ತವೆ. ಇತ್ತೀಚೆಗಷ್ಟೇ ಅಂತಹುದೊಂದು ಘಟನೆ ಮುನ್ನೆಲೆಗೆ ಬಂದಿದ್ದು, ಕಾರಿನ ಇಂಜಿನ್ ನಲ್ಲಿ ಸಿಲುಕಿಕೊಂಡ ಒಂದು ಪುಟ್ಟ ನಾಯಿಯೊಂದರ ಕಿರುಚಾಟ 48 ಕಿ.ಮೀ. ಪ್ರಯಾಣದ ಬಳಿಕ ಕೇಳಿಬಂದಿದ್ದು, ನಂತರ ನಡೆದ ಪ್ರಯತ್ನದಲ್ಲಿ ಅದು ಅಂತಿಮವಾಗಿ ಬದುಕುಳಿದಿದೆ.

ಈ ಘಟನೆ ಅಮೆರಿಕದ ಕಾನ್ಸಾಸ್‌ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ವೀಡಿಯೋವನ್ನು ಬಳಕೆದಾರರೊಬ್ಬರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಇಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಕಾನ್ಸಾಸ್‌ನಿಂದ ಮಿಸೌರಿಗೆ ಸುಮಾರು ಐವತ್ತು ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಈ ವೇಳೆ ಅಲ್ಲಿಗೆ ಹೋಗುತ್ತಿದ್ದ ವೇಳೆ ಕಾರಿನ ಇಂಜಿನ್‌ನಲ್ಲಿ ಪುಟ್ಟ ಜೀವವೊಂದು ಸಿಕ್ಕಿಹಾಕಿಕೊಂಡಿರುವುದು ಕಾರಿನಲ್ಲಿದ್ದ ಯಾರಿಗೂ ಕೂಡ ಗೊತ್ತಾಗಿಲ್ಲ.

ಈ ಕಾರಿನ ಇಂಜಿನ್‌ನಲ್ಲಿ ಚಿಕ್ಕ ಪಪಿ ಅಂದರೆ ನಾಯಿ ಸಿಕ್ಕಿಹಾಕಿಕೊಂಡಿತ್ತು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಈ ಸಣ್ಣ ನಾಯಿಮರಿ ಅರಿವಿಲ್ಲದೆ ಕಾರಿನ ಇಂಜಿನ್ ವಿಭಾಗಕ್ಕೆ ತೂರಲ್ಪಟ್ಟಿದೆ ಮತ್ತು ಅದಕ್ಕೆ ಹೊರಬರುವ ದಾರಿ ತಿಳಿಯದೆ ಅಲ್ಲಿಯೇ ಸಿಕ್ಕಿಬಿದ್ದಿದೆ. ಇದಾದ ನಂತರ, ಕಾರಿನ ಚಾಲಕನಿಗೆ ಬಹುಶಃ ಈ ಬಗ್ಗೆ ತಿಳಿದಿರಲಿಲ್ಲ ಮತ್ತು ಈ ಸ್ಥಿತಿಯಲ್ಲಿ ಅವನು ಕನ್ಸಾಸ್‌ನಿಂದ ಮಿಸೌರಿಗೆ ಸುಮಾರು 30 ಮೈಲುಗಳ ಪ್ರಯಾಣವನ್ನು ಪೂರ್ಣಗೊಳಿಸಿದ್ದಾನೆ.

ಇದಾದ ಬಳಿಕ ಎಲ್ಲರೂ ಅಲ್ಲಿಗೆ ತಲುಪಿದಾಗ ಮಹಿಳೆಯೊಬ್ಬರು ಬಡಪಾಯಿ ಪ್ರಾಣಿಯ ಕಿರುಚಾಟ ಕೇಳಿದ್ದಾರೆ. ಬಳಿಕ ಅವರು ಕೂಲಂಕುಷವಾಗಿ ತಮ್ಮ ಕಾರನ್ನು ಪರಿಶೀಲಿಸಿದಾಗ ನಾಯಿಯೊಂದು ಇಂಜಿನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ. ಇದಾದ ನಂತರ ಎಂಜಿನ್ ನ ಬಾನೆಟ್ ತೆರೆದು ಅದನ್ನು ಹೊರಗೆ ತೆಗೆಯಲಾಗಿದೆ. ಅದು ಬದುಕುಳಿದಿದ್ದು ಮಾತ್ರ ಆ ದೇವರಿಗೆ ಕೃತಜ್ಞತೆ ಸಲ್ಲಿಸುವ ವಿಷಯವಾಗಿತ್ತು. ಸದ್ಯ ಈ ನಾಯಿಯನ್ನು ರಕ್ಷಿಸಿ ಹೊರ ತೆಗೆಯಲಾಗಿದ್ದು, ಅದರ ಆರೋಗ್ಯ ಸ್ಥಿತಿಯನ್ನು ನೋಡಿಕೊಂಡು ಆಹಾರ ಮತ್ತು ಪಾನೀಯವನ್ನೂ ನೀಡಲಾಗುತ್ತಿದೆ.

Source: https://zeenews.india.com/kannada/world/dog-stuck-in-car-engine-for-48-kilometers-rest-is-just-gods-grace-131065

Leave a Reply

Your email address will not be published. Required fields are marked *