
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 13 : ಪಂಚಮಸಾಲಿ ಸಮುದಾಯಕ್ಕೆ ೨ ಎ.ಮೀಸಲಾತಿ ನೀಡುವಂತೆ ಬೆಳಗಾವಿಯ ಸುವರ್ಣ ಸೌಧದ ಎದುರು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದನ್ನು ಖಂಡಿಸಿ ಜಿಲ್ಲಾ ಪಂಚಮಸಾಲಿ ಸಮಾಜ ಹಾಗೂ ವೀರಶೈವ ಲಿಂಗಾಯಿತ ಒಳ ಪಂಗಡಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು
ಶುಕ್ರವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಲಿಂಗಾಯಿತ ವಿರೋಧಿ ರಾಜ್ಯದ ಮುಖ್ಯಮಂತ್ರಿಗಳ
ವಿರುದ್ದ ಧಿಕ್ಕಾರಗಳನ್ನು ಕೂಗಿದರು. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯುತ ಜನಾಂಗದ
ಮೇಲೆ ಪದೇ ಪದೇ ದೌರ್ಜನ್ಯ ವೆಸಗುತ್ತಿದೆ. ಈ ಹಿಂದೆ ನಮ್ಮ ಸಮಾಜವನ್ನು ಹೊಡೆಯಲು ಪ್ರತ್ಯೇಕ ಲಿಂಗಾಯುತ ಧರ್ಮದ
ಹೋರಾಟವನ್ನು ಅಧಿಕಾರ ದಾಹಕ್ಕಾಗಿ ಬಳಸಿಕೊಂಡಿರುವುದು ದುರಂತ ಎಂದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ ಸಮುದಾಯಕ್ಕೆ ೨ ಎ.ಮೀಸಲಾತಿ
ನೀಡುವಂತೆ ಹೋರಾಟ ಮಾಡುತ್ತಿರುವವರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಕೂಡಲೆ ಸೇವೆಯಿಂದ
ಅಮಾನತ್ತುಗೊಳಿಸಬೇಕು. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಸರ್ಕಾರ ನಮ್ಮ ಚಳುವಳಿಯನ್ನು
ಹತ್ತಿಕ್ಕಲು ಅವಕಾಶ ಕೊಡುವುದಿಲ್ಲ. ಪ್ರತಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪೊಲೀಸರ ನಡೆಯನ್ನು ವಿರೋಧಿಸಿ ಪ್ರತಿಭಟನೆ
ನಡೆಸಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಸಿದರು.
ತಾಲ್ಲೂಕು ಅಧ್ಯಕ್ಷ ಪಿ.ಎಂ.ಸಿದ್ದಪ್ಪ, ಉಪಾಧ್ಯಕ್ಷ ರುದ್ರೇಶ್ ಐಗಳ್, ಎಸ್.ಟಿ. ನವೀನ್‌ಕುಮಾರ್, ಎಂ.ಶಶಿಧರ್‌ಬಾಬು,
ಜಿ.ಸಿ.ತಿಪ್ಪಣ್ಣ, ಮಹಂತೇಶ್, ಮಂಜಣ್ಣ, ಗಾರೆಹಟ್ಟಿ ವಿಜಯ್, ಬಸವರಾಜು ದಿನೇಶ್, ಸಿದ್ದು ಲವ, ದೇವೇದ್ರಪ್ಪ, ದಾಳಿಂಬೆ
ಮಂಜುನಾಥ್, ಎಸ್.ಪರಮೇಶ್, ಬಿವಿಕೆ ಕಾರ್ತಿಕ್, ತಿಪ್ಪೇಸ್ವಾಮಿ, ಜಾಲಿಕಟ್ಟೆ ರುದ್ರಣ್ಣ, ಶಿವಾನಂದ್, ಪ್ರವೀಣ್, ನಿರ್ಮಲ
ಬಸವರಾಜ್, ರೀನಾ ವೀರಭದ್ರಪ್ಪ, ಶಿವಪ್ರಕಾಶ್, ರುದ್ರಾಣಿ ಗಂಗಾಧರ್, ಮೋಕ್ಷಾ ರುದ್ರಸ್ವಾಮಿ, ಮನು ತಮಟಕಲ್ಲು, ಶಿವರಾಜ್
ಜಾಲಿಕಟ್ಟೆ, ಉಮಾ ರಮೇಶ್, ಶೈಲಾ ಕಲ್ಲೇಶ್, ಶ್ರೀದೇವಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.