ಚಿತ್ರದುರ್ಗ: ಅ.29
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಕೆಟ್ಟು ಮೂರು ವರ್ಷಗಳೇ ಕಳೆದಿದ್ದು, ಶುದ್ಧ ನೀರಿನ ಘಟಕವನ್ನ ಸರಿಪಡಿಸುವಂತೆ ಪಪ್ಪಿ ಸ್ಪೂಡೆಂಟ್ ವಿಂಗ್ ಸದಸ್ಯರು ಜಿಲ್ಲಾ ಪಂಚಾಯತ್ ಸಿಇಒ ಡಾ.ಆಕಾಶ್‌ಗೆ ಬುಧವಾರ ಮನವಿ ಸಲ್ಲಿಸಿದರು.
ನೀರಿನ ಘಟಕ ಕೆಟ್ಟಿರುವ ಕಾರಣ ಹಣಸೆಕಟ್ಟೆ ಸೇರಿ ಸುತ್ತಮುತ್ತಲಿನ ಹಳ್ಳಿ ಜನರಿಗೆ ತೀವ್ರ ಸಮಸ್ಯೆ ಆಗಿದೆ. ಕುಡಿಯುವ ನೀರಿಗಾಗಿ ಎರಡು ಕಿಮೀ ದೂರ ಸಾಗಬೇಕಾಗಿದೆ. ಜೊತೆಗೆ ಕೊಳವೆಬಾವಿ ನೀರು ಕುಡಿಯುತ್ತಿದ್ದಾರೆ. ಫ್ಲೋರೈಡ್ ಹಾಗೂ ಕಲುಷಿತ ನೀರು ಸೇವನೆ ಪರಿಣಾಮ ಈ ಪ್ರದೇಶದಲ್ಲಿ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೂಲಿ ಸೇರಿ ವಿವಿಧ ಕೆಲಸಗಳಿಗೆ ತೆರಳುವ ಜನರು ಕುಡಿಯುವ ನೀರನ್ನು ತರುವ ಸವಾಲಿಗೆ ಸಿಲುಕಿದ್ದಾರೆ. ಈ ಸಂಬಂಧ ಸಮಸ್ಯೆ ಪರಿಹರಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರು ಸಮಸ್ಯೆ ಪರಿಹಾರವಾಗಿಲ್ಲ. ಆದ್ದರಿಂದ . ತಾವು ತಕ್ಷಣವೇ ಶುದ್ಧ ನೀರಿನ ಘಟಕದ ಹುಣಸೆಕಟ್ಟೆ ಗ್ರಾಮದಲ್ಲಿನ ಶುದ್ಧ ನೀರಿನ ಘಟಕ ದುರಸ್ತಿಗೊಳಿಸುವಂತೆ ಆಗ್ರಹಿಸಿ ಜಿಪಂ ಸಿಇಒ ಡಾ.ಆಕಾಶ್‌ಗೆ ಪಪ್ಪಿ ಸ್ಪೂಡೆಂಟ್ ವಿಂಗ್ ಸದಸ್ಯರು ಮನವಿ ಸಲ್ಲಿಸಿದರು.
ದುರಸ್ತಿಗೆ ಕ್ರಮಕೈಗೊಂಡು ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಅನೇಕ ವರ್ಷಗಳ ಸಮಸ್ಯೆ ಮುಕ್ತಿ ಹಾಡಬೇಕೆಂದು ಕೋರಿದರು. ವಿಂಗ್ ಅಧ್ಯಕ್ಷ ಎಸ್.ರವೀಂದ್ರ, ಎಂ.ಎಚ್.ರಫೀಕ್ ಇತರರಿದ್ದರು.
Views: 27