
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮೇ. 12 : ಪಹಲ್ಟಾಮ್‍ನಲ್ಲಿ 26 ಅಮಾಯಕ ಜನರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಲ್ಲದೆ ಅದು ಈ ದೇಶದ ಸಂಸ್ಕೃತಿ ಮೇಲೆ ಮಾಡಿದ ದಾಳಿಯಾಗಿದೆ ಜಾತಿ ಧರ್ಮದ ಹೆಸರಿನಲ್ಲಿ ಬೇರೆ ಮಾಡುತ್ತಿರುವುದು ನಮ್ಮ ದೇಶದ ಸಂಸ್ಕೃತಿ ಅಲ್ಲ. ಈ ದೇಶದಲ್ಲಿ ಪ್ರಾಚೀನ
ಕಾಲದಿಂದಲೂ ಎಲ್ಲ ಧರ್ಮದವರಿಗೆ ಸಮಾನ ಅವಕಾಶ ನೀಡಿದೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ವಕ್ತಾರರಾದ ನಾಗರಾಜ್ ಬೇದ್ರೇ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಭಾರತ ದೇಶದಲ್ಲಿ ಎಲ್ಲರೂ ಏಕತೆ ಭಾವೈಕ್ಯತೆಯಿಂದ ಬದುಕುತ್ತಿರುವ ಜನ ನಮ್ಮವರು ಈ ನಾಡಿನಲ್ಲಿ ಶರಣರು, ಸೂಫಿ ಸಂತರು, ಸಂತರು, ಆಗಿ ಹೋಗಿದ್ದಾರೆ. ಇವತ್ತಿಗೂ ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಅವರು ಬಿಟ್ಟು ಹೋದ ಸಂದೇಶದಲ್ಲಿ ನಡೆದು ಕೊಳ್ಳುತ್ತಿರುವ ನಾವು ಎಲ್ಲರೂ ಇಂಥ ದೇಶದಲ್ಲಿ ಭಯೋತ್ಪಾದಕರು ಧರ್ಮದ ಹೆಸರಿನಲ್ಲಿ ದಾಳಿ ಮಾಡಿರುವುದು ಅಕ್ಷಮ್ಯ ಅಪರಾಧ. ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.