ಮತದಾರರ ಜಾಗೃತ ಸಂಘಗಳ BLO, ELCಸಂಚಾಲಕರಿಗೆ ಹಾಗೂ Campus Ambassadorಗಳಿಗೆ ಒಂದು ದಿನದ ತರಬೇತಿ.

ಚಿತ್ರದುರ್ಗ: ಚಿತ್ರದುರ್ಗ ಡಯಟ್ ನಲ್ಲಿ,  ಚಿತ್ರದುರ್ಗ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ BLO,  ELCಸಂಚಾಲಕರು ಹಾಗೂ ಕ್ಯಾಂಪಸ್ ಅಂಬ್ಯಾಸಡರ್ ಗಳಿಗೆ 14 ಮಾರ್ಚ್ 2022 ರಂದು, ಮತದಾನ ಜಾಗೃತಿ ಕುರಿತು ಒಂದು ದಿನದ ತರಬೇತಿಯನ್ನು ಆಯೋಜಿಸಲಾಯಿತು.

ಸಿ.ಎಸ್. ವೆಂಕಟೇಶ್ ಚಿತ್ರದುರ್ಗ ಜಿಲ್ಲಾ ELCನೋಡಲ್ ಅಧಿಕಾರಿ ಹಾಗೂ ಡಯಟ್ ಹಿರಿಯ ಉಪನ್ಯಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಜಾಪ್ರಭುತ್ವದಲ್ಲಿ ಮತದಾನ ಬಹು ಮುಖ್ಯ ಪ್ರಕ್ರಿಯೆ, ಚುನಾವಣಾ ಜಾಗೃತ ಸಂಘಗಳು ಜನರಲ್ಲಿ  ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಾಧಿಕಾರಿಗಳಾದ ಇ.ಸಂಪತ್ ಕುಮಾರ್ ಕಾರ್ಯಕ್ರಮವನ್ನು ಉದ್ಧೇಶಿಸಿ ಯುವ ಮತದಾರರು ಮತ್ತು ಭವಿಷ್ಯದ ಮತದಾರರಲ್ಲಿ ಚುನಾವಣೆಯಲ್ಲಿ ಮತದಾನವನ್ನು ಚಲಾಸಯಿಸಲು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಚಿತ್ರದುರ್ಗ ಡಯಟ್ ಸಂಸ್ಥೆಯ ಉಪ ಪ್ರಾಂಶುಪಾಲರಾದ  ಶ್ರೀ ಡಿ.ಆರ್ ಕೃಷ್ಣಮೂರ್ತಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೇವಲ ಒಂದು ವೋಟಿನ ಮಹತ್ವ ಎಷ್ಟು ಅಮೂಲ್ಯವಾದುದು ಎಂದು ತಿಳಿಸಿದರು. ಬಸವಾರಾಜ್ ಡಯಟ್ ಉಪನ್ಯಾಸಕರು ಪ್ರಾಸ್ತಾವಿಕ ನುಡಿ ಆಡಿದರು. ಇ.ಎಲ್.ಸಿ ತಾಲ್ಲೂಕ್ ನೋಡಲ್ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕರು ಇನಾಯತ್ ಎಲ್ಲರನ್ನೂ ಸ್ವಾಗತಿಸಿದರು.

Leave a Reply

Your email address will not be published. Required fields are marked *