ಮಾರ್ಚ್ 25 ಚಿತ್ರದುರ್ಗದಲ್ಲಿ ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ : ಆರ್.ಪ್ರಕಾಶ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 14 : ರಾಜ್ಯ ಸರ್ಕಾರದ ಮಹತ್ವಾಂಕ್ಷೆಯ ಯೋಜನೆಯಾದ ಗ್ಯಾರೆಂಟಿ ಯೋಜನೆಯಿಂದ ಹಲವಾರು ಜನರ ಬದುಕು ಉತ್ತಮವಾಗಿದೆ, ಜನರಿಗೆ ಸಹಕಾರಿಯಾಗಿದೆ, ಇದಕ್ಕೆ ಮತ್ತಷ್ಟು ಉತ್ತೇಜನ ನೀಡಲು ಈ ಯೋಜನೆಯಿಂದ ಹೂರಗಡೆ ಉಳಿದಿರುವ ಜನತೆಯನ್ನು ಈ ಯೋಜನೆಯ ಒಳಗಡೆಗೆ ತರುವ ಪ್ರಯತ್ನವನ್ನು ಮಾಡಲಾಗುವುದು ಈಗ ಈ ಯೋಜನೆಯಡಿ ಫಲಾನುಭವಿಗಳಾದವರ ಚಿತ್ರದುರ್ಗ ತಾಲ್ಲೂಕು ಸಮಾವೇಶವನ್ನು ನಡೆಸಲು ತಾಲ್ಲೂಕು ಸಮಿತಿ ಮುಂದಾಗಿದೆ ಎಂದು ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ
ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಆರ್.ಪ್ರಕಾಶ್ ಹೇಳಿದರು.

ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಚಿತ್ರದುರ್ಗ ತಾಲ್ಲೂಕು ಗ್ಯಾರೆಂಟಿ ಸಮಿತಿಯ ಸಭೆಯಲ್ಲಿ
ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಉತ್ತಮವಾದ ಕೆಲಸವನ್ನು ಮಾಡಿದೆ ಗ್ಯಾರೆಂಟಿಯನ್ನು ಜಾರಿ
ಮಾಡುವುದರ ಮೂಲಕ ಹಲವಾರು ಜನರ ಬದುಕಿಗೆ ದಾರಿ ದೀಪವಾಗಿದೆ. ಬಡವರ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸಿದೆ.
ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕಿದೆ ಈ ನಿಟ್ಟಿನಲ್ಲಿ ಮಾರ್ಚ್ 25 ರಂದು ಚಿತ್ರದುರ್ಗದಲ್ಲಿ ಚಿತ್ರದುರ್ಗ ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಈ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿಗಳು,
ರಾಜ್ಯ ಗ್ಯಾರೆಂಟಿ ಯೋಜನೆಯ ರಾಜ್ಯಾಧ್ಯಕ್ಷರು ಈ ಯೋಜನೆಯ ಐದು ಇಲಾಖೆಯ ಸಚಿವರು, ಚಿತ್ರದುರ್ಗ ತಾಲ್ಲೂಕಿನ ಶಾಸಕರು
ಭಾಗವಹಿಸಿದ್ದಾರೆ. ಈ ಸಮಾವೇಶವನ್ನು ಮಾಡುವುದರ ಮೂಲಕ ಶಾಸಕರಾದ ವಿರೇಂದ್ರ ಪಪ್ಪಿಯವರಿಗೂ ಹಾಗೂ ನಮ್ಮ
ಸರ್ಕಾರಕ್ಕೆ ಉತ್ತಮವಾದ ಹೆಸರನ್ನು ತರಬೇಕಿದೆ. ಇದಕ್ಕೆ ತಾಲ್ಲೂಕಿನ ಐದು ಇಲಾಖೆಗಳ ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ
ಎಂದರು.

Leave a Reply

Your email address will not be published. Required fields are marked *