ಇದೇ 23ರಂದು”ಮಾಸಿಕ ಗಮಕ ವಾಚನ-ವ್ಯಾಖ್ಯಾನ” ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಫೆ,21 : ಚಿತ್ರದುರ್ಗ ನಗರದ ಗಮಕ ಕಲಾಭಿಮಾನಿಗಳ ಸಂಘವು ನಡೆಸುತ್ತಿರುವ ಮಾಸಿಕ ಗಮಕ ವಾಚನ-ವ್ಯಾಖ್ಯಾನ ಸಂಭ್ರಮದ 19ನೇ ಕಾರ್ಯಕ್ರಮವು ಇದೇ ತಿಂಗಳ 23/2/2025, ಭಾನುವಾರ ಸಂಜೆ 6 ಗಂಟೆಗೆ ನಗರದ ಜೆ.ಸಿ.ಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ “ಶ್ರೀ ಕೆ.ಪಿ.ರತ್ನಾಕರ ಭಟ್ಟ”, ಇವರು ರಚಿಸಿರುವ “ಶ್ರೀ ಶಂಕರಾಯಣ” ಎಂಬ ಗ್ರಂಥದಿಂದ ಆಯ್ದ ಕಥಾಭಾಗವನ್ನು ಚಿತ್ರದುರ್ಗದ ಶ್ರೀ ಶಾರದಾ ಸಂಗೀತ ಕಲಾ ಕೇಂದ್ರದ ವಿದ್ಯಾರ್ಥಿಗಳು ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ನಡೆಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ಶ್ರೀಮತಿ ಎಸ್.ವಿಜಯಮ್ಮ, ಭಾಗವಹಿಸಲಿದ್ದಾರೆಂದು ಸಂಘದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *