ನಿಮ್ಮ ಮಗುವಿನ ಹಸಿವನ್ನು ಹೆಚ್ಚಿಸಲು ಇಲ್ಲಿವೆ 9 ಸಲಹೆಗಳು.

ಮಕ್ಕಳು ಊಟ, ತಿಂಡಿ ಬಿಟ್ಟು ಬಿಡಲು ನೆಪಗಳನ್ನು ಹುಡುಕುತ್ತಾರೆ ಅಥವಾ ಅವರು ಮನೆಯಲ್ಲಿ ಮಾಡಿದ ಆಹಾರವನ್ನು ತಿನ್ನಲು ನಿರಾಕರಿಸಬಹುದು. ಈ ಹಂತದಲ್ಲಿ ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆದ್ದರಿಂದ ಮಕ್ಕಳು ಅವರಿಗೆ ಬೇಕಾದ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತಿದ್ದಾರಾ ಅಥವಾ ಎಲ್ಲ ಆಹಾರಗಳನ್ನು ಬೇಡ ಬೇಡ ಎಂದು ಹಠ ಮಾಡುತ್ತಾ ಸ್ವಲ್ಪ ಸ್ವಲ್ಪ ತಿನ್ನುತ್ತಾರಾ? ಹಾಗಾದರೆ ಮಗುವಿನ ಹಸಿವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ತಿಳಿದುಕೊಳ್ಳಿ.

 ವಯಸ್ಕರಾಗಲಿ ಅಥವಾ ಮಕ್ಕಳಾಗಲಿ, ಅನಾರೋಗ್ಯದಿಂದಿರುವಾಗ ಹಸಿವಿರುವುದಿಲ್ಲ. ಕೆಲವೊಮ್ಮೆ ಮಕ್ಕಳು ಊಟ, ತಿಂಡಿ ಬಿಟ್ಟು ಬಿಡಲು ನೆಪಗಳನ್ನು ಹುಡುಕುತ್ತಾರೆ ಅಥವಾ ಅವರು ಮನೆಯಲ್ಲಿ ಮಾಡಿದ ಆಹಾರವನ್ನು ತಿನ್ನಲು ನಿರಾಕರಿಸಬಹುದು. ಈ ಹಂತದಲ್ಲಿ ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆದ್ದರಿಂದ ಮಕ್ಕಳು ಅವರಿಗೆ ಬೇಕಾದ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತಿದ್ದಾರಾ ಅಥವಾ ಎಲ್ಲ ಆಹಾರಗಳನ್ನು ಬೇಡ ಬೇಡ ಎಂದು ಹಠ ಮಾಡುತ್ತಾ ಸ್ವಲ್ಪ ಸ್ವಲ್ಪ ತಿನ್ನುತ್ತಾರಾ? ಹಾಗಾದರೆ ಮಗುವಿನ ಹಸಿವನ್ನು ಹೇಗೆ ಹೆಚ್ಚಿಸುವುದು ಎಂದು ತಿಳಿದುಕೊಳ್ಳಿ.

ಮಕ್ಕಳಲ್ಲಿ ಕಡಿಮೆ ಹಸಿವಿಗೆ ಕಾರಣವೇನು?

ಮಕ್ಕಳು ಅನಾರೋಗ್ಯಕ್ಕೆ ಒಳಗಾದಾಗ ಹೆಚ್ಚಾಗಿ ಹಸಿವನ್ನು ಕಳೆದುಕೊಳ್ಳುತ್ತಾರೆ, ಆದರೆ ಇದಕ್ಕೆ ಇನ್ನಿತರ ಕಾರಣಗಳೂ ಇವೆ ಎಂದು ಜನರಲ್ ಫಿಸಿಶಿಯನ್ ಡಾ. ಸಂಜಯ್ ಸಿಂಗ್ ಹೇಳುತ್ತಾರೆ.

• ಆತಂಕ, ಒತ್ತಡ ಅಥವಾ ಯಾವುದೇ ಭಾವನಾತ್ಮಕ ಸಮಸ್ಯೆ ನಿಮ್ಮ ಮಗುವಿನ ಹಸಿವಿನ ಮೇಲೆ ಪರಿಣಾಮ ಬೀರಬಹುದು.

 ಬೆಳವಣಿಗೆಯ ಅವಧಿಯಲ್ಲಿ, ಹಸಿವು ತಾತ್ಕಾಲಿಕವಾಗಿ ಕಡಿಮೆಯಾಗಬಹುದು.

• ಅನಿಯಮಿತ ಊಟ ಅಥವಾ ಮೆಲ್ಲಗೆ ಹೆಕ್ಕಿ ಹೆಕ್ಕಿ ತಿನ್ನುವುದು.

• ಆಹಾರ ಅಲರ್ಜಿ ಅಥವಾ ಜೀರ್ಣಕಾರಿ ಸಮಸ್ಯೆಗಳಂತಹ ಪರಿಸ್ಥಿತಿಗಳು ಹಸಿವಿನ ಮೇಲೆ ಪರಿಣಾಮ ಬೀರಬಹುದು.

• ನಿಷ್ಕ್ರಿಯರಾಗಿರುವುದು ಕೂಡ ಹಸಿವನ್ನು ಕಡಿಮೆ ಮಾಡುತ್ತದೆ.

• ಮಕ್ಕಳ ಅಭಿರುಚಿಯ ಆದ್ಯತೆಗಳು ಅವರು ತಿನ್ನಲು ಸಿದ್ಧರಿರುವ ಆಹಾರದ ಮೇಲೆ ಪರಿಣಾಮ ಬೀರಬಹುದು.

• ದಿನಚರಿಯಲ್ಲಿನ ಬದಲಾವಣೆಗಳು ಆಹಾರ ಪದ್ಧತಿಯನ್ನು ಅಡ್ಡಿಪಡಿಸಬಹುದು.

ಮಗುವಿನ ಹಸಿವನ್ನು ಹೆಚ್ಚಿಸುವುದು ಹೇಗೆ?

ನಿಮ್ಮ ಮಗುವಿನ ಹಸಿವನ್ನು ಸರಿಪಡಿಸಲು, ನೀವು ಈ ಕೆಳಗಿನ ತಂತ್ರಗಳನ್ನು ಪ್ರಯತ್ನಿಸಬಹುದು!

1. ವಿವಿಧ ರೀತಿಯ ಆಹಾರಗಳನ್ನು ನೀಡಿ

ಪಾಲಕ್ ಮತ್ತು ಹಾಗಲಕಾಯಿ ತುಂಬಾ ಪೌಷ್ಟಿಕವಾದ ಆಹಾರವಾಗಿದೆ. ಇದೆ ರೀತಿ ನೀವು ದಿನವೂ ಬೇರೆ ಬೇರೆ ರೀತಿಯ ತರಕಾರಿಗಳನ್ನು ಬೇಯಿಸಿ ಮಗುವಿಗೆ ನೀಡಬಹುದು. ಆದರೆ ಪ್ರತಿದಿನ ಒಂದು ಅಥವಾ ಎರಡು ತರಕಾರಿಗಳನ್ನು ಬೇಯಿಸುವುದರಿಂದ ನಿಮ್ಮ ಮಗು ಆಹಾರದಿಂದ ದೂರ ಸರಿಯುತ್ತದೆ. ಊಟವನ್ನು ಹೆಚ್ಚು ಆಕರ್ಷಕವಾಗಿಸಲು ವೈವಿಧ್ಯಮಯ ರೀತಿಯಲ್ಲಿ ಪೌಷ್ಟಿಕ ಆಹಾರವನ್ನು ಒದಗಿಸಿ ಎಂದು ತಜ್ಞರು ಹೇಳುತ್ತಾರೆ.

2. ನಿಯಮಿತ ಊಟದ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಿ

ಬೆಳಗಿನ ಉಪಾಹಾರದಿಂದ ಮಧ್ಯಾಹ್ನದ ಊಟದವರೆಗೆ, ಸಂಜೆ ತಿಂಡಿ ಮತ್ತು ರಾತ್ರಿಯ ಊಟದವರೆಗೆ, ನೀವು ವೇಳಾಪಟ್ಟಿಯನ್ನು ಹೊಂದಿರಬೇಕು.ಈ ರೀತಿ ಸ್ಥಿರವಾಗಿ, ಊಟ ಮತ್ತು ತಿಂಡಿ ಮಾಡುವ ಸಮಯ ನಿಗದಿಪಡಿಸುವುದರಿಂದ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

3. ಕುಟುಂಬದೊಂದಿಗೆ ಊಟ ಮಾಡುವುದನ್ನು ಪ್ರೋತ್ಸಾಹಿಸಿ

ನೀವು ಸಂಜೆ ಕಚೇರಿಯಿಂದ ಹಿಂತಿರುಗುವರಾಗಿದ್ದರೆ ಅಥವಾ ಮನೆಯಲ್ಲಿಯೇ ಇರುವವರಾಗಿದ್ದರೆ ಕನಿಷ್ಠ ನಿಮ್ಮ ಕುಟುಂಬದೊಂದಿಗೆ ಊಟ ಮಾಡಲು ಪ್ರಯತ್ನಿಸಿ. ಒಟ್ಟಿಗೆ ಊಟ, ತಿಂಡಿ ಮಾಡುವುದು ಆಹಾರದ ಸುತ್ತಲೂ ಸಕಾರಾತ್ಮಕ ವಾತಾವರಣವನ್ನು ಉತ್ತೇಜಿಸುತ್ತದೆ.

4. ಊಟದ ಸಮಯವನ್ನು ಆನಂದದಾಯಕವಾಗಿಸಿ

ಕೆಲವೊಮ್ಮೆ ಊಟದ ಸಮಯವು ಒತ್ತಡವನ್ನು ಉಂಟುಮಾಡಬಹುದು, ವಿಶೇಷವಾಗಿ ಶಾಲೆಯಲ್ಲಿ ತಿನ್ನುವುದು, ಅಥವಾ ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ತಿನ್ನುವುದರಿಂದ ಮಗುವಿಗೆ ಊಟ ಸೇರದಿರಬಹುದು. ಹಾಗಾಗಿ ಊಟದ ಸಮಯವನ್ನು ಆನಂದದಾಯಕ ಮತ್ತು ಒತ್ತಡ ಮುಕ್ತವಾಗಿಸಿ ಇದರಿಂದ ನಿಮ್ಮ ಮಗು ತಿನ್ನುವುದನ್ನು ತಪ್ಪಿಸುವುದಿಲ್ಲ.

5. ನಿಮ್ಮ ಮಗುವಿಗೆ ರೋಲ್ ಮಾಡೆಲ್ ಆಗಿರಿ

ಮಕ್ಕಳು ಹೆಚ್ಚಾಗಿ ತಮ್ಮ ಹೆತ್ತವರ ಆಹಾರ ಪದ್ಧತಿಯನ್ನು ಅನುಕರಿಸುತ್ತಾರೆ ಎಂದು ಡಾ. ಸಂಜಯ್ ಸಿಂಗ್ ಹೇಳುತ್ತಾರೆ. ಆದ್ದರಿಂದ, ನೀವು ಮಕ್ಕಳ ಮುಂದೆ ಊಟವನ್ನು ತಪ್ಪಿಸುವುದಿಲ್ಲ ಅಥವಾ ಅನಾರೋಗ್ಯಕರ ಆಹಾರವನ್ನು ತಿನ್ನುವುದಿಲ್ಲ ಎಂದು ಮೊದಲು ಖಚಿತಪಡಿಸಿಕೊಳ್ಳಿ.

6. ಗೊಂದಲಗಳನ್ನು ಮಿತಿಗೊಳಿಸಿ

ಟಿವಿ ಮತ್ತು ಮೊಬೈಲ್ ನೋಡುತ್ತಾ ಊಟ ತಿಂಡಿ ತಿನ್ನುವ ಅಭ್ಯಾಸವನ್ನು ಮಕ್ಕಳು ತ್ಯಜಿಸಬೇಕು. ಏಕೆಂದರೆ ಊಟದ ಸಮಯದಲ್ಲಿ ಪರದೆಯ ಸಮಯ ಮತ್ತು ಮಕ್ಕಳ ಇತರ ಗೊಂದಲಗಳನ್ನು ಕಡಿಮೆ ಮಾಡುವುದರಿಂದ ನಿಮ್ಮ ಮಗು ಆಹಾರದ ಮೇಲೆ ಗಮನ ಹರಿಸುವಂತೆ ಮಾಡುತ್ತದೆ.

7. ಅತಿಯಾದ ತಿಂಡಿ ತಿನ್ನುವುದನ್ನು ತಪ್ಪಿಸಿ

ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವೆ ತಿಂಡಿಗಳನ್ನು ತಿನ್ನುವುದು ಒಳ್ಳೆಯದು, ಆದರೆ ಹೆಚ್ಚು ತಿಂಡಿಗಳು ಮಗುವಿನ ಊಟದ ಹಸಿವನ್ನು ಹಾಳು ಮಾಡುತ್ತವೆ. ಹಾಗಾಗಿ ಮಕ್ಕಳು ಮಧ್ಯಂತರದ ಸಮಯದಲ್ಲಿ ಅತಿಯಾಗಿ ತಿಂಡಿ ತಿನ್ನುವುದನ್ನು ತಪ್ಪಿಸಿ.

8. ಒಟ್ಟಿಗೆ ಅಡುಗೆ ಮಾಡಿ

ಎಲ್ಲವನ್ನೂ ನೀವೇ ಮಾಡಬೇಕಾಗಿಲ್ಲ. ಆಹಾರ ತಯಾರಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದರಿಂದ ಅವರು ತಿನ್ನಲು ಹೆಚ್ಚು ಆಸಕ್ತಿ ಹೊಂದಬಹುದು. ಚಿಕ್ಕ ಪುಟ್ಟ ಕೆಲಸಗಳನ್ನು ಅವರಿಗೆ ಹೇಳಿ. ಸರಿಯೋ ತಪ್ಪೋ ಮಕ್ಕಳು ಅಡುಗೆ ಮನೆಯಲ್ಲಿ ಕಾಲ ಕಳೆಯುವುದನ್ನು ತಪ್ಪಿಸಬೇಡಿ. ಬರುಬರುತ್ತಾ ಮಕ್ಕಳು ಆಹಾರದ ಮೇಲೆ ಪ್ರೀತಿ ತೋರಿಸಲು ಆರಂಭಿಸುತ್ತಾರೆ.

9. ಅವರ ಆದ್ಯತೆಗಳನ್ನು ಗೌರವಿಸಿ

ನಿಮ್ಮ ಮಗು ಪೋಷಕಾಂಶಗಳಿಂದ ತುಂಬಿದ ಆಹಾರವನ್ನು ತಿನ್ನಬೇಕೆಂದು ನೀವು ಬಯಸುತ್ತೀರಿ, ಆದರೆ ಎಲ್ಲಾ ಆಹಾರಗಳನ್ನು ತಿನ್ನಲು ಅವರನ್ನು ಒತ್ತಾಯಿಸಬೇಡಿ. ಆಹಾರದ ವಿಷಯಕ್ಕೆ ಬಂದಾಗ ನೀವು ಅವರ ಇಷ್ಟಾನಿಷ್ಟಗಳನ್ನು ಗೌರವಿಸಬೇಕು.

Source : https://tv9kannada.com/health/poor-appetite-in-children-here-are-9-tips-to-increase-your-childs-appetite-health-news-pgt-732376.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *