ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ 25 ಹೊಸ ಆಯಾಮದೊಂದಿಗೆ ರೈತ ಚಳುವಳಿಯನ್ನು ಮುನ್ನಡೆಸುವ ಉದ್ದೇಶದಿಂದ ದಿನಾಂಕ 26-10-2024ನೇ ಶನಿವಾರದಂದು ಚಿತ್ರದುರ್ಗದ ತ.ರಾ.ಸು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪೂರ್ಣ ರಾಜ್ಯ ಸಮಿತಿಯನ್ನು ಆಯೋಜಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಐಡಗಲಪುರ ನಾಗೇಂದ್ರ ರವರು ತಿಳಿಸಿದ್ದಾರೆ.
ಹಿಂದೆಂದಿಗಿಂತಲೂ ಇಂದು ರೈತ ಸಮುದಾಯ ಅತ್ಯಂತ ಸಂಕಷ್ಟವನ್ನು ಎದುರಿಸುತ್ತಿದೆ. ದೇಶದ ಆಡಳಿತ ವ್ಯವಸ್ಥೆ ಸಂಪೂರ್ಣ ರೈತ
ವಿರೋಧಿಯಾಗಿದೆ, ದುಡಿಯುವ ಜನರ ವಿರೋಧಿಯಾಗಿದೆ. ಮಹಿಳಾ ಮತ್ತು ಯುವ ಜನರ ವಿರೋಧಿಯಾಗಿದೆ. ಒಂದೊಂದಾಗಿ ಜಾರಿಗೆ
ಬರುತ್ತಿರುವ ನೀತಿಗಳು ತುಂಬಾ ಆತಂಕಕಾರಿಯಾಗಿದ್ದು, ರೈತ ಸಮುದಾಯ ಆತ್ಮಹತ್ಯೆ ದಾರಿಯಿಂದ ಹೊರ ಬರುತ್ತಿಲ್ಲ. ಅಸಮಾನತೆ
ಹೆಚ್ಚುತ್ತಿದೆ. ದೇಶದ ಸಂಪತ್ತು ಮತ್ತು ಉತ್ಪಾದನಾ ಸಾದನಗಳು ಕೇವಲ ಬೆರಳೆಣಿಕೆ ಮಂದಿ ವಶವಾಗುತ್ತಿದೆ. ಎಲ್ಲಾ ಸ್ವಾಯತ್ತತೆ
ಸಂಸ್ಥೆಗಳನ್ನು ಪ್ರಭುತ್ವ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದೆ. ಭ್ರಷ್ಟಾಚಾರ ಎಲ್ಲಾ ರಂಗದಲ್ಲೂ ಸಾಂಸ್ಕೃಕರಣಗೊಂಡಿದೆ. ರಾಜಕೀಯ
ಕ್ಷೇತ್ರ ಸಂಸ್ಕೃತಿಹೀನವಾಗಿದೆ. ನೈತಿಕತೆಯನ್ನು ಕಳೆದುಕೊಂಡಿದೆ. ಕೋಮುವಾದಿ ಪ್ಯಾಸಿಸ್ಟ್‍ಗಳು ಮತ್ತು ಬಂಡವಾಳ ಶಾಯಿಗಳು ಜೊತೆ
ಜೊತೆಯಾಗಿ ಸಾಗುತ್ತ ಸಂವಿಧಾನದ ಮೂಲ ತತ್ವಕ್ಕೆ ವಿರುದ್ಧವಾಗಿ ದೇಶವನ್ನು ಕೊಂಡೊಯ್ಯುತ್ತಿವೆ. ಇಂತಹ ಸಂಕಷ್ಟ ಮತ್ತು ಸಂಕ್ರಮಣ
ಸ್ಥಿತಿಯಲ್ಲಿ ಸಮುದಾಯ ಚಳುವಳಿಯಾದ ರೈತ ಚಳುವಳಿಯ ಮೇಲೆ ದೊಡ್ಡ ಜವಾಬ್ದಾರಿ ಇದ್ದು. ಇವೆಲ್ಲವನ್ನು ಎದುರಿಸಬೇಕಾಗಿದೆ
ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ನಾಳಿನ ಸಭೆಯು ಮಹತ್ವದ ಸಭೆಯಾಗಿದ್ದು, ಹೊಸ ಆಯಾಮದೊಂದಿಗೆ ಚಳುವಳಿಯನ್ನು ಮುನ್ನಡೆಸಲು ಸಂಘವು
ಚಿಂತಿಸಿದ್ದು, ಈ ಸಭೆಯಲ್ಲಿ ಕೆಲವು ಮಹತ್ವದ ಕಾರ್ಯಕ್ರಮಗಳನ್ನು, ನಿರ್ಣಯಗಳನ್ನು ಘೋಷಣೆ ಮಾಡಲಾಗುವುದು. ಮತ್ತು ರಾಜ್ಯ
ಸಮಿತಿಯನ್ನು ಪುನರ್ ರಚನೆ ಮಾಡಲಾಗುವುದುಸಮಿತಿಯು ಪೂರ್ಣ ರಾಜ್ಯ ಸಮಿತಿಯಾಗಿದ್ದು, ಪ್ರಮುಖ ಮಹತ್ವದ ವಿಷಯಗಳನ್ನು ಈ
ಸಭೆಯಲ್ಲಿ ತೀರ್ಮಾನಿಸುವ ಅಧಿಕಾರ ಹೊಂದಿರುತ್ತದೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.