ಜಿರಳೆಗೂ ‘ಬಂಗಾರದ ಬೆಲೆ’… ಈ ಮಾರ್ಕೆಟ್’ನಲ್ಲಿ ಜಿರಳೆ ಮಾರಿದ್ರೆ ಸಿಗುತ್ತೆ ಲಕ್ಷ ಲಕ್ಷ ದುಡ್ಡು!

Cockroach Farming: ಅನೇಕ ರಾಷ್ಟ್ರಗಳಲ್ಲಿ ಜಿರಳೆಯನ್ನು ಆಹಾರವಾಗಿ ಬಳಕೆ ಮಾಡಲಾಗುತ್ತದೆ. ಅದರಲ್ಲಿ ಒಂದು ಚೀನಾ. ಇನ್ನು ಆಫ್ರಿಕನ್ ದೇಶಗಳಲ್ಲಿ ಆಹಾರದ ಅಭಾವದಿಂದ ಜಿರಳೆಗಳನ್ನು ತಿನ್ನುತ್ತಾರೆ ಎಂದು ಹೇಳಲಾಗುತ್ತದೆ.

  • ಅನೇಕ ರಾಷ್ಟ್ರಗಳಲ್ಲಿ ಜಿರಳೆಯನ್ನು ಆಹಾರವಾಗಿ ಬಳಕೆ ಮಾಡಲಾಗುತ್ತದೆ.
  • ಆಫ್ರಿಕನ್ ದೇಶಗಳಲ್ಲಿ ಆಹಾರದ ಅಭಾವದಿಂದ ಜಿರಳೆಗಳನ್ನು ತಿನ್ನುತ್ತಾರೆ
  • ಆದರೆ ಈ ಜಿರಳೆಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆಯಿದೆ ಗೊತ್ತಾ?

Cockroach Farming: ಸಾಮಾನ್ಯವಾಗಿ ಜಿರಳೆಗಳು ಕಂಡರೆ ಅಸಹ್ಯ ಪಡುತ್ತೇವೆ. ಇನ್ನೂ ಕೆಲವರು ಮನೆಯಲ್ಲಿ ಎಲ್ಲಾದರೂ ಜಿರಳೆ ಕಂಡರೆ ಸಾಕು ಎದ್ನೋ ಬಿದ್ನೋ ಅಂತ ಓಡಿಯೇ ಹೋಗ್ತಾರೆ. ಇವುಗಳು ಅತೀ ಹೆಚ್ಚು ಸೋಂಕು ಹರಡುವ ಜೀವಿಗಳು ಎಂದರೂ ತಪ್ಪಾಗಲ್ಲ. ಆದರೆ ಈ ಜಿರಳೆಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆಯಿದೆ ಗೊತ್ತಾ?

ಅನೇಕ ರಾಷ್ಟ್ರಗಳಲ್ಲಿ ಜಿರಳೆಯನ್ನು ಆಹಾರವಾಗಿ ಬಳಕೆ ಮಾಡಲಾಗುತ್ತದೆ. ಅದರಲ್ಲಿ ಒಂದು ಚೀನಾ. ಇನ್ನು ಆಫ್ರಿಕನ್ ದೇಶಗಳಲ್ಲಿ ಆಹಾರದ ಅಭಾವದಿಂದ ಜಿರಳೆಗಳನ್ನು ತಿನ್ನುತ್ತಾರೆ ಎಂದು ಹೇಳಲಾಗುತ್ತದೆ.

ಇನ್ನು ಜಿರಳೆಯಲ್ಲಿ ಕೆಲವು ಉತ್ತಮ ಪೌಷ್ಟಿಕಾಂಶದ ಗುಣಗಳಿವೆ ಎಂದು ಸಾಬೀತಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ, ಆಫ್ರಿಕದಲ್ಲಿ ಜಿರಳೆ ಸೇವಿಸುವ ಜನರಿಗೆ ಶೇ.20ರಷ್ಟು ಪ್ರಮಾಣದಲ್ಲಿ ಪೌಷ್ಟಿಕತೆ ದೊರೆತಿದೆ ಎಂದು ಹೇಳಲಾಗುತ್ತದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲ ಮೂಲಗಳ ಪ್ರಕಾರ, ಜಗತ್ತಿನಲ್ಲಿ 2100 ಜಾತಿಯ ಕೀಟಗಳನ್ನು ಖಾದ್ಯವೆಂದು ಪರಿಗಣಿಸಲಾಗಿದೆ. ಅದರಲ್ಲಿ ಜಿರಳೆ ಕೂಡ ಸೇರಿದೆ.

ಇನ್ನು ಕೆಲವೊಂದು ದೇಶಗಳಲ್ಲಿ ಜಿರಳೆಗಳ ಫಾರ್ಮ್ ಇದೆ. ಅದರಲ್ಲಿ ಒಂದು ಆಫ್ರಿಕಾದ ತಾಂಜಾನಿಯಾದಲ್ಲಿರುವ ಡೇನಿಯಲ್ ರೋಹುರಾ ಅವರ ಫಾರ್ಮ್. ಈತನ ಪ್ರಕಾರ ಜಿರಳೆಗೆ ಚಿನ್ನದ ಬೆಲೆ. ಪ್ರತಿ ಕೆಜಿಗೆ 5 ಯುರೋಗಳಂತೆ ಈತ ಮಾರಾಟ ಮಾಡುತ್ತಾನೆ.

ನಿಮಗಿದು ಗೊತ್ತಾ?.. ಚೀನಾದಲ್ಲಿ ಜಿರಳೆಗಳನ್ನು ಔಷಧೀಯ ಮತ್ತು ಸೌಂದರ್ಯವರ್ಧಕ ವಸ್ತುಗಳಾಗಿಯೂ ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲ, ಜಿರಳೆಗಳು ಪ್ರೊಟೀನ್’ನಿಂದ ಸಮೃದ್ಧವಾಗಿದ್ದು, ಅನೇಕ ಹೊಟೇಲ್, ರೆಸ್ಟೋರೆಂಟ್‌’ಗಳಲ್ಲಿ ವಿಶೇಷ ಖಾದ್ಯವಾಗಿ ಲಭ್ಯವಿದೆ. ವಿಶ್ವದ ಅತಿದೊಡ್ಡ ಜಿರಳೆ ಉತ್ಪಾದನಾ ಘಟಕ ಚೀನಾದ ಕ್ಸಿಚಾಂಗ್‌’ನಲ್ಲಿದೆ.

Source: https://zeenews.india.com/kannada/india/cockroach-farming-in-china-sells-it-at-around-5-euros-per-kg-179086

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *