Ranji Trophy 2022-23: 8 ವಿಕೆಟ್​ ಉರುಳಿಸಿದ ದೀಪಕ್: 49 ರನ್​ಗೆ ಆಲೌಟ್

Deepak Dhapola

Ranji Trophy 2022-23: ರಣಜಿ ಟ್ರೋಫಿಯ ಮೂರನೇ ಸುತ್ತಿನ ಪಂದ್ಯಗಳು ಮಂಗಳವಾರದಿಂದ ಆರಂಭಗೊಂಡಿವೆ. ಡೆಹ್ರಾಡೂನ್‌ನ ಅಭಿಮನ್ಯು ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಎಲೈಟ್ ಗ್ರೂಪ್-ಎ ನಲ್ಲಿನ ಪಂದ್ಯದಲ್ಲಿ ಉತ್ತರಾಖಂಡ್ ತಂಡದ ಬೌಲರ್​ ದೀಪಕ್ ಧಾಪೋಲಾ 8 ವಿಕೆಟ್ ಕಬಳಿಸಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹಿಮಾಚಲ ಪ್ರದೇಶ್ ತಂಡದ ನಾಯಕ ರಿಷಿ ಧವನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್​ ಆರಂಭಿಸಿದ ಹಿಮಾಚಲ ಪ್ರದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಉತ್ತರಾಖಂಡ್ ಬೌಲರ್​ಗಳು ಯಶಸ್ವಿಯಾದರು.

ಹಿಮಾಚಲ ಪ್ರದೇಶ್ ತಂಡವು ರನ್​ ಖಾತೆ ತೆರೆಯುವ ಮುನ್ನವೇ ವಿಕೆಟ್ ಉರುಳಿಸಿ ದೀಪಕ್ ಧಾಪೋಲಾ ಮೊದಲ ಯಶಸ್ಸು ತಂದುಕೊಟ್ಟರು. ಮೊದಲ ಯಶಸ್ಸಿನ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ಮೂರು ವಿಕೆಟ್ ಉರುಳಿಸಿದ ದೀಪಕ್ ಹಿಮಾಚಲ ಪ್ರದೇಶ ತಂಡಕ್ಕೆ ಆರಂಭಿಕ ಶಾಕ್ ನೀಡಿದರು. ಪರಿಣಾಮ ಕೇವಲ 26 ರನ್​ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಅಂಕಿತ್ ಕಲ್ಸಿ 26 ರನ್​ ಬಾರಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಪ್ರಯತ್ನಕ್ಕೆ ಕೈ ಹಾಕಿದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಅಭಯ್ ನೇಗಿ 2 ವಿಕೆಟ್ ಪಡೆದರು. ಆ ಬಳಿಕ ಮತ್ತೆ ಬೌಲಿಂಗ್ ಮುಂದುವರೆಸಿದ ದೀಪಕ್ ಧಾಪೋಲಾ 5 ಎಸೆತಗಳಲ್ಲಿ 4 ವಿಕೆಟ್ ಉರುಳಿಸಿ ಹಿಮಾಚಲ ತಂಡವನ್ನು ಕೇವಲ 49 ರನ್​ಗೆ ಆಲೌಟ್ ಮಾಡಿದರು. ಉತ್ತರಾಖಂಡ್ ತಂಡದ ಭರ್ಜರಿ ಬೌಲಿಂಗ್ ದಾಳಿ ನಡೆಸಿದ ದೀಪಕ್ ಧಾಪೋಲ  8.3 ಓವರ್​ನಲ್ಲಿ  8 ವಿಕೆಟ್ ಕಬಳಿಸಿ ಮಿಂಚಿದರು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಬೀಸಿರುವ ಉತ್ತರಾಖಂಡ್ ತಂಡದ ಪರ ಆದಿತ್ಯ ತಾರೆ ಅಜೇಯ 91, ಜೀವನ್​ಜೋತ್ ಸಿಂಗ್ (45), ಅಭಯ್ ನೇಗಿ ಅಜೇಯ 48 ರನ್​ ಬಾರಿಸಿದ್ದಾರೆ. ಪರಿಣಾಮ ಮೊದಲ ದಿನದಾಟದ ಅಂತ್ಯಕ್ಕೆ ಉತ್ತರಾಖಂಡ್ ತಂಡವು 6 ವಿಕೆಟ್ ನಷ್ಟಕ್ಕೆ 295 ರನ್​ ಕಲೆಹಾಕಿದೆ. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ 246 ರನ್​ಗಳ ಮುನ್ನಡೆ ಸಾಧಿಸಿದೆ.

ಉತ್ತರಾಖಂಡ್ ಪ್ಲೇಯಿಂಗ್ 11: ಪ್ರಿಯಾಂಶು ಖಂಡೂರಿ , ಜೀವನ್‌ಜೋತ್ ಸಿಂಗ್ (ನಾಯಕ) , ಕುನಾಲ್ ಚಂಡೇಲಾ , ಸ್ವಪ್ನಿಲ್ ಸಿಂಗ್ , ಆದಿತ್ಯ ತಾರೆ ( ವಿಕೆಟ್ ಕೀಪರ್ ) , ಅಖಿಲ್ ರಾವತ್ , ಅಭಯ್ ನೇಗಿ , ಮಯಾಂಕ್ ಮಿಶ್ರಾ , ಆರ್ಯನ್ ಶರ್ಮಾ , ಅಗ್ರಿಮ್ ತಿವಾರಿ , ದೀಪಕ್ ಧಾಪೋಲಾ

ಇದನ್ನೂ ಓದಿ: IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…

ಹಿಮಾಚಲ ಪ್ರದೇಶ್ ಪ್ಲೇಯಿಂಗ್ 11: ರಾಘವ್ ಧವನ್ , ಪ್ರಶಾಂತ್ ಚೋಪ್ರಾ , ಅಂಕಿತ್ ಕಲ್ಸಿ , ಅಮಿತ್ ಕುಮಾರ್ , ಆಕಾಶ್ ವಸಿಷ್ಟ್ , ರಿಷಿ ಧವನ್ (ನಾಯಕ) , ಪ್ರವೀಣ್ ಠಾಕೂರ್ (ವಿಕೆಟ್ ಕೀಪರ್) , ಮಯಾಂಕ್ ದಾಗರ್ , ವೈಭವ್ ಅರೋರಾ , ​​ಗುರ್ವಿಂದರ್ ಸಿಂಗ್ , ಪಂಕಜ್ ಜೈಸ್ವಾಲ್.

source https://tv9kannada.com/sports/cricket-news/ranji-trophy-2022-23-deepak-dhapola-claims-8-wicket-vs-himachal-pradesh-kannada-news-zp-au50-491803.html

Leave a Reply

Your email address will not be published. Required fields are marked *