Rs 290 per litre Petrol!: ಸದ್ಯ ಪ್ರತಿ ಲೀಟರ್ ಪೆಟ್ರೋಲ್ 290.45 ರೂ.ನಂತೆ ಮಾರಾಟವಾಗುತ್ತಿದೆ. 15 ದಿನಗಳಲ್ಲಿ 2ನೇ ಬಾರಿ ಬೆಲೆ ಏರಿಕೆಯಾಗಿದ್ದು, ಇದು ಮತ್ತಷ್ಟು ಹಣದುಬ್ಬರ ಹೆಚ್ಚಿಸುವ ಸಾಧ್ಯತೆಯಿದೆ.

ನವದೆಹಲಿ: ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಸೆನೆಟರ್ ಅನ್ವರ್-ಉಲ್-ಹಕ್ ಕಾಕರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಪಾಕ್‍ನಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಕಂಗಾಲಾಗಿ ಹೋಗಿದ್ದಾರೆ. ಸದ್ಯ ಪಾಕ್‍ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 290 ರೂ.ಗೆ ಏರಿಕೆಯಾಗಿದೆ.
ಹೌದು,ಮಧ್ಯಂತರ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ 48 ಗಂಟೆಯೊಳಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹಠಾತ್ ಜಿಗಿತ ಕಂಡಿದ್ದು, ಪ್ರತಿ ಲೀಟರ್‌ಗೆ 20 ರೂ.ವರೆಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪ್ರತಿ ಲೀಟರ್ ಪೆಟ್ರೋಲ್‍ಗೆ 17.50 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರಗಳು ಬುಧವಾರ ಅಂದರೆ ಇಂದಿನಿಂದ ಜಾರಿಗೆ ಬರಲಿದೆ. ಸದ್ಯ ಪ್ರತಿ ಲೀಟರ್ ಪೆಟ್ರೋಲ್ 290.45 ರೂ.ನಂತೆ ಮಾರಾಟವಾಗುತ್ತಿದೆ. 15 ದಿನಗಳಲ್ಲಿ 2ನೇ ಬಾರಿ ಬೆಲೆ ಏರಿಕೆಯಾಗಿದ್ದು, ಇದು ಮತ್ತಷ್ಟು ಹಣದುಬ್ಬರ ಹೆಚ್ಚಿಸುವ ಸಾಧ್ಯತೆಯಿದೆ.
ವರದಿಯ ಪ್ರಕಾರ ಪಾಕಿಸ್ತಾನ ಸರ್ಕಾರವು 2 ವಾರಗಳಲ್ಲಿ ಭಾರೀ ಪ್ರಮಾಣದಲ್ಲಿ ತೈಲದರ ಹೆಚ್ಚಿಸಿದೆ. ಈ ಹಿಂದೆ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಪ್ರತಿ ಲೀಟರ್‌ಗೆ 20 ರೂ. ಏರಿಸಿತ್ತು, ಇದೀಗ ಮತ್ತೆ 20 ರೂ.ನಷ್ಟು ಏರಿಕೆಯಾಗಿದೆ. ಅಂದರೆ ಸರ್ಕಾರವು ಕೇವಲ 15 ದಿನಗಳ ಅವಧಿಯಲ್ಲಿ ತೈಲದರವನ್ನು 40 ರೂ.ನಷ್ಟು ಏರಿಕೆ ಮಾಡಿದೆ.
ಈಗಾಗಲೇ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಪಾಕಿಸ್ತಾನದ ಜನತೆಗೆ ತೈಲದರ ಏರಿಕೆಯು ಮತ್ತಷ್ಟು ಹೊರೆಯನ್ನುಂಟು ಮಾಡಿದೆ.