RCB Playing XI vs LSG: ಹ್ಯಾಜಲ್​ವುಡ್ ಅಲ್ಲ: ಲಖನೌ ವಿರುದ್ಧ ಗೆಲ್ಲಲು ಆರ್​ಸಿಬಿ ಮಾಸ್ಟರ್ ಪ್ಲಾನ್: ಆ ಪ್ಲೇಯರ್ ಇಂದು ಕಣಕ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೇಂಟ್ಸ್ ನಡುವೆ ಹೈವೋಲ್ಟೇಜ್ ಕದನ ಏರ್ಪಡಿಸಲಾಗಿದೆ. ಲಖನೌದ ಏಕಾನ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಪಾಯಿಂಟ್ ಟೇಬಲ್​ನಲ್ಲಿ ಮೇಲಕ್ಕೇರಲು ಆರ್​ಸಿಬಿಗೆ ಈ ಪಂದ್ಯ ಮಹತ್ವದ್ದಾಗಿದೆ.ಈಗಾಗಲೇ ಆಡಿರುವ ಎಂಟು ಪಂದ್ಯಗಳ ಪೈಕಿ ತಲಾ ನಾಲ್ಕು ಗೆಲುವು, ನಾಲ್ಕು ಸೋಲು ಕಂಡಿರುವ ಆರ್​ಸಿಬಿ ಪ್ಲೇ ಆಫ್ ಪ್ರವೇಶಿಸಬೇಕಾದರೆ ಮುಂಬರುವ ಪಂದ್ಯ ಮಹತ್ವದ್ದಾಗಿದೆ. ಅಲ್ಲದೆ ಮೈನಸ್ ರನ್​ರೇಟ್​ನಲ್ಲಿರುವುದನ್ನು ಪ್ಲಸ್ ಆಗಿ ಪರಿವರ್ತಿಸಬೇಕಿದೆ.ಹೀಗೆ ಅನೇಕ ಕಾರಣಗಳಿಗೆ ಆರ್​ಸಿಬಿಗೆ ಇಂದಿನ ಎಲ್​ಎಸ್​ಜಿ ವಿರುದ್ಧದ ಪಂದ್ಯ ಗೆಲ್ಲಲೇ ಬೇಕಾಗಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ಕೂಡ ರೂಪಿಸಿದೆ. ಇಂದು ಬ್ಯಾಟಿಂಗ್​ನಲ್ಲಿ ಬಲ ತುಂಬಲು ಹೊಸ ಆಟಗಾರ ಕಣಕ್ಕಿಳಿಯುವ ಸಾಧ್ಯತೆ ಇದೆ.ಆರ್​ಸಿಬಿ ತಂಡ ಬ್ಯಾಟಿಂಗ್​ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಮಾತ್ರ ನೆಚ್ಚಿಕೊಂಡಿದೆ. ಇವರು ಬೇಗನೆ ಔಟಾದರೆ ತಂಡದ ಮೊತ್ತ ಮೂರಂಕಿ ದಾಟುವುದು ಅನುಮಾನ. ಹೀಗಾಗಿ ಮಿಚೆಲ್ ಬ್ರೆಸ್​ವೆಲ್​ಗೆ ಅವಕಾಶ ನೀಡುವ ಸಾಧ್ಯತೆ ಇದೆ.ಐಪಿಎಲ್ 2023 ಆರಂಭಕ್ಕೂ ಮುನ್ನ ಆರ್​ಸಿಬಿ ಪರ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ್ದ ನ್ಯೂಜಿಲೆಂಡ್​ನ ಮಿಚೆಲ್ ಬ್ರೆಸ್​ವೆಲ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಬಲ ತುಂಬಲು ಆರ್​ಸಿಬಿ ಇವರನ್ನು ಪ್ಲೇಯಿಂಗ್ ಇಲೆವೆನ್​ನಲ್ಲಿ ಕಣಕ್ಕಿಳಿಸವ ಪ್ಲಾನ್​ನಲ್ಲಿದೆ.ಇನ್ನು ಬೌಲಿಂಗ್​ನಲ್ಲಿ ಆರ್​ಸಿಬಿ ಮಾರಕವಾಗಿ ಗೋಚರಿಸುತ್ತಿಲ್ಲ. ಮೊಹಮ್ಮದ್ ಸಿರಾಜ್ ಮಾತ್ರ ಅಪಾಯಕಾರಿ ಆಗಿದ್ದಾರೆ. ಹರ್ಷಲ್ ಪಟೇಲ್ ದುಬಾರಿ ಆಗುತ್ತಿದ್ದಾರೆ. ಜೋಶ್ ಹ್ಯಾಜಲ್​ವುಡ್ ಆಡುವ ಬಗ್ಗೆಯೂ ಮಾಹಿತಿಯಿಲ್ಲ.ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ XI vs ಎಲ್​ಎಸ್​ಜಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಬ್ರೆಸ್​ವೆಲ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ಕರ್ಣ್ ಶರ್ಮಾ, ವನಿಂದು ಹಸರಂಗ, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್.

source https://tv9kannada.com/photo-gallery/cricket-photos/michael-bracewel-likely-to-play-today-here-is-the-rcb-playing-xi-vs-lsg-ipl-2023-match-kannada-sports-news-vb-au48-567395.html

Leave a Reply

Your email address will not be published. Required fields are marked *