ಯರಬಳ್ಳಿ ಪಿಎಂಶ್ರೀ ಶಾಲೆಯಲ್ಲಿ ಕುವೆಂಪುರವರ 121ನೇ ಜನ್ಮದಿನ ಆಚರಣೆ: ಕುವೆಂಪುರವರ ವಿಶ್ವಮಾನವ ಸಂದೇಶ ಎಂದೆಂದಿಗೂ ಪ್ರಸ್ತುತ. _ ನೀಲಕಂಟಪ್ಪ ,ಹಿರಿಯ ಶಿಕ್ಷಕರು
ಯರಬಳ್ಳಿ: ಡಿ.29.
ಹಿರಿಯೂರು ತಾಲ್ಲೂಕು ಯರಬಳ್ಳಿ ಪಿಎಂಶ್ರೀ ಶಾಲೆಯಲ್ಲಿ ಸೋಮವಾರ ರಾಷ್ಟ್ರಕವಿ ಕುವೆಂಪುರವರ 121ನೇ ಜನ್ಮದಿನ ಆಚರಿಸಲಾಯಿತು. ಕಾರ್ಯಕ್ರಮ ಕುರಿತು ಮಾತನಾಡಿದ ಶಾಲೆಯ ಹಿರಿಯ ಶಿಕ್ಷಕ ನೀಲಕಂಠಪ್ಪ ಇಂದು ಜಗತ್ತು ಜಾತಿ, ಮತ, ಧರ್ಮಗಳ ಗೊಂದಲದಲ್ಲಿ ಸಿಲುಕಿರುವಾಗ, ಕುವೆಂಪುರವರ ವಿಶ್ವಮಾನವ ಸಂದೇಶ ಅತ್ಯಂತ ಪ್ರಸ್ತುತವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದೇಶವು ಜಾತಿ, ಮತ, ಪಂಥ ಮತ್ತು ದೇಶಗಳ ಗಡಿಗಳನ್ನು ಮೀರಿ ಮನುಷ್ಯತ್ವವನ್ನು ಎತ್ತಿ ಹಿಡಿಯುವ ಉದಾತ್ತ ಚಿಂತನೆಯಾಗಿದೆ. ಎಂದರು. ಇದೇ ಸಂಧರ್ಭದಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕ ಮಂಜುನಾಥ್ ಮಾತನಾಡಿ ಕುವೆಂಪು ಅವರ ಜನ್ಮದಿನವು ಕೇವಲ ಒಬ್ಬ ವ್ಯಕ್ತಿಯ ಆಚರಣೆಯಲ್ಲ ಅದು ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗಿನ ಸಂಕುಚಿತ ಭಾವನೆಯನ್ನು ಬಿಟ್ಟು ವಿಶಾಲ ಮನೋಭಾವದ ‘ವಿಶ್ವಮಾನವ’ನಾಗಲು ಪ್ರೇರೇಪಿಸುವ ದಿನವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಸವಿತ ಮಾತನಾಡಿ ಕುವೆಂಪುರವರು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು. ಅವರ ಸಾಹಿತ್ಯಿಕ ಸಾಧನೆಯನ್ನು ಸ್ಮರಿಸುವುದು ಮತ್ತು ಮುಂದಿನ ಪೀಳಿಗೆಗೆ ಅವರ ಮಹೋನ್ನತ ಕೃತಿಗಳಾದ ‘ರಾಮಾಯಣ ದರ್ಶನಂ‘, ‘ಮಲೆಗಳಲ್ಲಿ ಮದುಮಗಳು‘ ಮುಂತಾದವುಗಳ ಪರಿಚಯ ನಮ್ಮ ಇಂದಿನ ಮಕ್ಕಳಿಗೆ ಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಮತಿ ಶಬಾನ, ವಿಜಯಮ್ಮ, ಅನ್ನಪೂರ್ಣ, ಭುವನಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೆ ಸಿಹಿ ಹಂಚಲಾಯಿತು.
Views: 77