ಬರೋಬ್ಬರಿ 4 ವರ್ಷಗಳ ಬಳಿಕ ಐಪಿಎಲ್ ಆರಂಭಕ್ಕೆ ರಂಗು : ಕ್ರೇಜ್ ನೀಡಲಿದ್ದಾರೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ

ಐಪಿಎಲ್ ಅಂದ್ರೆನೇ ಅದೊಂಥರ ಕಿಕ್ ಸ್ಟಾರ್ಟ್. ಇಂಡೋ – ಆಸಿಸ್ ಏಕದಿನ ಪಂದ್ಯ ಅಂತ್ಯಗೊಂಡ ಬೆನ್ನಲ್ಲೇ ಈಗ ಎಲ್ಲರ ಚಿತ್ತ ಐಪಿಎಲ್ ನತ್ತ ನೆಟ್ಟಿದೆ. ಆ ಕುತೂಹಲಕ್ಕೆ ತಕ್ಕಂತೆ ಇದೀಗ ಆರಂಭದಲ್ಲಿಯೇ ಕಿಕ್ ಸಿಗಲಿದೆ ಅನ್ನೋದಂತು ಕನ್ಫರ್ಮ್ ಆಗಿದೆ. ಜಬರ್ದಸ್ತ್ ಎಂಟರ್ಟೈನ್ಮೆಂಟ್ ಕೊಡುವುದಕ್ಕೆ ಕೊಡಗಿಮ ಕುವರಿ ರಶ್ಮಿಕಾ ಮಂದಣ್ಣ ರೆಡಿಯಾಗಿದ್ದಾರೆ.

ಈ ಬಾರಿ ಅಹಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ಮಾರ್ಚ್ 31ಕ್ಕೆ ಪಂದ್ಯ ಆರಂಭವಾಗಲಿದೆ‌. ಮೊದಲ ದಿನ ಗುಹರಾತ್ ವರ್ಸಸ್ ಚೆನ್ನೈ ಮ್ಯಾಚ್ ನಡೆಯಲಿದೆ. ಅದಕ್ಕೂ ಮುನ್ನ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡಿ ರಂಜಿಸಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಡೆದ ಮಹಿಳಾ ಐಪಿಎಲ್ ಆರಂಭಕ್ಕೂ ಮುನ್ನ ನಟಿ ಕಿಯಾರ ಅಡ್ವಾಣಿ ಹಾಗೂ ಕೃತಿ ಸನೋನ್ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದರು. ಈ ಬಾರಿ ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಟ್ರೀಟ್ ನೀಡಲಿದ್ದಾರೆ.

ಇನ್ನು ಐಪಿಎಲ್ ಶುರುವಾದಾಗಿನಿಂದ ಅಂದ್ರೆ 2008ರಿಂದಾನೂ ಆರಂಭ ಜಬರ್ದಸ್ತ್ ಆಗಿಯೇ ಮೂಡಿ ಬಂದಿದೆ. 2019ರಲ್ಲಿ ತಮನ್ನಾ ಬಾಟೀಯಾ ಡ್ಯಾನ್ಸ್ ಮಾಡಿ ಕಿಕ್ ಕೊಟ್ಟಿದ್ದಷ್ಟೇ ಬಳಿಕ ಐಪಿಎಲ್ ಆರಂಭ ಗ್ರ್ಯಾಂಡ್ ಆಗಿ ನಡೆದಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಪುಲ್ವಾಮ ದಾಳಿಯಲ್ಲಿ ನಮ್ಮ ಯೋಧರನ್ನು ಕಳೆದುಕೊಂಡಿದ್ದು, ಬಳಿಕ ಕೊರೊನಾ ಸಂಕಷ್ಟ ಈ ಎಲ್ಲಾ ಸಮಸ್ಯೆಯಿಂದ ಐಪಿಎಲ್ ಆರಂಭದ ರಂಗು ಮರೆಮಾಚಿತ್ತು. ಆದರೆ ಈ ಬಾರಿ ಎಲ್ಲವೂ ಸರಿ ಇದ್ದು, ಐಪಿಎಲ್ ಆರಂಭ ಕೂಡ ಜಬರ್ದಸ್ತ್ ಆಗಿರಲಿದೆ.

The post ಬರೋಬ್ಬರಿ 4 ವರ್ಷಗಳ ಬಳಿಕ ಐಪಿಎಲ್ ಆರಂಭಕ್ಕೆ ರಂಗು : ಕ್ರೇಜ್ ನೀಡಲಿದ್ದಾರೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/UsdFHGP
via IFTTT

Leave a Reply

Your email address will not be published. Required fields are marked *