
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ. 29 : ಶ್ರೀಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ್ವರರಾದ ಲಿಂ|| ಮರುಳಾರಾಧ್ಯ ಶಿವಾಚಾರ್ಯ ಮಹಾ ಭಗವತ್ಪಾದಕರ 30ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭವೂ ಏ.2ರ ಬುಧವಾರ ನಗರದ ರಂಗಯ್ಯನ ಬಾಗಿಲ ಬಳಿಯಿರುವ ಶ್ರೀ ಉಜ್ಜಯಿನಿ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಜ್ಜಯಿನಿ ಮಠದ ಕಾರ್ಯದರ್ಶಿಗಳಾದ ಯು.ಎಂ.ಆರ್.ಈಶ್ವರ ಪ್ರಸಾದ್ ತಿಳಿಸಿದ್ದಾರೆ.
ಏ,2ರಂದು ಬೆಳಿಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ವಟುಗಳಿಗೆ ಲಿಂಗದೀಕ್ಷಾ(ಅಯ್ಯಚಾರ)ಕಾರ್ಯಕ್ರಮ ನಡೆಯಲಿದೆ. ನಂತರ ಲಿಂ||ಜಗದ್ಗುರುಗಳ ಕರ್ತೃಗದ್ದುಗೆಗೆ ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಮಹಾ ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ನಡೆಸಲಾಗುವುದು. ಇದಾದ ನಂತರ ಬೆಳಿಗ್ಗೆ 10 ಗಂಟೆಗೆ 108 ಜನ ಮುತೈದೆಯರಿಗೆ ಉಡಿ ತುಂಬುವ ಕಾರ್ಯವನ್ನು
ನಡೆಸಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳನ್ನು ಡಾ.ವಿರೇಶ್ ಹೀರೇಮಠರವರು ನಡೆಸಿಕೊಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಜನ ಜಾಗೃತಿ ಹಾಗೂ ಧರ್ಮ ಸಭಾ ಕಾರ್ಯಕ್ರಮ ನಡೆಯಲಿದ್ದು, ಲಕ್ಷ್ಮೇಶ್ವರದ ಕರೇವಾಡಿ ಮಠದ ಶ್ರೀ ಮಳೆ
ಮಲ್ಲಿಕಾರ್ಜನ ಶಿವಾಚಾರ್ಯ ಶ್ರೀಗಳು, ಮುಸ್ಟೂರು ಓಂಕಾರೇಶ್ವರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಶ್ರೀಗಳು, ಮೈಸೂರಿನ
ಹಿರೇಮಠ ಬನ್ನಿಕೂಪ್ಪ ಹಾಗೂ ಅರಮನೆಯ ಜಪದಕಟ್ಟೆ ಮಠದ ಡಾ.ಸುಜ್ಞಾನದೇವ ಶಿವಾಚಾರ್ಯ ಶ್ರೀಗಳು, ಉಕ್ಕಡಗಾತ್ರಿಯ ಶ್ರೀ
ಹಾಲಶಂಕರ ಶಿವಾಚಾರ್ಯ ಶ್ರೀಗಳು, ಬೀದರ್ ಎಣುಕಲ್ಲುಗಡ್ಡೆಯ ಶ್ರೀ ವೀರಭದ್ರ ಶ್ರೀಗಳು ಹಾಗೂ ದೇವದುರ್ಗದ ಶಿಖರಮಠದ ಶ್ರೀ
ಸಿದ್ದರಾಮ ಶಿವಾಚಾರ್ಯ ಶ್ರೀಗಳು ಸಮಾರಂಭದ ನೇತೃತ್ವವನ್ನು ವಹಿಸಲಿದ್ದಾರೆ.

ಈ ಸಮಾರಂಭಕ್ಕೆ ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ, ಎಂ.ಚಂದ್ರಪ್ಪ, ನಗರಾಭೀವೃದ್ದಿ
ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್, ನಗರಸಭಾ ಸದಸ್ಯರಾದ ಎನ್.ಚಂದ್ರಶೇಖರ್ ಜಂಗಮ ಸಮಾಜದ ಅಧ್ಯಕ್ಷರಾದ
ಮಲ್ಲಿಕಾರ್ಜನಯ್ಯ ಹಾಗೂ ಉಜ್ಜಯನಿ ಮಠದ ನಿಯೋಜಿತ ಉತ್ತರಾಧಿಕಾರಿಗಳಾದ ಅಭೀಷೇಕ ದೇವರು ಭಾಗವಹಿಸಲಿದ್ದಾರೆ.
ವಟುಗಳಿಗೆ ಲಿಂಗದೀಕ್ಷಾ(ಅಯ್ಯಚಾರ)ಯನ್ನು ನೀಡಿಸುವಂತ ಪೋಷಕರು ತಮ್ಮ ಮಕ್ಕಳ ಹೆಸರನ್ನು ಹಾಗೂ ಉಡಿ ತುಂಬಿಸಿಕೊಳ್ಳಲು ಇಚ್ಚಿಸುವ ಮುತೈದೆಯರು ಏ. 1ರ ಮಧ್ಯಾಹ್ನದೊಳಗಾಗಿ ಉಜ್ಜಯಿನಿ ಮಠದಲ್ಲಿ ನೊಂದಾಯಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ ಎಂದು ಉಜ್ಜಯಿನಿ ಮಠದ ಕಾರ್ಯದರ್ಶಿಗಳಾದ ಯು.ಎಂ.ಆರ್.ಈಶ್ವರ ಪ್ರಸಾದ್ ತಿಳಿಸಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1