ಹಾಸನ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನಾಯಕರು ಕೂಡ ಹಳೆ ಮೈಸೂರು ಭಾಗವನ್ನು ಗೆಲ್ಲುವುದಕ್ಕಾಗಿ ಕಸರತ್ತು ನಡೆಸುತ್ತಿದೆ. ಹೇಳಿ ಕೇಳಿ ಹಳೇ ಮೈಸೂರು ಭಾಗ ಜೆಡಿಎಸ್ ನ ಭದ್ರಕೋಟೆ ಇದ್ದಂತೆ. ಹಾಸನದಲ್ಲೂ ಜೆಡಿಎಸ್ ಪ್ರಾಬಲ್ಯವಿದೆ. ಆದರೆ ಈ ಬಾರಿ ಬಿಜೆಪಿ ಒಂದು ಕ್ಷೇತ್ರ ಕಬಳಿಸಿದೆ. ಪ್ರೀತಂ ಗೌಡ ಆ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಬಾರಿ ಅದನ್ನೂ ಪಡೆಯಲೇಬೇಕೆಂದು ದೊಡ್ಡ ಗೌಡರ ಕುಟುಂಬಸ್ಥರು ಮನಸ್ತಾಪ ಮರೆತು ಒಂದಾದರೆ, ಈ ಕಡೆ ಪ್ರಧಾನಿ ಮೋದಿ ಅವರು ಅದೇ ಜೆಡಿಎಸ್ ಕೋಟೆಗೆ ಇಂದು ಭೇಟಿ ನೀಡಿದ್ದಾರೆ. ಜೆಡಿಎಸ್ ವಿರುದ್ಧ ಅಬ್ಬರಿಸಿ, ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಉಚ್ಛರಿಸಿದ್ದಾರೆ.
ಬೇಲೂರಿನಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ – ಜೆಡಿಎಸ್ ಗೆ ಮತ ಹಾಕಿದರೆ ಕರ್ನಾಟಕದ ಭವಿಷ್ಯದ ಬಾಗಿಲು ಮುಚ್ಚಿದಂತೆಯೇ. ಕಾಂಗ್ರೆಸ್ – ಜೆಡಿಎಸ್ ನಡುವೆ ವಿಚಿತ್ರವಾದ ಸಮಾನತೆ ಇದೆ. ಏನೆಂದರೆ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ನೆಲೆಸಿರುವ ಒಂದು ಪರಿವಾರದ ಸೇವೆ ಮಾಡುತ್ತಿದ್ದಾರೆ. ಯಾರು ಕುಟುಂಬದ ಸೇವೆ ಮಾಡುತ್ತಾರೋ..? ಯಾರು ಆ ಕುಟುಂಬಕ್ಕೆ ಹತ್ತಿರ ಇರುತ್ತಾರೊ..? ಯಾರು ಆ ಪರಿಹಾರಕ್ಕೆ ಮಂಡಿಯೂರಿ ಕೂರುತ್ತಾರೋ..? ಅಂತಹವೆಇಗೆ ಮಾತ್ರ ಕಾಂಗ್ರೆಸ್ ನಲ್ಲಿ ಸ್ಥಾನ- ಮಾನ ಸಿಗಲಿದೆ.
ಜೆಡಿಎಸ್ ಕೂಡ ಒಂದು ರೀತಿಯ ಪ್ರೈವೆಟ್ ಲಿಮಿಟೆಡ್. ಇಲ್ಲಿ ಕುಟುಂಬ ಅಭಿವೃದ್ಧಿಗೆ ಮಾತ್ರ ಒತ್ತು ಸಿಗಲಿದೆ. ಇಲ್ಲಿ ಜನರ ಹಿತ ಇಲ್ಲ. ಪರಿವಾರದ ಹಿತಾಸಕ್ತಿ ನಡೆಯುತ್ತದೆ. ಕುಟುಂಬಕ್ಕಾಗಿ ಕರ್ನಾಟಕದ ತುಂಬೆಲ್ಲಾ ಹೋರಾಟ ನಡೆಯುತ್ತದೆ ಎಂದಿದ್ದಾರೆ.
The post ಹಾಸನದಲ್ಲಿ ಜೆಡಿಎಸ್ ಬಗ್ಗೆ ವ್ಯಂಗ್ಯವಾಡಿದ ಪ್ರಧಾನಿ ನರೇಂದ್ರ ಮೋದಿ..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/GkrQmqj
via IFTTT