ಚಿತ್ರದುರ್ಗ ನ. 14
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ನಗರದಲ್ಲಿ ಸ್ವದೇಶಿ ಜಾಗರಣ ಮಂಚ್- ಕರ್ನಾಟಕ ಪ್ರಾಂತ ವತಿಯಿಂದ ನಡೆಯುತ್ತಿರುವ ಸ್ವದೇಶಿ ಮೇಳದ ಶುಕ್ರವಾರ ಮೂರನೇ ದಿನದ ಕಾರ್ಯಕ್ರಮದಲ್ಲಿ ದೇಸಿ ಕ್ರೀಡೆಗಳ ಭಾಗವಾಗಿ ಕಬಡ್ಡಿ ಕ್ರೀಡಾಕೂಟಕ್ಕೆ ಹೊಸದುರ್ಗದ ಭಗೀರಥ ಗುರುಪೀಠದ ಶ್ರೀ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿಯವರು ಚಾಲನೆ ನೀಡಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಸ್ವದೇಶಿ ಮೇಳದ ಸಹ ಸಂಘಟಕರಾದ ಜಿ.ಎಸ್. ಅನಿತ್ ಕುಮಾರ್, ಭಾ.ಜ.ಪ ದ ಹೊಸದುರ್ಗ ಮಂಡಲ ಅಧ್ಯಕ್ಷರಾದ ಅಣ್ಣಪ್ಪ ಸ್ವಾಮಿ , ಯುವ ಮುಖಂಡರಾದ ಜಿ.ಎಚ್. ಮೋಹನ್ ಕುಮಾರ್, ಮುದ್ದಾಪುರದ ಪಿ.ಒ. ಮಂಜುನಾಥ್, ಕಬಡ್ಡಿ ಸಂಘಟಕರಾದ ಕೆ.ಎಂ. ಪರಶುರಾಮ್, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕಬ್ಬಡಿ ತರಬೇತುದಾರರಾದ ಪಿ.ಸಿ.ಮುರುಗೇಶ್, ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಸುನಿತಾ ಮುರುಳಿ ಉಪಸ್ಥಿತರಿದ್ದರು.
Views: 15