ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ. 13

ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅವ್ಯವಹಾರ ನಡೆದಿದ್ದು, ಇದರ ಬಗ್ಗೆ ಸೂಕ್ತವಾದ ತನಿಖೆಯನ್ನು ನಡೆಸುವುದರ ಮೂಲಕ ಜನತೆ ಹಣವನ್ನು ವಾಪಾಸ್ಸು ಕೂಡಿಸು ವಂತೆ ಅಗ್ರಹಿಸಿ ನೊಂದವರು ಜಿಲ್ಲಾಡಳಿತಕ್ಕೆ ಶುಕ್ರವಾರ ಪ್ರತಿಭಟನೆಯನ್ನು ನಡೆಸಿ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಾಂಗ್ರೆಸ್ ಮುಖಂಡರಾದ ಬಿ.ಟಿ.ಜಗದೀಶ್ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿ ಕೊಂಡ್ಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2009-2010 ರಿಂದ 2023-24 ರ ಸಾಲಿನ ವರೆಗೆ ಮರು ಆಡಿಟ್ ಮಾಡಿಸಿ ಮತ್ತು ತನಿಖಾ ಅಧಿಕಾರಿಗಳಿಂದ ರೈತರ ಹಿತದೃಷ್ಠಿಯಿಂದ 3 ಜನ ಸಿ.ಇ.ಓ ಗಳ ಅಧಿಕಾರ ಅವಧಿಯಲ್ಲಿ ನಡೆದಿರುವ ವ್ಯವ ಹಾರದ ಮೂಲ ದಾಖಲಾತಿಗಳ ಪ್ರಕಾರ ತುರ್ತಾಗಿ ತನಿಖೆ ಮಾಡಿಸುವಂತೆ ಮನವಿ ಮಾಡಿದ್ದು, ಸುಮಾರು 3 ರಿಂದ 4 ಕೋಟಿ ಅವ್ಯವಹಾರ ಆಗಿದ್ದು, ತನಿಖೆ ಮಾಡಲು ಸಹಕಾರ ಸಂಘ ನಿಬಂಧಕರ ಚಿತ್ರದುರ್ಗ, ಮತ್ತು ಸಹಕಾರ ಸಂಘದ ಉಪ ನಿಬಂಧಕರ ಚಿತ್ರದುರ್ಗ ಹಾಗೂ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿಗೆ ಹಲವಾರು ಬಾರಿ ಮನವಿ ನೀಡಿದ್ದರು ಸಮಸ್ಯೆ ಬಗೆಹರಿಸಲಿಲ್ಲ ತನಿಖೆ ಮಂದಗತಿಯಲ್ಲಿ ಸಾಗುತ್ತಿದ್ದು ಅನೇಕ ಬಡವರು, ಅಂಗವಿಕಲರು ವೃದ್ಧರಿಗೆ ಅನ್ಯಾಯವಾಗಿದೆ ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮುಷ್ಕರದ ಮೂಲಕ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಕೂರು ಕೊಂಡ್ಲಹಳ್ಳಿಯ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಈ ಸಂಘದಲ್ಲಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಇಒಗಳಾದ ಇಮಾಂಹುಸೇನ್ ಜಯಣ್ಣ ಪೂಣಾಂಕಮೂರ್ತಿ ಇವರುಗಳು ಸಂಘದಲ್ಲಿ ಸಾರ್ವಜನಿಕರ ಹಣ ದುರುಪಯೋಗ ಪಡೆಸಿಕೊಂಡಿರುತ್ತಾರೆ. ಆದ್ದರಿಂದ ಇವರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ಆರ್‍ಡಿ, ಪಿಗ್ನಿ, ಡೆಪಾಸಿಟ್. ಇವರಿಂದ ದುರುಪ ಯೋಗ ಪಡೆಸಿದ ಹಣದಿಂದ ಸಾರ್ವಜನಿಕರಿಗೆ ವಾಪಾಸು ಕೋಡಿಸಬೇಕೆಂದು ಮನವಿ ಮಾಡಿದ್ದಾರೆ.
ಕೊಂಡ್ಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ದಿನಾಂಕ: 23-12-2024 ರಂದು 64 ಎನ್‍ಕ್ವೆರಿಯಲ್ಲಿ ಅಡಿಯಲ್ಲಿ ತನಿಕೆಗೆ ಆದೇಶ ಆದರೂ ಒಂದು ವರ್ಷ ಮುಗಿದಿದ್ದರೂ 3 ಸಿ.ಇ.ಓಗಳ ಮೇಲೆ ಯಾವುದೇ ರೀತಿ ಕ್ರಮ ಜರುಗಿಸಿಲ್ಲವಾದ್ದರಿಂದ ಇವರ ಅವಧಿಯಲ್ಲಿ ನಡೆದ ವ್ಯವಹಾರ ನಡೆಸಿದ ಮೂಲ ದಾಖಲೆಗಳ ಇವೆ. ಈ ಮೂವರು ಸಿ.ಇ.ಒ ಆಗಿರುವ ಅವಧಿಯಲ್ಲಿ ಕೆಸಿಸಿ ಮತ್ತು ಹೆಚ್ಚುವರಿ ಷೇರು 30,00,000/- ಈ ಮೂವರು ಸಿ.ಇ.ಓ ಆಗಿರುವ ಅವಧಿಯಲ್ಲಿ ಎಸ್.ಪಿ.ಖಾತೆ. 30.00.000/- ಖಾತೆಗ ಳಲ್ಲಿ ಇದ್ದು ಇದು ಸಹ ಒಂದು ರೂಪಾಯಿ ಸಮೇತ ಬ್ಯಾಂಕ್ ಬ್ಯಾಲೆನ್ಸ್ ಇರುವುದಿಲ್ಲ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡಿ ಹೊರಟು ಹೋಗಿರುತ್ತಾರೆ. ಈ ಮೂವರು ಸಿ.ಇ.ಓಗಳ ಅಧಿಕಾರ ಅವಧಿಯಲ್ಲಿ ಆಗಿರುವ ಅವ್ಯವಹಾರದ ಒಟ್ಟು ಮೊತ್ತ 2,01,71,102/- ಮೇಲಾಧಿಕಾರಿಗಳಿಗೆ ಎಷ್ಟು ಸಾರಿ ದೂರು ನೀಡಿದರೂ ಸಹ 64 ಎನ್‍ಕ್ವೆರಿ ಮಾಡುತ್ತೇವೆ ಎಂದು ಸುಮ್ಮನೆ ಕಾಲಹರಣ ಮಾಡಿಕೊಂಡು ಬರುತ್ತಿರುತ್ತಾರೆ.
ಸದಸ್ಯರುಗಳು ಸಾರ್ವಜನಿಕರಿಗೆ ಸಮಾದಾನ ಹೇಳಿ ಹೇಳಿ ಕಳುಹಿಸಿರುತ್ತಾರೆ. ನಾವುಗಳು 2-3 ತಿಂಗಳು ಎಂದು ಹೇಳುತ್ತಾ ಬಂದಿರುತ್ತಾರೆ ತನಿಖೆ ಮಾತ್ರ ಆಗಿಲ್ಲ, ಈಗ ನೋಡಿದರೆ ಅದು ತನಿಕೆಯು ಆಗುವ ಮಟ್ಟಕ್ಕೆ ಕಾಣುತ್ತಿಲ್ಲ ಇನ್ನು ಮುಂದಕ್ಕೆ ಹೋಗುತ್ತಲೇ ಇರುತ್ತದೆ ಇತ್ತ ಸಾರ್ವಜನಿಕರಿಗೆ ಹೇಳಲು ನಮ್ಮಲ್ಲಿ ಸಾದ್ಯವಿಲ್ಲ ಹಣ ದುರುಪಯೋಗ ಮಾಡಿದವರು ತಮ್ಮ ತಮ್ಮ ವೈಯಕ್ತಿಕ ಸಾಲಗಳಾದರೂ ಕೊಡಲಿ ಎಂದು ಅಂತಿಮ ತಿಳುವಳಿಕೆ ನೋಟೀಸ್ ನೀಡಿದರೂ ಸಹ ಯಾವುದೇ ಕಾರಣಕ್ಕೆ ಆ ಹಣವನ್ನು ನಮ್ಮದಲ್ಲ ಇನ್ನೊಬ್ಬರದು ಎಂದು ಒಬ್ಬ ಮೇಲೆ ಒಬ್ಬರು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇದುವರೆಗೂ ಕೋಟ್ಯಾಂತರ ವ್ಯವಹಾರದ ಜೊತೆ ಸಾಲಕ್ಕೆ ಕೊಟ್ಟ ಹಣಕ್ಕೆ ದಾಖಲಾತಿ ಇರುವುದಿಲ್ಲ ಎಂದಿದ್ದಾರೆ.
ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಯಾರೂ ಸಹ ಅಪ್ಲಿಕೇಶನ್ ಫಾರ್ಮ್‍ಗಳಿಗೆ ಸಹಿ ಇದುವರೆಗೂ ಯಾರು ಸಹಿ ಮಾಡಿರುವುದಿಲ್ಲ ಕೆಲವು ಪಿ.ಡಿ.ಪಿ ಲೋನ್ ಮೀಟಿಂಗ್ ನಡವಳಿ ಪತ್ರಗಳು ಇರುವುದಿಲ್ಲ ಮಹಿಳಾ ಸ್ವ-ಸಹಾಯ ಸಂಘದ ಹೆಸರಿಗೆ ಮತ್ತು ಕೆಲವರ ಹೆಸರುಗಳಿಗೆ ಹಣವನ್ನು ಬಿಡಿಸಿ ನಂತರ ಎಲ್ಲವೂ ಸುಳ್ಳು ದಾಖಲೆ ಸೃಷ್ಟಿಸಿ ಅವರವರ ಜೇಬಿಗೆ ಆ ಹಣವನ್ನು ಇಳಿಸಿರುತ್ತಾರೆ. ಮತ್ತು ಇವರ ಆಸ್ತಿಗಳನ್ನು ವೃದ್ಧಸಿಕೊಂಡಿರುತ್ತಾರೆ. ಲೆಕ್ಕಾ ಮಾತ್ರ ಪೇಪರ್‍ನಲ್ಲಿ ಸುಳ್ಳು ತೋರಿಸಿ ತಮಗೆ ಆ ವ್ಯವಹಾರದಲ್ಲಿ ಸಂಬಂಧ ಇಲ್ಲವೆಂಬ ರೀತಿಯಲ್ಲಿ ಮಾಡಿರುತ್ತಾರೆ ಎಂದರು.
ಸಾರ್ವಜನಿಕ ಹಣವನ್ನು ಗುಳುಂ ಸ್ವಾಹ ಮಾಡಿದ ಸಿಬ್ಬಂದಿ ವಿರುದ್ದ ಕಾನೂನು ಮಾಡಿದ್ದರೂ ಸಹ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಿರುತ್ತಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಕೊಂಡ್ಲಹಳ್ಳಿ ನಡೆದ 10-10-2024 ರಂದು ನಡೆದ ವಾರ್ಷಿಕ ಮಹಾಸಭೆ 2023-24 ರಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರು ತಿರ್ಮಾನ ಮಾಡಿ ಸಹಿ ಮಾಡಿರುತ್ತಾರೆ. ಈ ಹಣ ದುರುಪಯೋಗಕ್ಕೆ ಮೂವರು ಸಿ.ಇ.ಒಗಳು ಮುಖ್ಯ ಕಾರ್ಯಾನಿರ್ವಾಹಣ ಅಧಿಕಾರಿಗಳಾದ ಇಮಾಂ ಹುಸೇನ್, ಎಸ್.ಜಯಣ್ಣ, ಜಿ.ಪೂರ್ಣಾಂಕಮೂರ್ತಿ) ಕಾರಣಕರ್ತರಾಗಿರುತ್ತಾರೆ ಎಂದು ದೂರಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಕುರುಬರ ಜಿಲ್ಲಾ ಸಂಘದ ಖಂಜಾಚಿ ಮೃತುಂಜಯ, ಗುರುಲಿಂಗಪ್ಪ, ವೆಂಕಟೇಶ್, ನಿಂಗರಾಜು, ಮಂಜುನಾಥ್, ಜಯ್ಯಮ್ಮ, ರೇಣುಕಮ್ಮ, ಕವಿತಾ, ಪಾರ್ವತಿ ಸೇರಿದಂತೆ ಇತರರು ಭಾಗವಹಿಸಿದ್ದರು.
