ರಿಷಬ್ ಶೆಟ್ಟಿ ಚಿತ್ರಕ್ಕೆ ಇಂಥಾ ನಿರ್ಭಂಧ… ‘ಕಾಂತಾರ 1’ದಲ್ಲಿ ಪಂಜುರ್ಲಿ ದೈವ ಇರೋದಿಲ್ವಾ?

  • ಕನ್ನಡ ಸಿನಿರಂಗದಲ್ಲಿ ಸಂಚಲನವನ್ನೇ ಸೃಷ್ಟಿಮಾಡಿದ ಕಾಂತಾರ ಸಿನಿಮಾ ಸಾಕಷು ಮೆಚ್ಚುಗೆ ಪಡೆದರೂ ಟೀಕೆಗಳನ್ನು ಎದುರಿಸಿತ್ತು
  • ಸದ್ಯ ನಟ ರಿಷಬ್‌ ಕಾಂತಾರದ ಮುಂದಿನ ಭಾಗದ ಸಿದ್ದತೆಯಲ್ಲಿದ್ದಾರೆ..
  • ಇದೀಗ ಈ ಕಾಂತಾರ 1 ಚಿತ್ರತಂಡಕ್ಕೂ ಹೊಸ ಕಾಟ ಶುರುವಾಗಿದೆ.

Kantara 1: ಕನ್ನಡ ಸಿನಿರಂಗದಲ್ಲಿ ಸಂಚಲನವನ್ನೇ ಸೃಷ್ಟಿಮಾಡಿದ ಕಾಂತಾರ ಸಿನಿಮಾ ಸಾಕಷು ಮೆಚ್ಚುಗೆ ಪಡೆದರೂ ಟೀಕೆಗಳನ್ನು ಎದುರಿಸಿತ್ತು.. ಸದ್ಯ ನಟ ರಿಷಬ್‌ ಕಾಂತಾರದ ಮುಂದಿನ ಭಾಗದ ಸಿದ್ದತೆಯಲ್ಲಿದ್ದಾರೆ.. ಆದರೆ ಇದೀಗ ಈ ಕಾಂತಾರ 1 ಚಿತ್ರತಂಡಕ್ಕೂ ಹೊಸ ಕಾಟ ಶುರುವಾಗಿದೆ.. ಏನದು ಅಂತೀರಾ ಇಲ್ಲಿದೆ ಉತ್ತರ.. 

ರಿಷಬ್ ಶೆಟ್ಟಿ ಕಾಂತಾರಕ್ಕೆ ಸದ್ಯ ಮತ್ತೊಂದು ಹೊಸ ಕಂಟಕ ಶುರುವಾಗಿದೆ.. ಪಂಜುರ್ಲಿ ದೈವ ನೃತ್ಯವನ್ನು ಚಿತ್ರದಲ್ಲಿ ಪ್ರದರ್ಶಿಸದಂತೆ ಭಜರಂಗದಳ ವಾರ್ನಿಂಗ್ ನೀಡಿದೆ.. ಈ ಮೂಲಕ ಚಿತ್ರತಂಡ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ.. ಹಾಗಾದರೆ ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವ ನೃತ್ಯ ಇರುತ್ತಾ? ಇಲ್ಲವಾ? ಅಥವಾ ಕಾಂತಾರ ಕಥೆಯನ್ನೇ ಬದಲಿಸುತ್ತಾ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ.. ಅಷ್ಟಕ್ಕೂ ಭಜರಂಗದಳ ಈ ಕಾಂತಾರ ಚಿತ್ರ ತಂಡಕ್ಕೆ ಇಂಥಾ ನಿರ್ಭಂಧ ಹೇರುತ್ತಿರೋದ್ಯಾಕೆ? 

ಕಾಂತಾರ ಸಿನಿಮಾ ಬಿಡುಗಡೆಯಾದ ನಂತರ ಕರಾವಳಿ ದೈವ ಹೆಚ್ಚು ಪ್ರಸಿದ್ದಿ ಪಡೆದು ಕೊಂಡಿತ್ತು.. ಆದರೆ ಅಷ್ಟೇ ಟೀಕೆಗಳೂ ವ್ಯಕ್ತವಾಗಿದ್ದವು ಎನ್ನುವ ಮಾತುಗಳು ಇವೆ.. ಆದರೆ ಈಗ ಸಿನಿಮಾ, ಧಾರಾವಾಹಿ ಹಾಗೂ ಸಭಾ ಕಾರ್ಯಕ್ರಮದಲ್ಲಿ ಕರಾವಳಿ ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ ಎಂದು ದೈವಾರಾಧಕರು ಆರೋಪಿಸುತ್ತಿದ್ದಾರೆ.. ಇದೆಲ್ಲದರ ನಡುವೆ ಕಾಂತಾರ 1ರ ಟೀಸರ್‌ ಭರ್ಜರಿ ಸದ್ದು ಮಾಡಿದೆ.. ಅದರಲ್ಲೂ ರಿಷಬ್‌ ವರಾಹ ನಾರಯಣಾವತಾರ ಅಭಿಮಾನಿಗಳಲ್ಲಿ ಮೈಜುಮ್‌ ಎನ್ನಿಸುವಂತಿದೆ… ಬರೀ ಟೀಸರ್ ಮಿಲಿಯನ್ ಗಟ್ಟಲೆ ವೀವ್ಸ್‌ ಪಡೆದುಕೊಂಡಿದೆ.. ಸದ್ಯ ಜನ ಸಿನಿಮಾ ರಿಲೀಸ್‌ಗಾಗಿ ಕಾತೂರದಿಂದ ಕಾಯುತ್ತಿದ್ದಾರೆ.. 

ಕಾಂತಾರ ಸಿನಿಮಾದಲ್ಲಿ ಕರಾವಳಿ ದೈವ ಹೆಚ್ಚು ಪ್ರಸಿದ್ದಿ ಪಡೆಯುತ್ತಿದ್ದಂತೆ.. ನಟ ರಿಷಬ್‌ “ಧೈವಾರಾಧನೆಯನ್ನು ಯಾರು ಅನುಕರಣೆ ಮಾಡಬೇಡಿ..  ರೀಲ್ಸ್‌, ಡ್ಯಾನ್ಸ್‌ ಎಂದೆಲ್ಲ ದೈವಕ್ಕೆ ಅಪಚಾರ ಮಾಡಬೇಡಿ.. ನಾವು ಶ್ರದ್ಧಾ ಭಕ್ತಿಯಿಂದ ಪಾತ್ರಗಳನ್ನು ಮಾಡಿದ್ದೇವೆ.. ಅದನ್ನು ತಪ್ಪಾಗಿ ಪ್ರದರ್ಶಿಸಿ ಅಪಮಾನ ಮಾಡಬೇಡಿ” ಎಂದು ಮನವಿ ಮಾಡಿದ್ದರು.. ಆದರೂ ಕೆಲವರು ಆ ತಪ್ಪನ್ನು ಮಾಡುತ್ತಿದ್ದಾರೆ.. ಹೀಗಾಗಿ ಆಕ್ರೋಶಗಳು ಕೇಳಿಬರುತ್ತಿವೆ.

ಸದ್ಯ ಕಾಂತಾರ ಪ್ರೀಕ್ವೆಲ್ ಚಿತ್ರೀಕರಣ ನಡೆಯುತ್ತಿದ್ದು.. ಚಿತ್ರದಲ್ಲಿ ದೈವಾರಾಧನೆ ಇರುವ ಸಾಧ್ಯತೆಯಿದೆ.. ಆದರೆ ದೈವಾರಾಧನೆ ಪ್ರದರ್ಶನಕ್ಕಲ್ಲ.. ಒಂದು ವೇಳೆ ಪ್ರದರ್ಶನ ಮಾಡಿದರೆ ಮುತ್ತಿಗೆ ಹಾಕುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪ್ವೆಲ್ ಎಚ್ಚರಿಕೆ ನೀಡಿದ್ದಾರೆ.. ಇದೀಗ ಈ ವಿಚಾರ ಕಾಂತಕ್ಕೆ ಚಿತ್ರತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.. 

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *