ಆಗಸ್ಟ್ 29: ಪ್ರೊ ಕಬಡ್ಡಿ ಲೀಗ್ (PKL 2025) ಮತ್ತೆ ಬಂದಿದೆ. ಆ.29ರಿಂದ ಮುಂದಿನ ಎರಡು ತಿಂಗಳು ದೇಶದಲ್ಲಿ ಕಬಡ್ಡಿ ಕಲರವ ಕೇಳಿ ಬರಲಿದೆ. 12ನೇ ಸೀಸನ್ ನ ಪ್ರೊ ಕಬಡ್ಡಿ ಲೀಗ್ ವಿಶಾಖಪಟ್ಟಣದಿಂದ ಆರಂಭವಾಗಲಿದೆ. ಒಟ್ಟು ನಾಲ್ಕು ನಗರಗಳಲ್ಲಿ ಈ ಬಾರಿ ಕೂಟ ಆಯೋಜನೆ ಮಾಡಲಾಗುತ್ತದೆ.
ಕೂಟದಲ್ಲಿ ಒಟ್ಟು 12 ತಂಡಗಳಿದ್ದು, ಒಟ್ಟು 108 ಪಂದ್ಯಗಳು ನಡೆಯಲಿದೆ. ಈ ಬಾರಿ ಎಂಟು ತಂಡಗಳು ಪ್ಲೇ ಆಫ್ ಗೆ ಅರ್ಹತೆ ಪಡೆಯಲಿರುವುದು ವಿಶೇಷ.ಹೇಗಿದೆ ಬೆಂಗಳೂರು ಬುಲ್ಸ್ ತಂಡಕಳೆದ ವರ್ಷ ನಿರಾಶದಾಯಕ ಪ್ರದರ್ಶನ ನೀಡಿದ್ದ ಬೆಂಗಳೂರು ಬುಲ್ಸ್ (Bengaluru Bulls) ಈ ಬಾರಿ ಹೊಸ ಹುರುಪಿನಿಂದ ಸಜ್ಜಾಗಿದೆ.
ಈ ಬಾರಿ ಬುಲ್ಸ್ ದೀರ್ಘಕಾಲದ ಕೋಚ್ ರಣಧೀರ್ ಸಿಂಗ್ ಸೆಹ್ರಾವತ್ ರಿಂದ ಬೇರ್ಪಟ್ಟಿದ್ದು, ಎರಡು ಬಾರಿ ಚಾಂಪಿಯನ್ ಮುಖ್ಯ ಕೋಚ್ ಬಿ.ಸಿ. ರಮೇಶ್ ಅವರನ್ನು ಸೇರಿಸಿಕೊಂಡಿದೆ. ಅವರು ಬುಲ್ಸ್ (ಸೀಸನ್ 6) ಮತ್ತು ಬೆಂಗಾಲ್ ವಾರಿಯರ್ಸ್ (ಸೀಸನ್ 7) ಎರಡರಲ್ಲೂ ಪ್ರಶಸ್ತಿ ವಿಜೇತ ದಾಖಲೆಯನ್ನು ಹೊಂದಿದ್ದಾರೆ.
ಬುಲ್ಸ್ ತಂಡವು 2025 ರ ಹರಾಜಿನಲ್ಲಿ ಸುಮಾರು 5 ಕೋಟಿ ರೂಪಾಯಿ ಖರ್ಚು ಮಾಡಿ ಅದ್ಭುತ ರಕ್ಷಣಾತ್ಮಕ ತಂಡವನ್ನು ನಿರ್ಮಿಸಿದೆ. ಪಿಕೆಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಭಾರತೀಯ ಡಿಫೆಂಡರ್ ಯೋಗೇಶ್ ದಹಿಯಾ (1.125 ಕೋಟಿ ರೂ.) ಪ್ರಮುಖ ಆಟಗಾರರಾಗಿದ್ದು, ಸೀಸನ್ 9 ರ ಅತ್ಯುತ್ತಮ ಡಿಫೆಂಡರ್ ಅಂಕುಶ್ ರಾಥೀ ಮತ್ತು ಸಂಜಯ್ ಧುಲ್ ಮತ್ತು ಧೀರಜ್ ಅವರಂತಹ ಆಟಗಾರರ ಬೆಂಬಲದೊಂದಿಗೆ ತಂಡ ಸಜ್ಜಾಗಿದೆ.ಬೆಂಗಳೂರು ಬುಲ್ಸ್ ಸ್ಕ್ವಾಡ್-2025ಚಂದ್ರನಾಯಕ್ ಎಂ, ಲಕ್ಕಿ ಕುಮಾರ್, ಮಂಜೀತ್, ಪಂಕಜ್, ಅಂಕುಶ್ ರಾಥೀ, ಯೋಗೇಶ್ ಬಿಜೇಂದರ್ ದಹಿಯಾ, ಸಂಜಯ್ ಕ್ರಿಶನ್ ಧುಲ್, ಧೀರಜ್, ಅಲಿರೇಜಾ ಮಿರ್ಜೈಯಾನ್, ಮನೀಷ್, ಅಹ್ಮದರೇಜಾ ಅಸ್ಗರಿ, ಸತ್ಯಪ್ಪ ಮಟ್ಟಿ, ಆಕಾಶ್ ಸಂತೋಷ್ ಶಿಂಧೆ, ಮಹಿಪಾಲ್, ಸಚಿನ್, ಶುಭಂ ಬಿಟಕೆ, ಅಮಿತ್ ಸಿಂಗ್ ಠಾಕೂರ್, ಶುಭಂ ರಹಾಟೆ, ಸಾಹಿಲ್ ಸುಹಾಸ್ ರಾಣೆ.
ಬೆಂಗಳೂರು ಪಂದ್ಯಗಳ ವೇಳಾಪಟ್ಟಿ
ಆ.29: ಬೆಂಗಳೂರು- ಪುಣೆ (ವಿಶಾಖಪಟ್ಟಣ, ರಾತ್ರಿ 9:00)
ಸೆ.2: ಬೆಂಗಳೂರು- ದೆಹಲಿ (ವಿಶಾಖಪಟ್ಟಣ, ರಾತ್ರಿ 8:00)
ಸೆ.5: ಬೆಂಗಳೂರು- ಮುಂಬೈ (ವಿಶಾಖಪಟ್ಟಣ, ರಾತ್ರಿ 8:00)
ಸೆ.6: ಬೆಂಗಳೂರು – ಪಾಟ್ನಾ (ವಿಶಾಖಪಟ್ಟಣ, ರಾತ್ರಿ 8:00)
ಸೆ.8: ಬೆಂಗಳೂರು – ಹರಿಯಾಣ (ವಿಶಾಖಪಟ್ಟಣ, ರಾತ್ರಿ 8:00)
ಸೆ.12: ಬೆಂಗಳೂರು – ಜೈಪುರ (ಜೈಪುರ, ರಾತ್ರಿ 8:00)
ಸೆ.15: ಬೆಂಗಳೂರು – ಹೈದರಾಬಾದ್ (ಜೈಪುರ, ರಾ. 9:00)
ಸೆ.16: ಬೆಂಗಳೂರು – ತಮಿಳುನಾಡು (ಜೈಪುರ, ರಾ. 9:00)
ಸೆ.22: ಬೆಂಗಳೂರು – ಗುಜರಾತ್ (ಜೈಪುರ, ರಾತ್ರಿ 8:00)
ಸೆ.25: ಬೆಂಗಳೂರು- ಯು.ಪಿ. (ಜೈಪುರ, ರಾತ್ರಿ 8:00)
ಅ.2: ಬೆಂಗಳೂರು – ಪುಣೆ (ಚೆನ್ನೈ, ರಾತ್ರಿ 8:00)
ಅ.5: ಬೆಂಗಳೂರು – ತಮಿಳುನಾಡು (ಚೆನ್ನೈ, ರಾತ್ರಿ 9:00)
ಅ.11: ಬೆಂಗಳೂರು – ಜೈಪುರ (ಚೆನ್ನೈ, ರಾತ್ರಿ 8:00)
ಅ.12: ಬೆಂಗಳೂರು – ಬಂಗಾಳ (ಚೆನ್ನೈ, ರಾತ್ರಿ 9:00)
ಅ.16: ಬೆಂಗಳೂರು – ಪಾಟ್ನಾ (ದೆಹಲಿ, ರಾತ್ರಿ 7:00)
ಅ.18: ಬೆಂಗಳೂರು – ದೆಹಲಿ (ದೆಹಲಿ, ರಾತ್ರಿ 7:00)
ಅ.22: ಬೆಂಗಳೂರು – ಬಂಗಾಳ (ದೆಹಲಿ, ರಾತ್ರಿ 8:00)
ಅ.23: ಬೆಂಗಳೂರು – ಗುಜರಾತ್ (ದೆಹಲಿ, ರಾತ್ರಿ 7:00)
Views: 61