ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು. 13 : ಛಲವಾದಿ ಮಹಾಸಭೆ ಜಿಲ್ಲಾ ಸಮಿತಿಯಿಂದ ನೂತನ ರಾಜ್ಯಾದ್ಯಕ್ಷರಾದ ವಾಣಿ ಕೆ ಶಿವರಾಮ್ ಅವರಿಗೆ ಸನ್ಮಾನ .ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಛಲವಾದಿ ಮಹಾಸಭಾದ ಜಿಲ್ಲಾ ಸಮಿತಿಯ ಪದಗ್ರಹಣ ಕಾರ್ಯಕ್ರಮವನ್ನು ಚಿತ್ರದುರ್ಗದ ಸಿಬಾರದ ಛಲವಾದಿ ಗುರುಪೀಠದಲ್ಲಿ ಸಂವಿದಾನ ಪೀಠಿಕೆ ಓದುವುದರ ಮೂಲಕ ಉದ್ಘಾಟನೆ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯಾದ್ಯಕ್ಷೆ ವಾಣಿ ಕೆ ಶಿವರಾಮ್ ಅವರು ಛಲವಾದಿ ಮಹಾಸಭೆ ಯನ್ನು ಕೆ ಶಿವರಾಮ್ ಸ್ಥಾಪಿಸಿ. ಸಮುದಾಯದ ಏಳಿಗೆಗಾಗಿ ತುಂಬಾ ಶ್ರಮಪಟ್ಟ ಧೀಮಂತ ವ್ಯಕ್ತಿಯಾಗಿದ್ದರು.ಬುದ್ಧ ಬಸವ ಅಂಬೇಡ್ಕರ್ ಹಾದಿಯಲ್ಲೇ ಬಂದವರು. ತನ್ನ ಸಮುದಾಯಕ್ಕೋಸ್ಕರ ಹಗಲು ರಾತ್ರಿ ಕೆಲಸಕ್ಕೆ ಮುಡಿಪಾಗಿಟ್ಟ ವರು.ಆದರೆ ಅವರ ಅಕಾಲಿಕ ಮರಣದಿಂದ ನನಗೆ ಹಾಗೂ ನಮ್ಮ ಛಲವಾದಿ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.ಅವರು ನನ್ನಂತೆಯೇ ನನ್ನವರು ಸಹ ಐಎಎಸ್. ಐಪಿಎಸ್. ಕೆಎಎಸ್.ಅಧಿಕಾರಿಗಳಾಗಬೇಕೆಂದು ಸಾಕಷ್ಟು ಕನಸುಗಳನ್ನು ಕಂಡಿದ್ದರು.ಕನಸುಗಳನ್ನು ನನಸಾಗಿಸಲು ನಾನು ಅವರ ಸ್ಥಾನ ತುಂಬಲು ಇಂದು ದೊಡ್ಡ ಜವಾಬ್ದಾರಿ ಹೊತ್ತಿದ್ದೇನೆ.ನಿಮ್ಮ ಸಹಕಾರ ಅತ್ಯಗತ್ಯ.ರಾಜ್ಯಾದ್ಯಂತ ಪ್ರವಾಸ ಮಾಡಿ ಮಹಾಸಭಾವನ್ನು ಮತ್ತಷ್ಟು ಭಲಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಶ್ರೀ ಬಸವನಾಗಿದೇವ ಶರಣರು ದಿವ್ಯ ಸಾನಿದ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಹೆಚ್ .ಶೇಷಪ್ಪ.ಮುಖ್ಯ ಅತಿಥಿಗಳಾಗಿ ರಾಜ್ಯ ಖಜಾಂಚಿ ಮೈಕೋ ನಾಗರಾಜ್. ರಾಜ್ಯ ಜಂಟಿಕಾರ್ಯದರ್ಶಿ ನಾಗೇಶ್.ನಿರ್ದೇಶಕ ಶಿವಪ್ಪ. ಹೇಮಂತ್ ಕುಮಾರ್. ಗ್ರಾಮಪಂಚಾಯತಿ ಸದಸ್ಯ ಜಾನಕಲ್ ನಾಗರಾಜ್. ರಾಮಚಂದ್ರಪ್ಪ.ನರಸಿಂಹಮೂರ್ತಿ. ದೇವರಾಜ್ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿ.ಅಭಯ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ರಾಜ್ಯಮಟ್ಟದಲ್ಲಿ ತೃತೀಯ ಶ್ರೇಣಿ ಪಡೆದ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.