ಅಜಿಂಕ್ಯಾ ರಹಾನೆ ಹಾಗೂ ಆರಂಭಿಕ ಬ್ಯಾಟರ್ ಸುನಿಲ್ ನರೈನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಸಿಡಿಸಿದೆ.

ಕಲ್ಕತ್ತಾದ ಈಡೆನ್ ಗಾರ್ಡನ್‌ಲ್ಲಿ (Eden Garden) ಇಂದಿನಿಂದ 18ನೇ ಸೇಸನ್‌ನ ಐಪಿಎಲ್ (IPL) ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೊಲ್ಕತ್ತಾ ನೈಟ್ ರೈಡರ್ಸ್ (Kolkata Night Riders) ತಂಡ ಅಜಿಂಕ್ಯಾ ರಹಾನೆ (Ajinkya Rahane) ಹಾಗೂ ಆರಂಭಿಕ ಬ್ಯಾಟರ್ ಸುನಿಲ್ ನರೈನ್ (Sunil Narine) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಸಿಡಿಸಿದೆ. ಆ ಮೂಲಕ ಉದ್ಘಾಟನಾ ಪಂದ್ಯದಲ್ಲೇ ಆರ್‌ಸಿಬಿಗೆ 175 ರನ್‌ಗಳ ಬಿಗ್ ಟಾರ್ಗೆಟ್ ನೀಡಿದೆ.
ಅಬ್ಬರಿಸಿದ ಅಜಿಂಕ್ಯಾ
ಐಪಿಎಲ್ 2025ರ ಹರಾಜಿನಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಅವರನ್ನು ಯಾವುದೇ ತಂಡ ತಂಡಕ್ಕೆ ಸೇರಿಸಿಕೊಳ್ಳಲು ಮುಂದಾಗಲಿಲ್ಲ ಆರಂಭದಲ್ಲಿ ಅನ್‌ಸೋಲ್ಡ್ ಆಗಿದ್ದ ಅವರನ್ನು ಶಾರುಖ್ ಖಾನ್ ಮಾಲಿಕತ್ವದ ಹಾಲಿ ಚಾಂಪಿಯನ್ ಕೆಕೆಆರ್ ತಂಡ ಮಣೆ ಹಾಕಿತು. ಮಾತ್ರವಲ್ಲ ಡೊಮೆಸ್ಟಿಕ್ ಟೂರ್ನಿಗಳಲ್ಲಿ ನಾಯಕನಾಗಿ ಅಬ್ಬರಿಸಿದ್ದ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿತು. ತಮಗೆ ಕೊಟ್ಟ ಜವಾಬ್ದಾರಿ ಸಮರ್ಥವಾಗಿ ಎದುರಿಸಿದ ರಹಾನೆ ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದರು. ಅವರು 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 56 ರನ್ ಸಿಡಿಸಿ ಔಟ್ ಆದರು.
ಆರಂಭಿಕ ಆಘಾತದ ನಡುವೆ ಚೇತರಿಕೆ
ಆರಂಭೀಕ ಆಟಗಾರ ಡಿ ಕಾಕ್ ಕೇವಲ 4 ರನ್ ಸಿಡಿಸಿ ಔಟ್ ಆದಾಗ ರಹಾನೆ ಜೊತೆಗೂಡಿದ ಇನ್ನೋರ್ವ ಆರಂಭಿಕ ಬ್ಯಾಟರ್ ಸುನಿಲೈ ನರೈನ್ 26 ಎಸೆತಗಳಲ್ಲಿ 44 ರನ್ ಸಿಡಿಸಿದರು. ಈ ಇಬ್ಬರ ಅದ್ಭುತ ಆಟದ ನೆರವಿನಿಂದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 174 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಗುರಿಯನ್ನು ಆರ್‌ಸಿಬಿ ಹೇಗೆ ಚೇಸ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕೃನಾಲ್ ಕಮಾಲ್
ಇನ್ನೂ ಬೌಲಿಂಗ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ ಜಾದೂ ಮಾಡಿದರು. ಅವರು 4 ಓವರ್ ಬೌಲಿಂಗ್ ಮಾಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಮಾತ್ರವಲ್ಲ ಕೆಕೆಆರ್‌ನ ಬೃಹತ್ ರನ್ ಸಿಡಿಸುವ ಯೋಜನೆಗೆ ಕೊಂಚ ಅಡ್ಡಗಾಲಾದರು. ಇವರ ಜೊತೆ ಜೋಶ್ ಹೇಜಲ್ವುಡ್ 2, ರಸಿಖ್ ದಾರ್ ಸಲಾಮ್ 1 ವಿಕೆಟ್ ಪಡೆದುಕೊಂಡರು. ಯಶ್ ದಯಾಳ್ ಹಾಗೂ ಸುಯಾಶ್ ಶರ್ಮಾ ಕೂಡ ಒಂದೊಂದು ವಿಕೆಟ್ ಪಡೆದುಕೊಂಡರು
Source: Kannada News 18