ಚಿತ್ರದುರ್ಗ: ಬುದ್ಧ ಗಯಾದ ಮಹಾಬೋಧಿ ಮಹಾವಿಹಾರದ ಮುಕ್ತಿ ಆಂದೋಲನ ಬೆಂಬಲಿಸಿ ಮಂಗಳವಾರ ಭಾರತೀಯ ಬೌದ್ದ ಮಹಾಸಭಾ ಚಿತ್ರದುರ್ಗಜಿಲ್ಲಾ ಶಾಖೆ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಿ ಅವರಿಗೆ ಮನವಿ ಸಲ್ಲಿಸಿದರು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಭಾರತೀಯ ಬೌದ್ದ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ ಪಾಟ್ನಾ ಗಾಂಧಿ ಮೈದಾನದಲ್ಲಿ ಮಹಾಬೋಧಿ
ಮಹಾವಿಹಾರವನ್ನು ವಿದೇಶಿ ಬ್ರಾಹ್ಮಣರ ಜಂಜಾಟದಿಂದ ಮುಕ್ತಿಗೊಳಿಸುವಂತೆ ಒತ್ತಾಯಿಸಿ ಸುಮಾರು ಐದು ಲಕ್ಷ ಜನರ ಬೃಹತ್
ಸಾರ್ವಜನಿಕ ಶಾಂತಿ ಸಭೆ ನಡೆಯುತ್ತಿದ್ದು, ಚಿತ್ರದುರ್ಗ ಜಿಲ್ಲೆಯಿಂದ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದರು.
ಮಹಾಬೋಧಿ ದೇವಾಲಯ ಕಾಯ್ದೆ-1949 ಜಾರಿಗೊಳಿಸುವ ಮೂಲಕ ಮನುವಾದಿ ಜನರು ಮಹಾ ವಿಹಾರವನ್ನು ಅಕ್ರಮವಾಗಿ
ಸ್ವಾಧೀನ ಪಡಿಸಿ ಕೊಂಡಿದ್ದಾರೆ. ಆದ್ದರಿಂದ ಮಹಂತ್ ಬ್ರಾಹ್ಮಣರ ಕೊಠಡಿಯೊಳಗೆ ಅಡಗಿರುವ ಬೌದ್ದ ರಾಜರ ಶಾಸನಗಳ ಜತೆಗೆ
ನೂರಾರು ಬುದ್ದನ ವಿಗ್ರಹಗಳನ್ನು ಮುಕ್ತಗೊಳಿಸಬೇಕು. ಬ್ರಾಹ್ಮಣರು ಜಗನ್ನಾಥ ಮಂದಿರ ನಿರ್ಮಿಸಿರುವ ಮಹಾಬೋಧಿ ಮಹಾವಿಹಾರ ಆವರಣದಲ್ಲಿರುವ ಭೂಮಿಯನ್ನು ಮುಕ್ತಗೊಳಿಸಬೇಕು. ಶಂಕರಚಾರ್ಯರ ಮಠದ ಹೆಸರಿನಲ್ಲಿ ಮಹಾಬೋಧಿ ವಿಹಾರದ ಮುಂಭಾಗ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಮುಕ್ತಗೊಳಿಸಬೇಕು ಎಂದರು.
ವಕೀಲ ಎನ್.ಚಂದ್ರಪ್ಪ ಮಾತನಾಡಿ ಹಿಂದೂಗಳ ಆರಾಧನಾ ಸ್ಥಳದ ಅಧಿಕಾರ ಹಿಂದೂಗಳಿಗೆ, ಮುಸ್ಲಿಂರ ಆರಾಧಾನ ಸ್ಥಳ ಅಧಿಕಾರ ಮುಸ್ಲಿಂರಿಗೆ, ಕ್ರೆöಸ್ತರ ಆರಾಧನಾ ಸ್ಥಳ ಅಧಿಕಾರ ಕೈಸ್ತರಿಗೆ ಆದರೆ ಬೌದ್ದರ ಆರಾಧನಾ ಸ್ಥಳ ಅಧಿಕಾರವೇಕೆ ಹಿಂದೂಗಳ ಕೈಗೆ? ಎಂದು ಪ್ರಶ್ನಿಸಿದರು. ಬುದ್ದ ಗಯಾದ ಬೌದ್ದವಿಹಾರ ಬೌದ್ದರದು ಎಂದರು.
ಡಿಎಸ್ಎಸ್(ಮೀಸಲಾತಿ) ರಾಜ್ಯಾಧ್ಯಕ್ಷ ತುರುವನೂರು ವೈ.ರಾಜಣ್ಣ ಪ್ರಧಾನಿ ಮಂತ್ರಿಗಳು ಬೌದ್ದರಿಗೆ ನ್ಯಾಯ ಕೊಡಿಸುವಲ್ಲಿ
ವಿಫಲರಾದರೆ ಅಂತರಾಷ್ಟ್ರೀಯ ನ್ಯಾಯಾಲಯದ ಮೂಲಕ ನ್ಯಾಯ ಪಡೆಯಲು ಬೌದ್ದರೆಲ್ಲಾರೂ ಪ್ರಯತ್ನಿಸಬೇಕಾಗುತ್ತದೆ ಎಂದರು.
ಪ್ರೋ.ಬಿ.ಕೃಷ್ಣಪ್ಪ ಬಣದ ಡಿಎಸ್ಎಸ್ ರಾಜ್ಯಾಧ್ಯಕ್ಷ ಪಾಂಡುರAಗಯ್ಯ ಮಾತನಾಡಿ ಬೌದ್ದ ವಿಹಾರದಲ್ಲಿ ಬೌದ್ದರಿಗೆ ಪ್ರಾರ್ಥನೆ ಮಾಡುವ ಹಕ್ಕನ್ನು ನಿರಾಕರಿಸುವ ಮೂಲಕ ಸಂವಿಧಾನ ಕೊಡ ಮಾಡಿರುವ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ. ಇಂದು ದೇಶದ ಮೂಲೆ ಮೂಲೆಯಲ್ಲಿ ಮೂಲನಿವಾಸಿಗಳು, ಅಂಬೇಡ್ಕರ್ ಅನುಯಾಯಿಗಳು ಬೌದ್ದ ಧರ್ಮ ವನ್ನು ತಮ್ಮದಾಗಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಬಗೆಹರಿಸಬೇಕಾದುದು ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಪ್ರಧಾನಿ ಮಂತ್ರಿ ಜವಾಬ್ದಾರಿಯಾಗಿದೆ ಎಂದರು.
ಭಾರತೀಯ ಬೌದ್ದ ಮಹಾಸಭಾ ಚಿತ್ರದುರ್ಗ, ಭೀಮಾ ಆರ್ಮಿ, ರಾಷ್ಟ್ರೀಯ ಪ್ರಬುದ್ದ ಸೇನೆ, ಕರ್ನಾಟಕ ದಲಿತ ಸಾಹಿತ್ಯ ಪರಿಷತ್,
ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಸೇರಿದಂತೆ ಎಲ್ಲಾ ದಲಿತ ಸಂಘಟನೆಗಳ ಮತ್ತು ಬೌದ್ದ ಸಂಘ ಸಂಸ್ಥೆಗಳ
ಪದಾಧಿಕಾರಿಗಳು ಸೇರಿ ನಗರದ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಸಲ್ಲಿಸಿ, ಅಲ್ಲಿಂದ ಶಾಂತಿಯುತ ಮೆರವಣಿಗೆ ಮೂಲಕ ಸಾಗಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
MRHS ರಾಜ್ಯ ಮುಖಂಡ ಹುಲ್ಲೂರು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಚನ್ನಗಿರಿ ಬಿಎಸ್ಐ ಅಧ್ಯಕ್ಷ ನೀತಿಗೆರೆ ಮಂಜಪ್ಪ, ಜನಶಕ್ತಿ ರಾಜ್ಯ ಕಾರ್ಯದರ್ಶಿ ಶಫೀವುಲ್ಲಾ, ರಮೇಶ್ ತೋರಣಗಟ್ಟೆ, ಬೆಸ್ಕಾಂ ತಿಪ್ಪೇಸ್ವಾಮಿ, ಬನ್ನೀಕೋಡ್ ರಮೇಶ್ ಇತರರಿದ್ದರು.