PBKS vs RR, IPL 2024: ಪಂಜಾಬ್ ನೀಡಿದ ಸುಲಭ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡವು ಆರಂಭದಿಂದಲೂ ನಿಧಾನವಾಗಿಯೇ ಬ್ಯಾಟಿಂಗ್ ಮಾಡಿತು. ಆದರೆ ಕೊನೆಯಲ್ಲಿ ಒಂದು ಎಸೆತದ ಬಾಕಿ ಇರುವಂತೆ ಪಂದ್ಯವನ್ನು ಗೆದ್ದುಬೀಗಿತು.
ಐಪಿಎಲ್ 2024ರ 27ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (RR vs PBKS) ನಡುವೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ತಂಡ ಭರ್ಜರಿ ಗೆಲುವು ದಾಖಲಿಸಿತು. ಪಂಜಾಬ್ನ ಮಹಾರಾಜ ಯಾದವಿಂದರ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ (Maharaja Yadavindra Singh Cricket Stadium) ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡುವ ಮೂಲಕ ಪಂಜಾಬ್ ತಂಡವು ಬ್ಯಾಟಿಂಗ್ ಮಾಡಿತು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸುವ ಮೂಲಕ ಸಾಧಾರಣ ಟಾರ್ಗೆಟ ನೀಡಿತು. ಈ ಮೊತ್ತ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 19.5 ಓವರ್ಗೆ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸುವ ಮೂಲಕ 3 ವಿಕೆಟ್ ಗಳ ರೋಚಕ ಗೆಲುವು ದಾಖಲಿಸಿತು.
ನಿಧಾನವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್:
ಇನ್ನು, ಪಂಜಾಬ್ ನೀಡಿದ ಸುಲಭ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡವು ಆರಂಭದಿಂದಲೂ ನಿಧಾನವಾಗಿಯೇ ಬ್ಯಾಟಿಂಗ್ ಮಾಡಿತು. ಕಳೆದ ಕೆಲ ಪಂದ್ಯಗಳಿಂದ ಕಳಪೆ ಫಾರ್ಮ್ನಿಂದ ಕೂಡಿದ್ದ ಯಶಸ್ವಿ ಜೈಸ್ವಾಲ್ ಇಂದು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದರು. ಜೈಸ್ವಾಲ್ 28 ಎಸೆತದಲ್ಲಿ 4 ಫೋರ್ ಮೂಲಕ 39 ರನ್ ಗಳಿಸಿದರು. ಬಳಿಕ ತನುಷ್ ಕೊಟೈನ್ 31 ಬಾಲ್ಗೆ 3 ಫೊರ್ ಮೂಲಕ ಕೇವಲ 24 ರನ್ ಗಳಿಸಿದರೆ, ನಾಯಕ ಸಂಜು ಸ್ಯಾಮ್ಸನ್ 14 ಎಸೆತದಲ್ಲಿ 1 ಸಿಕ್ಸ್, 1 ಬೌಂಡರಿ ಸಹಿತ 18 ರನ್ ಗಳಿಸಿದರು. ಆದರೆ ಬಹಳಷ್ಟು ನಿರೀಕ್ಷೆ ಹೊಂದಿದ್ದ ರಿಯಾನ್ ಪರಾಗ್ ಸಹ 18 ಎಸೆತಕ್ಕೆ 1 ಸಿಕ್ಸ್, 1 ಬೌಂಡರಿ ಮೂಲಕ 23 ರನ್ ಗಳಿಸಿದರು. ದ್ರುವ್ ಜುರೇಲ್ 6 ರನ್ ಗಳಿಸಿ ಪೆವೆಲಿಯನ್ ಸೇರಿದರು. ಕೊನೆಯಲ್ಲಿ ರೋಚಕ ಹಂತದ ತಲುಪಿದ್ದ ಪಂದ್ಯವನ್ನು ಹಿಟ್ಮಾಯರ್ ಭರ್ಜರಿಯಾಗಿ ಆಡುವ ಮೂಲಕ ಗೆಲುವಿನ ದಡ ಸೇರಿಸಿದರು. ಅವರು 10 ಎಸೆತದಲ್ಲಿ 3 ಸಿಕ್ಸ್ ಮತಗ್ತು 1 ಬೌಂಡರಿ ಸಹಿತ 27 ರನ್ ಗಳಿಸಿ ಅಬ್ಬರಿಸಿದರೆ, ರೋಮನ್ ಪೋವೆಲ್ 5 ಎಸೆತದಲ್ಲಿ 11 ರನ್ ಗಳಿಸುವ ಮೂಲಕ ಗೆಲುವಿನಲ್ಲಿ ಸಹಾಯಕರಾದರು.
ಬ್ಯಾಟಿಂಗ್ನಲ್ಲಿ ಅಬ್ಬರಿಸದ ಪಂಜಾಬ್ ರಾಜರು:
ಚಂಡೀಗಢದ ಮಹಾರಾಜ ಯಾದವಿಂದರ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಪಂಜಾಬ್ ಕಿಂಗ್ಸ್‌ಗೆ ಮೊದಲು ಬ್ಯಾಟಿಂಗ್ ಆರಂಭಿಸಿತು. ಪಂಜಾಬ್ ಕಿಂಗ್ಸ್ ಪರ ಅಥರ್ವ ಥೈಡೆ 15 ರನ್, ಜಾನಿ ಬೈರ್‌ಸ್ಟೋ 15 ರನ್, ಪ್ರಭಾಸಿಮ್ರಾನ್ ಸಿಂಗ್ 10 ರನ್, ನಾಯಕ ಸ್ಯಾಮ್ ಕರನ್ 6 ರನ್, ಜಿತೇಶ್ ಶರ್ಮಾ 29 ರನ್, ಶಶಾಂಕ್ ಸಿಂಗ್ 9 ರನ್, ಲಿವಿಂಗ್‌ಸ್ಟೋನ್ 21 ರನ್, ಆಶಿತೋಷ್ ಶರ್ಮಾ 31 ರನ್ ಮತ್ತು ಹರ್‌ಪ್ರೀತ್ ಬ್ರಾರ್ 3 ರನ್ ಗಳಿಸಿದರು.
ರಾಜಸ್ಥಾನದ ಬೌಲರ್‌ಗಳು 8 ಬ್ಯಾಟ್ಸ್‌ಮನ್‌ಗಳನ್ನು ಒಬ್ಬೊಬ್ಬರಾಗಿ ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ರಾಜಸ್ಥಾನ ಪರ ಬೌಲಿಂಗ್ ನಲ್ಲಿ ಕೇಶವ್ ಮಹಾರಾಜ್ 2 ವಿಕೆಟ್, ಅವೇಶ್ ಖಾನ್ 2 ವಿಕೆಟ್, ಟ್ರೆಂಟ್ ಬೌಲ್ಟ್ 1 ವಿಕೆಟ್, ಕುಲದೀಪ್ ಸೇನ್ 1 ವಿಕೆಟ್ ಮತ್ತು ಯುಜ್ವೇಂದ್ರ ಚಾಹಲ್ 1 ವಿಕೆಟ್ ಪಡೆದರು. ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ರಾಜಸ್ಥಾನಕ್ಕೆ 148 ರನ್ ಗಳ ಗೆಲುವಿಗೆ ಸವಾಲೊಡ್ಡಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1