Bank Balance: ನಿಮ್ಮ ಬಳಿ ಸ್ಮಾರ್ಟ್‌ಫೋನ್ ಇಲ್ಲದಿದ್ದರೂ ಪರವಾಗಿಲ್ಲ ಫೀಚರ್ ಫೋನ್‌ನಲ್ಲಿಯೇ ಸುಲಭವಾಗಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನೂ ತಿಳಿಯಬಹುದು.

Bank Balance: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸಿದೆ. ಸ್ಮಾರ್ಟ್‌ಫೋನ್ ಸಹಾಯದಿಂದ ನಾವು ಕುಳಿತಲ್ಲಿಯೇ ಎಲೆಕ್ಟ್ರಿಕ್ ಬಿಲ್ ಕಟ್ಟುವುದರಿಂದ ಹಿಡಿದು ಬ್ಯಾಂಕಿಂಗ್ ಕೆಲಸಗಳವರೆಗೆ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಬಹುದು. ಆದರೆ, ಫೀಚರ್ ಫೋನ್‌ಗಳಲ್ಲಿ ಇಷ್ಟೆಲ್ಲಾ ಸೌಲಭ್ಯಗಳು ಲಭ್ಯವಿರುವುದಿಲ್ಲ. ಆದಾಗ್ಯೂ, ನಿಮ್ಮ ಬಳಿ ಅಕೌಂಟ್ ನಂಬರ್ ಇಲ್ಲದಿದ್ದರೂ ನೀವು ಈ ನಿಮ್ಮ ಫೀಚರ್ ಫೋನ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಅದು ಹೇಗೆ ಸಾಧ್ಯ ಎಂದು ತಿಳಿಯಲು ಮುಂದೆ ಓದಿ…
ವಾಸ್ತವವಾಗಿ,ಫೀಚರ್ ಫೋನ್‌ಗಳ ಎಲ್ಲಾ ಅಪ್ಲಿಕೇಶನ್ ಗಳಿಗೆ ಬೆಂಬಲ ಲಭ್ಯವಿಲ್ಲದ ಕಾರಣ ಬ್ಯಾಂಕಿಂಗ್ ಸಂಬಂಧಿತ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ನೀವು ನಿಮ್ಮ ಅಕೌಂಟ್ ನಂಬರ್ ಮರೆತಿದ್ದರೂ ಸಹ ಆಧಾರ್ ಕಾರ್ಡ್ ಸಹಾಯದಿಂದ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಅದೂ ಕೂಡ ಕೆಲವೇ ನಿಮಿಷಗಳಲ್ಲಿ ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಫೀಚರ್ ಫೋನ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲು ಈ ಹಂತಗಳನ್ನು ಅನುಸರಿಸಿ:-
*ಆಧಾರ್ ಕಾರ್ಡ್‌ನ ಸಹಾಯದಿಂದ ನಿಮ್ಮ ಫೀಚರ್ ಫೋನ್‌ನಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ನೀವು ಬಯಸಿದರೆ ಇದಕ್ಕಾಗಿ ಮೊದಲು ನಿಮ್ಮ ಫೋನ್‌ನಿಂದ *99*99*1# ಅನ್ನು ಡಯಲ್ ಮಾಡಬೇಕು.
* ನಂತರ ನೀವು ನಿಮ್ಮ ಆಧಾರ್ ಕಾರ್ಡ್‌ನ 12 ಅಂಕೆಗಳನ್ನು ನಮೂದಿಸಬೇಕು.
* ಕರೆಯಲ್ಲಿ ನೀವು ನಿಮ್ಮ ಆಧಾರ್‌ನ 12 ಅಂಕೆಗಳ ಕೋಡ್ ಅನ್ನು ನೀವು ಟೈಪ್ ಮಾಡುವಂತೆ ಸೂಚಿಸಿದ ತಕ್ಷಣ, ನೀವು ಈ 12 ಅಂಕಿಯ ಕೋಡ್ ಅನ್ನು ನಮೂದಿಸಬೇಕು.
* ಇದರಿಂದ ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
* ಕೆಲವೇ ಕ್ಷಣಗಳಲ್ಲಿ, ನಿಮ್ಮ ಫೀಚರ್ ಫೋನ್‌ನ ಡಿಸ್‌ಪ್ಲೇಯಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಗೋಚರಿಸುವ ಸಂದೇಶವು ಗೋಚರಿಸುತ್ತದೆ.
ಬ್ಯಾಂಕ್ ಬ್ಯಾಲೆನ್ಸ್ ತಿಳಿಯಲು ಇದೊಂದು ತುಂಬಾ ಸುಲಭ ಪ್ರಕ್ರಿಯೆಯಾಗಿದೆ. ಆದರೆ, ಇದಕ್ಕಾಗಿ ನೀವು ನಿಮ್ಮ ಫೋನ್ ಸಂಖ್ಯೆಯನ್ನು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿರಬೇಕು. ಅಷ್ಟೇ ಅಲ್ಲ, ಅದೇ ಫೋನ್ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆಗೂ ಲಿಂಕ್ ಆಗಿರಬೇಕು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1