
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮೇ. ೨೫
ಜಯಪ್ರಕಾಶ್‌ರವರ ಆಯೋಗ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಭಾವಸಾರ ಜನಾಂಗ ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿ ಇದೆ
ಎಂದು ತಿಳಿಸಿದೆ ಇದು ತಪ್ಪು ರಾಜ್ಯದಲ್ಲಿ ನಮ್ಮ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಂಬುದನ್ನು ಆಯೋಗಕ್ಕೆ
ತೋರಿಸಬೇಕಿದೆ. ಈ ಹಿನ್ನಲೆಯಲ್ಲಿ ಜಿಲ್ಲಾವಾರು ಪ್ರವಾಸ ಮಾಡುವುದರ ಮೂಲಕ ನಮ್ಮ ಸಮುದಾಯ ನಿಖರವಾದ ಸಂಖ್ಯೆಯನ್ನು ಪಡೆದು ಆಯೋಗದ ಮುಂದೆ ಇಡಲಾಗುವುದು ಇದಕ್ಕೆ ನಮ್ಮ ಸಮುದಾಯದವರು ಸಹಕಾರ ನೀಡುವಂತೆ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ರಾಜ್ಯ ಅಧ್ಯಕ್ಷರಾದ ಶ್ರೀನಿವಾಸ್ ಪಿಸ್ಸೆ ಕರೆ ನೀಡಿದರು.
ಚಿತ್ರದುರ್ಗ ನಗರದ ಭಾವಸಾರ ಕಲ್ಯಾಣ ಮಂಟಪದಲ್ಲಿ ಭಾನುವಾರ ಭಾವಸಾರ ಕ್ಷತ್ರಿಯ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಜಾತಿಗಣತಿ ಕುರಿತ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಯಪ್ರಕಾಶ ಆಯೋಗ ನೀಡಿದ ವರದಿಯಲ್ಲಿ ರಾಜ್ಯದಲ್ಲಿ ನಮ್ಮ ಸಮುದಾಯ ಕೇವಲ ೧,೦೮,೩೨೨ ಜನ ಸಂಖ್ಯೆ ಮಾತ್ರ ಇದೆ ಎಂದು ತಿಳಿಸಲಾಗಿದೆ ಆದರೆ ಇದು ತಪ್ಪು ಬರೀ ಬೆಂಗಳೂರು ಒಂದರಲ್ಲಿಯೇ ೨ ಲಕ್ಷ ನಮ್ಮ ಸಮುದಾಯವರಿದ್ದಾರೆ ಇವರು ಜನಗಣತಿ ಮಾಡುವಾಗ ಸರಿಯಾಗಿ ಮಾಡಿಲ್ಲ ಒಂದಾದರೆ ಮತ್ತೊಂದು ಮಾತೃ ಭಾಷೆಯಲ್ಲಿ ನಾವುಗಳು ಮರಾಠಿ ಎಂದು ನಮೂದಿಸಲಾಗಿದೆ ಇದರಿಂದ ನಮ್ಮೆಲ್ಲರನ್ನು ಮರಾಠಿ ಗುಂಪಿಗೆ ಸೇರಿಸಲಾಗಿದೆ ಇಂದರಿಂದ ನಮ್ಮ ಸಮುದಾಯವರ ಸಂಖ್ಯೆ ಕ್ಷೀಣವಾಗಿದೆ ಎಂದರು.
ಈ ಸತ್ಯವನ್ನು ಅರಿತ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜ ರಾಜ್ಯದಲ್ಲಿ ನಮ್ಮ ಸಮುದಾಯವರ ಎಷ್ಟು ಇದ್ದಾರೆ
ಎಂಬುದನ್ನು ಪತ್ತೆ ಮಾಡುವ ಕಾರ್ಯಕ್ಕೆ ಮುಂದಾಗಿ ಜಿಲ್ಲಾವಾರು ಪ್ರವಾಸವನ್ನು ಕೈಗ್ಗೊಂಡು ನಮ್ಮ ಸಮುದಾಯದವರು ಎಷ್ಟು
ಇದ್ದಾರೆ ಎಂಬ ನಿಖರವಾದ ಮಾಹಿತಿಯನ್ನು ಜಿಲ್ಲಾ ಸಂಘದಿಂದ ಸಂಗ್ರಹ ಮಾಡಲಾಗುತ್ತಿದೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಸಂಗ್ರಹವಾದ ಮೇಲೆ ಅದನ್ನು ಆಯೋಗಕ್ಕೆ ನೀಡುವುದರ ಮೂಲಕ ರಾಜ್ಯದಲ್ಲಿ ನಮ್ಮ ಜನ ಸಂಖ್ಯೆ ಇಷ್ಟಿದೆ ಎಂದು
ತಿಳಿಸಲಾಗುವುದು ಅವರು ಒಪ್ಪಿದರೆ ಸರಿ ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದ ಅವರು ಈಗ ನಮ್ಮ
ಸಮುದಾಯ ಜನ ಸಂಖ್ಯೆ ತಪ್ಪಾಗಿದೆ ಅದನ್ನು ಈಗಲೇ ಸರಿಪಡಿಸಬೇಕಿದೆ ಇಲ್ಲವಾದಲ್ಲಿ ಮುಂದೆ ಸರ್ಕಾರದಿಂಧ ನಮಗೆ ಸಿಗುವಂತೆ ವಿವಿಧ ರೀತಿಯ ಸೌಲಭ್ಯಗಳು ಸಿಗದಂತೆ ಆಗಬಹುದಾಗಿದೆ ಈ ಹಿನ್ನಲೆಯಲ್ಲಿ ನಮ್ಮ ಸಮುದಾಯದ ನಿಖರವಾದ ಸಂಖ್ಯೆಯನ್ನು ಪಡೆಯಲು ಮುಂದಾಗಿದ್ದೇವೆ ಎಂದರು.
ಜಾತಿ ಜನಗಣತಿಯಲ್ಲಿ ಸರ್ಕಾರ ದರ್ಜಿ, ಬಾವಸಾರ, ಸೇರಿದಂತೆ ಇತರೆಗಳನ್ನು ನಮೂದಿಸಿದೆ ಆದರೆ ಇಲ್ಲಿ ದರ್ಜಿ ಎನ್ನುವುದು
ನಾವು ಮಾಡುವ ಕುಲ ಕಸುಬಾಗಿದೆ ಆದು ಜಾತಿ ಅಲ್ಲ ನಮ್ಮ ಜಾತಿ ಭಾವಸಾರ ಇದು ತಿದ್ದುಪಡಿಯಾಗಬೇಕಿದೆ. ಇದಾಗದಿದ್ದರೆ
ನಮಗೆ ಏನು ಆಗುವುದಿಲ್ಲ ಆದರೆ ನಮ್ಮ ಮುಂದಿನ ಪೀಳಿಗೆ ಅನ್ಯಾಯವಾಗಲಿದೆ ಇದನ್ನು ಈಗಲೇ ಸರಿಪಡಿಸಬೇಕಿದೆ ಎಂದು
ಶ್ರೀನಿವಾಸ್ ಪಿಸ್ಸೆ ತಿಳಿಸಿದರು.
ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಸುಲಾಖೆ ಮಾತನಾಡಿ, ಜಾತಿ ಜನಗಣತಿ
ಬಹು ಹಿಂದಿನ ವರ್ಷಗಳಲ್ಲಿ ಆಗಿದೆ, ನಮಗೆ ಮೀಸಲಾತಿ ಅನಿವಾರ್ಯವಾಗಿದೆ ಉದ್ಯೋಗ ಮತ್ತು ಶಿಕ್ಷಣಕ್ಕೆ ಅನಿವಾರ್ಯವಾಗಿದೆ,
ಇದರಿಂದ ನಮ್ಮ ಸಮುದಾಯದ ಜನ ಸಂಖ್ಯೆಯನ್ನು ಸರಿಯಾದ ರೀತಿಯಲ್ಲಿ ನಮೂದಿಸಬೇಕಿದೆ, ಅಯೋಗದವರುಇ ನಮ್ಮ
ಸಮುದಾಯವನ್ನು ಕಡಿಮೆ ತೋರಿಸಿದ್ದಾರೆ. ರಾಜ್ಯದಲ್ಲಿ ನಮ್ಮ ಸಮುದಾಯ ಸುಮಾರು ೫ ಲಕ್ಷಕ್ಕೂ ಹೆಚ್ಚಿದೆ. ನಮಗೆ
ಆಯೋಗದಿಂದ ಸರಿಯಾದ ರೀತಿಯಲಿ ನ್ಯಾಯ ಸಿಗದಿದ್ದರೆ ನಾವುಗಳು ನ್ಯಾಯಾಯದ ಮೆಟ್ಟಿಲನ್ನು ಏರುವ ಅನಿವಾರ್ಯತೆ ಇದೆ
ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಮುಖಂಡರಾದ ಆರ್.ಎಂ. ಶ್ಯಾಮ್ ಮುಸುಳೆ ವಹಿಸಿದ್ದರು. ಸಮಾಜದ
ಮುಖಂಡರಾದ ಸತ್ಯನಾರಾಯಣ ಅಟ್ಟಕ್ಕರ್, ಸೀತಾರಾಮ್ ರಂಗದೊಳ್, ಸತ್ಯನಾರಾಯಣ, ಅಶೋಕ್, ಕಿರಣ್,
ಆನಂದಕುಮಾರ್, ಚಿತ್ರದುರ್ಗದ ಸಮಾಜದ ಮುಖಂಡರಾದ ನಾಗರಾಜ್ ಬೇದ್ರೇ, ಶ್ರೀನಾಥ್ ಬೇದ್ರೇ, ಶ್ರೀಧರ್ ಗುಜ್ಜರ್,
ರಾಜೇಶ್ ಬೇದ್ರೇ, ಬಾಲಕೃಷ್ಣ ಗುಜ್ಜರ್, ನಟರಾಜ್ ಕುಂಟೆ, ಸೇರಿದಂತೆ ಬೆಂಗಳೂರು, ತುಮಕೂರು, ಶಿರಾ, ಚಿತ್ರದುರ್ಗ,
ಪಾವಗಡ, ಹೊಸದುರ್ಗಗಳಿಂದ ಸಮಾಜದ ಭಾಂದವರು ಸಭೆಯಲ್ಲಿ ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1