ಕೊಹ್ಲಿಯೂ ಮಾಡಲು ಅಸಾಧ್ಯ ಎಂದ ವಿವಿಎಸ್ ಲಕ್ಷ್ಮಣ್’ರ ಆ ಶ್ರೇಷ್ಠ ದಾಖಲೆ ಮುರಿದೇಬಿಟ್ಟರು ಆರ್. ಅಶ್ವಿನ್!

R Ashwin Half-Century: ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ 78 ಎಸೆತಗಳನ್ನು ಎದುರಿಸಿ 8 ಬೌಂಡರಿಗಳ ಸಹಾಯದಿಂದ 56 ರನ್ ಗಳಿಸಿದರು.

R Ashwin Half-Century: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌’ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ಮೊದಲ ಇನಿಂಗ್ಸ್ 438 ರನ್‌’ಗಳಿಗೆ ಅಂತ್ಯಗೊಂಡಿತು. ಈ ಇನ್ನಿಂಗ್ಸ್‌’ನಲ್ಲಿ ಅಶ್ವಿನ್ ಬ್ಯಾಟಿಂಗ್ ಮಾಡುವಾಗ ದೊಡ್ಡ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ಕೂಡ ರನ್‌’ಗಳ ವಿಷಯದಲ್ಲಿ ಹಿಂದೆ ಸರಿಸಲು ಸಾಧ್ಯವಾಗದಂತಹ ಭಾರತದ ದಂತಕಥೆ ಬ್ಯಾಟ್ಸ್‌ಮನ್‌’ನನ್ನು ಅವರನ್ನು ಅಶ್ವಿನ್ ಹಿಂದಿಕ್ಕಿದ್ದಾರೆ.

ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ  ಟೀಂ ಇಂಡಿಯಾದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ 78 ಎಸೆತಗಳನ್ನು ಎದುರಿಸಿ 8 ಬೌಂಡರಿಗಳ ಸಹಾಯದಿಂದ 56 ರನ್ ಗಳಿಸಿದರು. ಇದರೊಂದಿಗೆ ಅವರು ಭಾರತದ ಪರ ನಾಲ್ಕನೇ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ವಿವಿಎಸ್ ಲಕ್ಷ್ಮಣ್ ಅವರ ದಾಖಲೆಯನ್ನು ಮುರಿದರು. ಅಶ್ವಿನ್ 6 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಬ್ಯಾಟಿಂಗ್ ಮಾಡುವಾಗ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ವಿಚಾರದಲ್ಲಿ ವಿವಿಎಸ್ ಲಕ್ಷ್ಮಣ್ (3108) ಅವರನ್ನು ಹಿಂದೆ ಬಿಟ್ಟಿದ್ದಾರೆ. ಅಶ್ವಿನ್ ಟೆಸ್ಟ್ ಕ್ರಿಕೆಟ್‌’ನಲ್ಲಿ ಒಟ್ಟು 3185 ರನ್ ಗಳಿಸಿದ್ದಾರೆ.

ವಿವಿಎಸ್ ಲಕ್ಷ್ಮಣ್ ಭಾರತದ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್. ಅವರು ಭಾರತದ ಪರ 134 ಪಂದ್ಯಗಳ 225 ಇನ್ನಿಂಗ್ಸ್‌ಗಳಲ್ಲಿ 8781 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಐದನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 8676 ರನ್ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್‌’ಗೆ ಸ್ಥಿರ ಆರಂಭ

ವೆಸ್ಟ್ ಇಂಡೀಸ್ ಆರಂಭಿಕರು ತಂಡಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಥಿರ ಆರಂಭ ನೀಡಿದರು. ಆರಂಭಿಕರಾದ ತೆಗ್ನಾರಾಯಣ ಚಂದ್ರಪಾಲ್ ಮತ್ತು ಕ್ರೇಗ್ ಬ್ರಾಥ್‌ವೈಟ್ ಮೊದಲ ವಿಕೆಟ್‌ಗೆ 71 ರನ್ ಜೊತೆಯಾಟ ನಡೆಸಿದರು. ಆದರೆ, ಚಂದ್ರಪಾಲ್ ಅಶ್ವಿನ್ ಕೈಯಲ್ಲಿ ಜಡೇಜಾಗೆ ಕ್ಯಾಚ್ ನೀಡಿದರು. ಅವರ ಖಾತೆಯಲ್ಲಿ 33 ರನ್‌ಗಳಿದ್ದವು. ಇದಾದ ಬಳಿಕ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪರ ಪದಾರ್ಪಣೆ ಮಾಡುತ್ತಿದ್ದ ಕಿರ್ಕ್ ಮೆಕೆಂಜಿ, ನಾಯಕ ಬ್ರಾಥ್ ವೈಟ್ ಜೊತೆಗೂಡಿ ದಿನದಾಟದ ಅಂತ್ಯದವರೆಗೂ ಯಾವುದೇ ವಿಕೆಟ್ ಪತನವಾಗಲು ಬಿಡಲಿಲ್ಲ. ಬ್ರಾಥ್‌ವೈಟ್ (37) ಮತ್ತು ಮೆಕೆಂಜಿ (14) ರನ್ ಗಳಿಸಿ ಅಜೇಯರಾಗಿದ್ದಾರೆ. ವೆಸ್ಟ್ ಇಂಡೀಸ್ ಇನ್ನೂ ಭಾರತಕ್ಕಿಂತ 352 ರನ್ ಹಿಂದಿದೆ.

ಕೊಹ್ಲಿ ಶತಕದ ನೆರವು:

ಕೊಹ್ಲಿಯ ಅದ್ಭುತ ಶತಕದ ನೆರವಿನಿಂದ ಭಾರತದ ಬ್ಯಾಟ್ಸ್‌ಮನ್‌’ಗಳು ಮೊದಲ ಇನ್ನಿಂಗ್ಸ್‌ನಲ್ಲಿ 438 ರನ್‌ಗಳನ್ನು ತಲುಪುವಲ್ಲಿ ಯಶಸ್ವಿಯಾದರು. ತಂಡದ ಪರ ಅತಿ ಹೆಚ್ಚು ರನ್ ಗಳಿಸಿದವರು ವಿರಾಟ್ ಕೊಹ್ಲಿ. ಎರಡನೇ ದಿನ 121 ರನ್‌ಗಳ ಇನ್ನಿಂಗ್ಸ್‌ ಆಡಿ ಅದ್ಭುತ ಶತಕ ಗಳಿಸಿದರು. ಇದಲ್ಲದೇ ನಾಯಕ ರೋಹಿತ್ ಶರ್ಮಾ (80), ಯಶಸ್ವಿ ಜೈಸ್ವಾಲ್ (57), ರವೀಂದ್ರ ಜಡೇಜಾ (61) ಮತ್ತು ರವಿಚಂದ್ರನ್ ಅಶ್ವಿನ್ (56) ಅರ್ಧಶತಕ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ರನ್‌ಗಳ ವಿಷಯದಲ್ಲಿ ಗಣನೀಯ ಕೊಡುಗೆ ನೀಡಿದರು.

Source : https://zeenews.india.com/kannada/sports/r-ashwin-breaks-vvs-laxman-record-and-become-no-3rd-batsman-who-scores-most-runs-at-no-6-147307

Leave a Reply

Your email address will not be published. Required fields are marked *