ಚಿತ್ರದುರ್ಗ: ನಗರದ ಪ್ರತಿಷ್ಠಿತ ಶಾಲೆಯಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಯಾದ ನೌಮನ್ ಅಹಮ್ಮದ್ ಷರೀಫ್ ಚಿತ್ರದುರ್ಗ ಜಿಲ್ಲೆಯ 17 ವರ್ಷದೊಳಗಿನ ಅಥ್ಲೆಟಿಕ್ಸ್ ವಿಭಾಗದ ರಾಜ್ಯಮಟ್ಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 10ನೇ ತಗರತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೌಮನ್ ಅಹಮ್ಮದ್ ಷರೀಫ್, ಕೋಲಾರ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಮಟ್ಟದ 17 ವರ್ಷದ ವಯೋಮಿತಿಯೊಳಗಿನ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ 400ಮೀ ಹರ್ಡಲ್ಸ್ನಲ್ಲಿ (57.91 ಸೆಕೆÀಂಡ್) ದ್ವಿತೀಯ ಸ್ಥಾನ ಪಡೆದು, ನವೆಂಬರ್ 26 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಲಿರುವ ರಾಷ್ಟಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಈ ವಿದ್ಯಾರ್ಥಿಯನ್ನು ಹಾಗೂ ತಂದೆ ಜಮೀಲ್ ಅಹಮ್ಮದ್ ಷರೀಪ್ ತಾಯಿ ಪೌಜಿಯ ಬಾನು ಇವರನ್ನು ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವತಿಯಿಂದ ಶ್ಲಾಘಿಸಿ, ಸನ್ಮಾನಿಸಲಾಯಿತು.
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ನೌಮನ್ ಅಹಮ್ಮದ್ ಷರೀಫ್‌ಗೆ ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯ್ ಕುಮಾರ್, ಎಸ್.ಎಂ ಪೃಥ್ವೀಶ ಹಾಗೂ ಶ್ರೀಮತಿ ಸುನಿತಾ.ಪಿ.ಸಿ ವ್ಯವಸ್ಥಾಪಕ ನಿರ್ದೇಶಕರುಗಳು, ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ.ಎನ್.ಜಿ, ಐಸಿಎಸ್‌ಇ ಪ್ರಿನ್ಸಿಪಾಲ್ ಬಸವರಾಜಯ್ಯ.ಪಿ, ಐಸಿಎಸ್‌ಇ ಉಪಪ್ರಿನ್ಸಿಪಾಲ್ ಅವಿನಾಶ್ ಬಿ, ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ ಅಭಿನಂದಿಸಿದ್ದಾರೆ.